
ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು...
ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ ಪುಷ್ಪ ಅರಳಿವೆ ಗಂಧವಿಲ್ಲದ ಹೂ ಇವ...
ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ ಕೆರೆ ತುಂಬಿ ತುಳುಕಿ ಬೆಟ್ಟ ಬಯಲು ಜಲಪಾತ ಬಳುಕಿ ಬ...
ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾ...
ಸೂಳೆಕುದುರೆಯ ಬಿಟ್ಟು ಮೂಜಗದಿ ಸಂಚರಿಸಿದೆವು, ಕಟಿ ಹಾಕುವ ಕಲಿಯು ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ ಗಂಡಸಿನ ಹೃದಯ `ಹೂಂಕಾರ’! ಮುದುಕನಾಹುತಿ ಕೊಟ್ಟು ಹುಡುಗಿಯ ತಲೆಬುರುಡಿಯನು ಕೆಂಪು ಬಟ್ಟೆಯೊಳದ್ದಿ ಪೂರ್ವ-ಪಶ್ಚಿಮದಿ ಮೆರೆಯಿಸಿ...
ಕಾಮನ ಬಿಲ್ಲು ಹಿಡಿಯಲಾಗದ ನೋವು ನೀನು ಮುಂಜಾನೆ ಕಿರಣಗಳ ಹೊತ್ತು ತಂದಾಗ, ಕರಗಿತು ನದಿಯಾಗಿ ಅದ್ಭುತ ಸೌಂದರ್ಯವತಿ. ನನ್ನೊಳಗಿಳಿದ ಜ್ಞಾನ, ಬೆಳಕಿನ ಹಣತೆ ಮತ್ತೆ ಹೂವರಳಿದೆ ದಿನವೆಲ್ಲಾ ಘಮ ಘಮ. ಮಡಿಕೆಯಲ್ಲಿ ತುಂಬಿಟ್ಟ ನೀರು ತಣ್ಣಗೆ ಆಗಿ ಗದ್ದೆಯ...
ಭಾರತವಿದು ಭಾರತ ನಮ್ಮಲ್ಲಿದೆ ಒಮ್ಮತ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲಾ ಒಂದೆ ಎನ್ನುತ || ಸತ್ಯ ಧರ್‍ಮ ತ್ಯಾಗ ಶಾಂತಿ ನಮಗಿದುವೆ ಸಮ್ಮತ ವೀರ ಧೀರ ಕಲಿಗಳ ನೆಲೆಬೀಡು ಎನ್ನುತ || ಗಂಧ ಕುಸುಮ ಅಂದ ಚೆಂದ ಪ್ರಕೃತಿ ಚೆಲುವು ಬೀರುತ ಸುಂದರ ...
ಲೋಕಾಂತ ಎನಗೆ ಬೇಡ ಬೇಕು ಏಕಾಂತ ಧ್ಯಾನ ಎನಗೆಬೇಕು ಕಾಣುವೆ ರಜನಿಕಾಂತ ಕಾಮ ಕಾಂಚನಗಳ ಬೇಡ ಮತ್ತೆ ವಿಷಯ ಸುಖ ಇಹಸುಖಗಳಲಿ ಬರೀ ಕಾಣುವೆ ದುಃಖ ಜೀವನವೊಂದು ಹೋರಾಟ ಬರಿ ಯುದ್ಧ ಇಂದ್ರಿಯಗಳೊಂದಿಗೆ ಕಾದಿದೆ ದ್ವಂದಯುದ್ಧ ಕನಸುಗಳೇ ವಾಸ್ತವ ಮರೆಸುವ ಹಾಗ...
ದುಷ್ಮಾನರು ಅಪಜಯ ಹೊಂದಿ, ಶಿಕ್ಷೆಗೆ ಪಾತ್ರರಾದರೆಂಬ ಆಹ್ಲಾದ ಕರವಾದ ವಾರ್ತೆಯು ಕಿವಿಗೆ ಬೀಳುತ್ತಲೇ ವಾಗ್ದೇವಿಯೂ ಚಂಚನೇತ್ರರೂ ಪುಳಕಿತರಾದರು. ಭೀಮಾಜಿಗೂ ಶಾಬಯ್ಯಗೂ ಸದ್ಭಶರಾದ ಗಂಡುಗಲಿ ಗಳು ಹುಟ್ಟಲೇ ಇಲ್ಲವೆಂದರು. ಸಕ್ರೆ ಪಂಚಕಜ್ಜಾಯ ದೊಡ್ಡ ದ...
ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು ಆಲಸದಲಿ ದಣಿವಾದವೊಲು ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ ಉರುಳುರುಳುತ್ತಿವೆ ಅವಸನ್ನ ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು ವಾಯವ್ಯದ ಉಸಿರಾಟ...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...















