
ಒಂದರಳೆ ಮರದಲ್ಲಿ ಸಂಜೆಯಾಗಿರುವಲ್ಲಿ ಒಂದೊಂದೆ ಮರಳುವವು ಸಾಲುಗೊಂಡು : ಒಂದೊಂದೆ ಮರಳುವವು ಗಿಳಿಯೆಲ್ಲ ತೆರಳುವವು ಗೂಡುಗೊಂಡಿಹ ಮರವನಿದಿರುಗೊಂಡು. ಸಂಧ್ಯೆಯಿಂದೀಚೆಗೆನೆ ಸ್ಮರನೆಚ್ಚ ಶರಗಳೆನೆ ತಾಗುತಿದೆ ಗಿಳಿಹಿಂಡು ಬಂದು ಮರಕೆ. ಕೊಂಬೆಮೇಲೆಳೆಮರ...
೧ ಜಯವು ಶಾಂತಿಯ ಶರಣ, ಭಾರತ- ಪಾರತಂತ್ರ್ಯ ನಿವಾರಣಾ! ಜಯ ಮಹಾತ್ಮಾ, ಜಯವು ಮೋಹನ, ಪತಿತಜನ ಸಂಜೀವನಾ ! ೨ ಬೆಳಕು ಬಿದ್ದಿತು ಭರತಭುವಿಯಲಿ ಜನ್ಮಿಸಲು ಗುರುಗಾಂಧಿಯು, ಕಳಕಳನೆ ನಗೆಯೆದ್ದು ನಿಂತಿತು, ಶಾಂತಿ-ಸೌಖ್ಯದ ನಾಂದಿಯು ! ೩ ಭರತಮಾತೆಯ ಪೂರ್ವ...
ಎಚ್.ವಿ.ಸಾವಿತ್ರಮ್ಮ ಹುಟ್ಟಿದ್ದು ೧೯೧೩ರಲ್ಲಿ. ಅಂದರೆ ಇಪ್ಪತ್ತನೆಯ ಶತಮಾನ ಆಗ ತಾನೇ ಉದಯಿಸುತ್ತಿದ್ದ ವರ್‍ಷಗಳಲ್ಲಿ. ಆದರೆ ಈ ಲೇಖಕಿ ಬರೆದದ್ದು ಆನಂತರದ ಅರ್‍ಧಶತಮಾನಕ್ಕೆ ಹೆಚ್ಚು ಸಲ್ಲುವಂತಾಯಿತು. ಕನ್ನಡದಲ್ಲಿ ಸ್ತ್ರೀವಾದ ಕಣ್ಣು ಬಿಡುತ್ತಿದ...
ಬಯಸಿದ್ ಸಾಮಾನ್ ಬೇಕಾದಂಗೆ ಇರಲಿ ಇಲ್ದೇನ್ ಇರಲಿ- ತಾಪತ್ರೇಯನಕ್ ತಪ್ಪಿದ್ದಲ್ಲ! ಸುಳ್ಳಂತ್ ಅನ್ನೌನ್ ಬರಲಿ! ೧ ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ ನಿದ್ದೆ ಗಿದ್ದೆ ಬರದು! ಬುಂಡೇ ಕಾಲಿ ಆಗೋದ್ರನಕ ನಿದ್ದೆ ಬರಲೇ ಬರದು! ೨ ಈ ತಾಪತ್ರೇನ್ ತಳ್ಳಾಕ...
ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ- ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು- ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ ಹಿಡಿದ ಮೈಯನು ತ...
ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ ಎದ್ದೊಂದ ಗಳಿಗೆ ನೆನೆದೇನ. ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ. ರೈತನೆ...
ರೈತ ಕಷ್ಟವನರಿತು ಕೊಳ್ಳುವ ಧನಿಕರೆಲ್ಲಿಹರು ಮತ್ತೆನ್ನ ಸಾಲ ಸಬ್ಸಿಡಿಯುರುಳ ಬಿಡಿಸುವರ್‍ಯಾರು ಹೊತ್ತುರಿವ ಧರೆಧಣಿಗೆಂತು ಬಂದೀತು ಸೂರು ಹೊತ್ತು ಜಾರುವ ಮುನ್ನೆಚ್ಚರಿಪ ಗುರುಗಳಾರಿಹರು ಆತ್ಮಾಭಿಮಾನವೆನ್ನೊಳಗೆ ಜಾರಿರಲಾರೆನ್ನ ರೈತನವನೆತ್ತುವರು &...
ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ ಕೆಂಪೇ ಜೋತರದಾ ರಸಬಾಳೀ ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ ಕಾದೇ ಹಿಂದೆ ಹೋ ಗವಾಗೇ ಬಳಿಯಾ ಜರಿದಾನಯ್ಯಾ ಕೋಲಣ್ಣಾ ಸಂಪೂಗಿಯೂ ಕೋಲಣ್ಣಾ ಮಲ್ಲೂಗಿಯೂ ...
ಬ್ರೆವೆಟ್, ಚೆನಿಲ್ ಡ್ಯೂ, ಕೋಷೆಸೆಯಿಲ್ ಎಂಬ ಮೂರು ಮಂದಿ ಸಾಕ್ಷಿಗಳ ವಿಚಾರಣೆಯಾಯಿತು. ಇವರೂ ಅಪರಾಧಿಗಳಾಗಿದ್ದ ವರೇ, ಈ ಮೂವರೂ, ‘ಈಗ ಬಂದಿಯಾಗಿರುವವನೇ ಜೀನ್ ವಾಲ್ಜೀನನ್ನು,’ ಎಂದು ಸಾಕ್ಷ್ಯ ಹೇಳಿದರು. ಇವರು ಒಬ್ಬೊ ಬ್ಬರು ಸಾಕ್...
ಹೌದು ಬದುಕು ಎನ್ನಲು ಇದು ನಿನಗೆ ಮೀಸಲು ದೂರದ ವರೆಗೆ ಸಾಗಲು ಮತ್ತೆ ನೀನೇ ಕಲಿಬೇಕು ಈಜಲು ಈ ಜನುಮದ ದಾರಿಯಲ್ಲಿ ಇವರೆಲ್ಲ ನಿನ್ನ ಸಂಗಾತಿಗಳು ಒಡೆಯನ ಮರೆತು ಇಲ್ಲಿ ಬೆರೆತು ಅರಳಿಸಿಕೊಳ್ಳುತ್ತಿರುವ ನನ್ನ ಕನ್ಸುಗಳು ಮುಣ್ಯ ಪಾಪಗಳದೇಕೆ ಲೆಕ್ಕ ಅವ...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
















