ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದ...

ಮೋತಿಲಾಲ್ ಕೈಮುತ್ತು ಭಾರತಿಯ ಪದಕಿತ್ತು ಸ್ವಾತಂತ್ರ್ಯದೊಡವೆಯಂ ಮಾಡಿ ತೇಜಮನಿತ್ತು ಪೋದನಾ ಸಾಹಸಿಗ ಸಗ್ಗಮಂ ಸಾರಿದನ್ ಸಾಧಿಸಿದ ರಾಜ್ಯಮನ್ ಕೆರ್ಚಾಳು ಕೊನೆಗರ್ದ ಸತ್ಯಾಸಿಧಾರೆಯಿಂ ಧರ್ಮಕವಚವನುಟ್ಟು ಭಾರತಿಯ ಬಿಡುಗಡೆಗೆ ವೀರಪಣಮಂ ತೊಟ್ಟು ಧಾವಿಸಿ...

“One’s real life is often the life that one does not lead” ಹೀಗೆ ಹೇಳಿದವರು ಆಸ್ಕರ ವೈಲ್ಡ್. ಈ ಮಾತು ಬಹುಮಟ್ಟಿಗೆ ಸ್ತ್ರೀ ಬದುಕಿನ ಅದರಲ್ಲೂ ಉದ್ಯೋಗಸ್ಥ ಸ್ತ್ರೀ ಜೀವನಕ್ಕೆ ಸಮೀಕರಿಸಿ ನೋಡಿದರೆ ಆ ಮಾತಿನ ಸತ್ಯದ ಅರಿವ...

ಮೇಜಿನ ಮೇಲೊಂದು ರೋಜದ ಹೂವು, ಹಿಂದೆಂದು ಕಾಣದ ಸೊಗಸಿನ ಹೂವು, ಅಂದೆ ಅರಳಿದ ಹೂವು, ಸಂಜೆಗೆಂಪಿನ ಹೂವು, ಕಂಗಳು ತಂಗುವ ಸೊಗಸಿನ ರೇವು. ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ, ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ, ಜೀವಗೂಡಿರುವಂತೆ ಒಲವೆರೆದು ನಗ...

ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ| ಚೆನ್ನಮಲ್ಲೈನ ನೆನಽವೂತ || ಚೆನ್ನಮಲ್ಲೈನ ನೆನವೂತೀ ಕಳಸಕಽಽ| ಛೆಂದಾಗಿ ನೂಲಾ ತೊಡಽಽಸವ್ವಾ ||೧|| ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ| ಬಸವೇಸುರನಿಂಗನ ನೆನವೂತ|| ಬಸವೇಸುರನಿಂಗನ ನೆನವೂತೀ...

ಬಣ್ಣದ ರೆಕ್ಕೆಗಳುಳ್ಳ ಪಾತರಗಿತ್ತಿ (ಪತಂಗ)ಗಳನ್ನು ನಾವು ಗಿಡದ ಮೇಲೊ, ಗೋಡೆಗಳಲ್ಲಿಯೋ ನೋಡಿ ಖುಷಿ ಪಟ್ಟುಕೊಳ್ಳುತ್ತವೆ. ಆದರೆ ಈ ರೆಕ್ಕೆಗಳಲ್ಲಿ A ದಿಂದ Z ವರೆಗಿನ ಅಕ್ಷರಗಳು ೦ ದಿಂದ ೯ರವರೆಗಿನ ಅಂಕಿಗಳು ಇವೆ. ಈ ಸತ್ಯವನ್ನು ಕಂಡು ಹಿಡಿಯಲು ನ...

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ ರನ್ನ, ಪ್ರಣಯ ಭಿಕ್ಷುವಿನನ್ನ, ಕವಿತೆ ಜೀವನಸಮರ ಯೋಧರ ತ...

ಸಂಕ್ರಾಂತಿ ಸೂರ್ಯ ಬದಲಿಸುವ ಪಯಣದ ದಿಕ್ಕು ಆ ದಿಕ್ಕು ನಾನಾಗುವುದೆಂದು? ಸಂಕ್ರಾಂತಿ ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ ಅದಕ್ಕೆ ಅರ್ಥ ತಾರದೇಕೆ? ಭುವಿಗಿಳಿದ ಸಂಕ್ರಾಂತಿ ನನ್ನೆದೆಗಿಳಿಯಲಿಲ್ಲ ಎದೆಗಿಳಿದರೂ ಅಲ್ಲಿ ಸಮೃದ್ಧಿ ತರಲಿಲ್ಲ ಸಮೃದ್ಧಿಯ ಮೇ...

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನ...

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು ಕಲಿಸಿದರು ನಿನಗೀ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...