Home / ಕವನ / ಕವಿತೆ / ಶಾಂತಿ ಸಮರಸದ ತೊರೆಯಲ್ಲಿ

ಶಾಂತಿ ಸಮರಸದ ತೊರೆಯಲ್ಲಿ

“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ
ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ
ಕರ ಮುಗಿವೆವು ನಿನಗೆ”
ಜನನಿಽಽ ಜಗದಾತ್ರೆಯೆ
ಓಂ ಶಾಂತಿಃ ಓಂ ಶಾಂತಿಃ

ಶಾಂತಿ ಸಮರಸದ ತೊರೆಯಲ್ಲಿ
ಭದ್ರ ಬುನಾದಿಯ ಸೆರೆಯಲ್ಲಿ
ಸನಾತನ ಸಮನ್ವಯ ಗುಡಿಯೊಳಗಣ ಮೂರ್‍ತವೆ ಇಲ್ಲಿ
ಹೇಳೇಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಭಾತೃತ್ವದ ತುಂಬು ದೋಣಿಯಲ್ಲಿ
ಮಮತೆಯ ಮಡಿಲಂದದಿ ತೂಗಿ
ಮುನ್ನಡೆದಿದೆ ಜೀವನ ಕಣ್ಸೆಳೆದಿದೆ ಹೂಮನ
ಹೇಳೀಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ವರ್ತಮಾನದ ವೈಭವ ಶಿಖರಕೇರಿ
ಭೂತ ಭವಿಷ್ಯತೆಯ ಕರತಾಳದಲ್ಲಿ ಕೂಡಿ
ಮಾನವತೆಯ ನಮ್ರತೆಯ ಭಾವನ ಸ್ವರ ತಾಳದಲ್ಲಿ
ಹೇಳೀಳು ಮನವೇ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಶುಭ್ರತೆಯ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಹಸನಾಗಿಹ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಐಕ್ಯತೆಯ ಹಿರಿಮೆಯಲಿ ನಲಿದಾಡಿಹುವುದು ಹೂಮನ
ಭವ್ಯತೆಯ ಸೋಗಿನಲಿ ಹೇಳೇಳು ಮನವೇ ದನಿಗೂಡಿಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಋಷ್ಯ ಮುಖ ಕಲ್ಪತರು ಗರಿಮೆಯ ತಾಣದಲ್ಲಿ
ಶಿಲ್ಪ ಸೌಂದರ ಮೇಳೈಸುವ ಆಗರದಲ್ಲಿ
ಭಾರತೀಯ ಹೃತ್ಕಮಲಕೆ ತಲೆಬಾಗಿ ಹಾಡಿ
ಹೇಳೇಳು ಮನವೆ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...