ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದ...

ರಾಮಾ, ಮನದಲಿ ಹರಿದು ಬರಲಿ ನೆನೆಯುವೆ ನಿತ್ಯ ನಿನ್ನ ನಾಮಾ ನಿನ್ನೊಂದು ನೆನಪೆ ನನಗೀಗ ಪಾವನವಾಗಿದೆ ನಾಮಾ ಬದುಕು ಬವಣೆಗಳ ಮಧ್ಯ ಸ್ವಾರ್ಥಗಳನು ಸಾಕಿ ಸಲುಹಿದೆ ನನ್ನವರ ಬಾಳಿಸಲು ನಿತ್ಯವೂ ಏನೆಲ್ಲ ಗಳಿಕೆಗೆ ತಿರುಗಿದೆ ಯಾವ ಕ್ಷಣಕ್ಕೂ ಬರಲಿಲ್ಲ ಆ ...

ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು. ಎಲ್ಲ ಹೃದಯವ ಹೊಕ್ಕು – ಅಳೆದು ...

-ಕೌರವರಿಂದ ಸಂಕಷ್ಟಗಳಿಗೊಳಗಾಗಿ ಬಳಿಕ ಸ್ವಪ್ರಯತ್ನದಿಂದ ನಾಡನ್ನು ಕಟ್ಟಿ, ರಾಜ್ಯ ವಿಸ್ತಾರ ಮಾಡಿ ಇಂದ್ರಪ್ರಸ್ಥದಲ್ಲಿ ನೆಲೆಗೊಂಡ ಪಾಂಡವರು ರಾಜಸೂಯಯಾಗವನ್ನು ಕೈಗೊಂಡು ದಾಯಾದಿಗಳಾದ ಕೌರವರನ್ನು ಆಮಂತ್ರಿಸಲು, ಅವರುಗಳೂ ನೋಡೋಣವೆಂದು ಬಂದರು. ಭೀಷ...

ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್‍ಘ್ಯ ಹಿಡಿದಿವೆ; ಅಲರ ಸುರಿ...

ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ| ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧|| ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ| ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ...

ಶಾಲೆಗಿಂದು ರಜೆಯೋ ಏನೋ ಎಳೆಯರೆದೆಯ ಹರುಷವೇನು ಹನುಮನಂತೆ ಹಾರುವನೊಬ್ಬ ಹುಟ್ಟುಡುಗೆಯ ಬಾಲನೊಬ್ಬ ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ ಅವನು ಇವನು ಎಲ್ಲ ಸೇರಿ ಒಂದೆ ಜಲ, ಒಂದೆ ಗಾಳಿ ಒಂದೇ ನೆಲದ ಅಂಗಳದಿ ಆಡಿ ತಿಳಿನೀರಲಿ ಹಾರಿ ಜಿಗಿದು ಕಣ್ಣ ಕೆಂಪಗಾ...

ಭೂಪಾಳಿ-ಝಂಪೆ ನೋಡು ನೋಡೆಲೊ ದೇವ! ಗತಿವಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ ಕ್ರ...

ರಾಮನಿಲ್ಲದ ನಾಡಿನಲ್ಲಿ ರಾಮ ಬಾಣದ ಆರ್ಭಟ ಜುಟ್ಟು ಗಡ್ಡಗಳ ಕಾಳಗದಲ್ಲಿ ರಕ್ತದೋಕುಳಿ ಚೆಲ್ಲಾಟ ರಾಮನಿದ್ದನೋ ಇಲ್ಲವೋ ಮಸೀದಿಯಂತೂ ಬಿದ್ದಿದೆ ಮಂದಿರ ಮೇಲೇಳದಿದ್ದರೂ ಸಿಂಹಾಸನ ದಕ್ಕಿದೆ ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ ಗಡ್ಡಗಳ ಆಚೆಗೂ ಗಡ್...

ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ ನೆನೆಯುತ್ತಾರೆ. ಒಂದು ಸಲವಲ್ಲ, ನೂರ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...