ಕರಗುವ ಇರುಳಿನ ಹಣೆಯಲ್ಲಿ

ಕರಗುವ ಇರುಳಿನ ಹಣೆಯಲ್ಲಿ
ಮೂಡಲ ಗಿರಿಯ ಮಣೆಯಲ್ಲಿ
ಹೂಳೆಯುವ ರತ್ನದ ಹಣತೆಯನು
ಹಚ್ಚುವರಾರು ಮರೆಯಲ್ಲಿ?

ಬೆಟ್ಟವು ಬಾನಿನ ಕಡೆಗೇಕೆ
ತೊರೆಗಳು ತಗ್ಗಿನ ಕಡೆಗೇಕೆ?
ನಭದಲಿ ತೇಲುವ ನೀಲಿ ಹಂಡೆಗಳು
ಮಣ್ಣಿಗೆ ಉರುಳುವುದೇತಕ್ಕೆ?

ಹೂವನು ಚಿಮ್ಮುವ ಮುದವೇನು
ಬಾಡಿಸಿ ಕೊಲ್ಲುವ ಕುದಿ ಏನು?
ಹಗಲಲಿ ಬಿಚ್ಚಿ ಇರುಳಲಿ ಮುಚ್ಚುವ
ಕಣ್ಣುಮುಚ್ಚಾಲೆ ಕಥೆಯೇನು?

ಯಾರು, ಏನು, ಏತಕ್ಕೆ
ತಿಳಿಯದ ಮಾಯಾವ್ಯೂಹಕ್ಕೆ
ಎಲ್ಲಿವೆ ಆದಿ ಅಂತ್ಯಗಳು
ಉತ್ತರ ಸಿಗದಾ ಗೂಢಕ್ಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೪೮
Next post ಹಸಿದವರಿಗೂ ಎರಡು ಎಲೆಯಿರಲಿ

ಸಣ್ಣ ಕತೆ

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…