ರಾಮನಿಲ್ಲದ ನಾಡಿನಲ್ಲಿ
ರಾಮ ಬಾಣದ ಆರ್ಭಟ
ಜುಟ್ಟು ಗಡ್ಡಗಳ ಕಾಳಗದಲ್ಲಿ
ರಕ್ತದೋಕುಳಿ ಚೆಲ್ಲಾಟ
ರಾಮನಿದ್ದನೋ ಇಲ್ಲವೋ
ಮಸೀದಿಯಂತೂ ಬಿದ್ದಿದೆ
ಮಂದಿರ ಮೇಲೇಳದಿದ್ದರೂ
ಸಿಂಹಾಸನ ದಕ್ಕಿದೆ
ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ
ಗಡ್ಡಗಳ ಆಚೆಗೂ ಗಡ್ಡಗಳು ಬೆಳೆದಿವೆ
ಎಲ್ಲೆಲ್ಲೂ ಧರ್ಮದ್ದೇ ಧ್ಯಾನ
ಅನ್ನ ಅಕ್ಷರಗಳ ಹುಡುಕಲು
ಇಲ್ಲ ವಿರಾಮ!
*****