ಎಲ್ಲ ಪ್ರೀತಿಯ ಮನಸ್ಸುಗಳೇ
ನನ್ನದೊಂದು ಮಾತು
ಸಾವಧಾನವಿರಲಿ

ಬೇಡಲು ಬಂದಿಲ್ಲ
ನಿಮ್ಮ
ಅನ್ನ ಬಟ್ಟೆ ಬರೆ

ಕೇಳುವುದಿಲ್ಲ
ನಿಮ್ಮ
ಹಣ ಒಡವೆ ವಸ್ತು

ಲಪಟಾಯಿಸಲಾರೆ
ನಿಮ್ಮ
ಆಸ್ತಿ ಅಂತಸ್ತು ಅಹಮಿಕೆ

ವಂಚಿಸುವುದೇ ಇಲ್ಲ
ನಿಮ್ಮ
ಹೆಂಡತಿ ಮಕ್ಕಳು ನಿಮ್ಮನ್ನು

ನನ್ನದೊಂದೇ ಬೇಡಿಕೆ
ಇರಲಿ ಭೂಮಿಯಂತೆ
ತಾಯಿಗುಣ

ನೀವು ಕುಳಿತ ಸಾಲಿನಲ್ಲೇ
ಹಸಿದವರಿಗೂ ಎರಡು
ಎಲೆಯಿರಲಿ

ಎಲ್ಲರ ಹೊಟ್ಟೆ ತಣ್ಣಗಿರಲಿ
*****