ಇಷ್ಟೊಂದು ಚಂದಿರನ

ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ
ಇಷ್ಟೊಂದು ಚಂದ್ರಮನ ಏನ್ಮಾಡೋಣ

ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ
ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ
ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ

ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ
ಮಾಡಲ್ಲು ಚಂದ್ರಮ ಕಾಡಲು ಚಂದ್ರಮ
ಬಯಲು ಚಂದ್ರಮ ಬೆಟ್ಟ ಚಂದ್ರಮ

ಕನ್ನಡಿ ನೋಡಿದರೆ ಕಣ್ಣಲ್ಲು ಚಂದ್ರಮ
ಮೊಗದಲ್ಲು ಚಂದ್ರಮ ನನ್ನೆದೆಯಲ್ಲು ಚಂದ್ರಮ
ಚಂದ್ರಮನಿಲ್ಲದ ಜಾಗವೇ ಇಲ್ಲಮ್ಮ

ಹಾಸಿಗೆಗೇ ಬಂದು ಬಿದ್ದಾನ ಚಂದ್ರಮ
ಹೊದಿಕೆಯಂತೆನ್ನ ಹೊದ್ದಾನ ಚಂದ್ರಮ
ಸದ್ದು ಮಾಡದೆ ಎನ್ನ ಮುತ್ಯಾನ ಚಂದ್ರಮ
ಮುಂಜಾನೆಗೆದ್ದು ಹೋಗೇಬಿಡ್ತಾನ ಚಂದ್ರಮ
ಇಷ್ಟೊಂದು ಚಂದ್ರಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕಂಡದ್ದು ಕಾಣದ್ದು
Next post ಅಡ್ರೆಸ್ ಕೊಡು

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…