ಮಂದ ಮಾರುತ ತಂದ ಚಂದದ ಹಾಡೊಂದ ಅಂದೆನೆಂದರ ಬಾರದೀ ಬಾಯಿಗೆ ಬೆಂದು ಬಳಲಿದ ಜನಕೆ ನೊಂದು ನಂದಿದ ಮನಕೆ ಬಿಂದೊಂದಮೃತದ ಮರು ಭೂಮಿಗೆ ಕಿವಿಯಾರೆ ಕೇಳಿದೆ ಕಿವಿಯಲ್ಲಿ ಉಳಿದಿದೆ ಸವಿದೆನೆಂದರೆ ಇಲ್ಲ ನಾಲಿಗೆಗೆ ಮುದುಡಿದ್ದ ಮನವರಳಿ ಕದಡಿದ್ದ ಬಗೆ ಮರಳಿ ಹದಗೂಡಿ ಬೆರೆತವು ಆ ಹೊತ್ತಿಗೆ ತುಂಬಿದೆ ತಲೆ ತುಂಬ ದುಂಬಿಯ ...

ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ ಇಷ್ಟೊಂದು ಚಂದ್ರಮನ ಏನ್ಮಾಡೋಣ ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ ಮಾಡಲ್ಲು ಚಂದ್ರ...

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದರೆ ಸಿಕ್ಕದೆಂಬ ಬಳಲಿಕೆಯ ನೋಡಾ ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರಾ ಅಲ್ಲಮನ ವಚನ. ಕಂಡದ್ದನ್ನು ಬಿಟ್ಟು ಕಾಣದಿರುವುದನ್ನು ಹುಡುಕಿ ಹಿಡಿಯುತ್ತೇನೆಂದು ಹೊರಟರೆ ...

-ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿ ಮತ್ತು ದಾಸಿಯರಿಂದ ದುರ್ಯೋಧನ ದುಶ್ಯಾಸನಾದಿಯಾಗಿ ನೂರೊಂದು ಮಂದಿ ಮಕ್ಕಳು ಜನಿಸಿ ಸಂತಸವನ್ನುಂಟುಮಾಡಿದ್ದರೆ, ಅತ್ತ ಪಾಂಡುವು ನಿಯೋಗಪದ್ಧತಿಯಲ್ಲಿ ಕುಂತಿಯಿಂದ ಯುಧಿಷ್ಠಿರ, ಭೀಮ, ಅರ್ಜುನರೆಂಬ ಮೂರ...

ನಾನೀಗ ದಾರಿ ದೀಪಗಳ ಹಿಡಿದು ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ. ಇತಿಹಾಸದ ಹಳವಂಡಗಳು, ಕೋವಿಗಳ ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು ಉಡಿಯಲ್ಲಿ ಕವಿತ...

“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ ಕರ ಮುಗಿವೆವು ನಿನಗೆ” ಜನನಿಽಽ ಜಗದಾತ್ರೆಯೆ ಓಂ ಶಾಂತಿಃ ಓಂ ಶಾಂತಿಃ ಶಾಂತಿ ಸಮರಸದ ತೊರೆಯಲ್ಲಿ ಭದ್ರ ಬುನಾದಿಯ ಸೆರೆಯಲ್ಲಿ ಸನಾತನ ಸಮನ್ವಯ ...

ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ ಅವನ್ನು ಪಡೆಯಲು ನಿ ಮಾಡುಧ್ಯಾನ ಧ್ಯಾನದಲ್ಲಿ ಉಂಟು ಮಹದಾನಂದ ಅದನ್ನು ಬಿಟ್ಟರೆ ಇನ್ನೇನು ಆನಂದ! ಸಾಗರದಾಳದಲ್ಲಿ ವಜ್ರ ವೈಡೂರ್ಯ ಅದನ್ನು ಪಡೆಯಲು ನಿ ಮಾಡು ಸಾಹಸ ಇನ್ನೇನು ಬದುಕು ಕ್ಷಣಿಕ ಕ್ಷಣಿಕ ಮತ್ತೊಂದಗಳಿಗೆ...

ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ ನೋಟಗಳೂ ಸಂಧಿಸಿದುವು. ಸು...

ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ...

(ಒಂದು ರೂಪಕ ಕಥನ) ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು, ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು. ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ! ಹುರುಳಿ ಹೆ...

ಗುರುವೇ ನಿನ್ನ ಪಾದ ಧೂಳಿನ ಕಣದ ಕಣ ನಾನು| ಕರುಣೆ ತೋರುತಿರು ನೀನು ಪರಿಪೂರ್ಣನಾಗುವವರೆಗೂ ನಾನು|| ದೀನ ನಾನು ನಿನ್ನ ಅಧೀನನು ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು | ನಿನ್ನನೇ ನಂಬಿಹೆನು ನಾನು ಮಹಾ ಸಾಗರನು ನೀನು ಆ ಸಾಗರದಲೊಂದು ಹನಿಯಾಗಿಸಿ ಎನ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...