ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ ಹಳ್ಳ ಕೊಳ್ಳ ತಿರುಗ್ಯಾಡಿ ಬಂದೆ. ಕಾರಮಳೆಯೆ ಕಪ್ಪತಮಳೆಯೆ ಸುರುಮಳೆಯೆ ಸುರಿಮಳೆಯೆ. ಸುರಿಮಳೆಯಾದರ ಒಕ್ಕಲಿಗ ಒಕ್ಕಲಿಗ ಒಕ್ಕಲಿಗಣ್ಣ ಬಿತ್ತೊ ಹೊನ್ನ ಸುತ್ತ ಸುರಿಯಿತು ಸುರಿಮಳೆಯೊ ಸುರಿಮಳೆಯೊ. ಹಸರ ಬೆಳೆಯು ಭೂತಾಯಿ ಭೂತಾಯಿ ಮಗಿಮಳೆಯಾಗಿ ಹೂ ಬೆಳಸಿ ಹೂ ಬೆಳಸಿ. ಹಕ್ಕಿಯ ಹಬ್ಬ...

ಆನಂದ ಋಗ್ವೇದಿ ಹೊಸ ತಲೆಮಾರಿನ ತೀವ್ರ ತುಡಿತದ ಕವಿ ಸಂವೇದನೆಯ ಕಥೆಗಾರ. ಅವರ ಮಗದೊಮ್ಮೆ ಬುದ್ಧ ನಕ್ಕ ಕಥಾಸಂಕಲನದ ಒಂದು ಕಥೆ ಎದೆಯ ಬಾವ್ಯಾಗೀನ ಬೊಗಸೆ ನೀರು ಜಾತಿಯತೆಯ ಕರಾಳ ಸಿಕ್ಕುಗಳಿಗೆ ಕುಮಾರಿಯೊಬ್ಬಳ ಕನ್ಯತ್ವ ಹರಣ, ಅತ್ಯಾಚಾರಕ್ಕೆ ಬಲಿಯಾಗ...

ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು ದೇವಪ್ರಾಯ, ಉಳಿದರಿಗೆ...

– ಪಲ್ಲವಿ – ಕಳೆದು ಭ್ರಾಂತಿ ತುಳಿದಶಾಂತಿ ಹೊಳೆಯಿತು ಸಂಕ್ರಾಂತಿ! ಇಳೆಯೊಳಿಡಿದ ಕುಳಿರನಳಿದು ಬಲಿಯಲು ಹೊಸಕಾಂತಿ! ಮೂಡುಗಾಳಿ ಬೀಸಿ ಬೀಸಿ, ನಾಡ ಬೆಳೆಯ ಕಸುಕ ಸೋಸಿ, ಮಾಡಿ ವಿವಿಧಧಾನ್ಯರಾಶಿ, ಹಸಿವೆಗೀಯೆ ಶಾಂತಿ… ಕಳೆದು ಭ್...

ಚಳವಳಿ ಎಂಬ ಪದವೇ ಚಲನಶೀಲತೆಯನ್ನು, ಬದಲಾವಣೆಯನ್ನು ಸಂಕೇತಿಸುತ್ತದೆ. ಈ ಜಗತ್ತಿನಲ್ಲಿ ಅನೇಕ ಚಳವಳಿಗಳು ಆಗಿಹೋಗಿವೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಗೋಕಾಕ ಚಳವಳಿಯವರೆಗೆ, ಚಲನಚಿತ್ರ ವಿತರಕರ ಪ್ರದರ್ಶನದಿಂದ ಹಿಡಿದು ಜಾಗತೀಕರಣವನ್ನು ವಿರೋಧ...

ನನ್ ಎಡ್ತಿ ನುಗ್ಗಿದ್ಲು ಜೋಬಿಗ್ ಕೈ ಆಕಿದ್ಲು ಮುನಿಯಣ್ಣ ಯೆಂಡಕ್‌ ಕಾಸಿಲ್ಲ- ಸಿರಿಕಿಸ್ನ ನಿಂತೌನೆ! ಕುಚೇಲ ಬಂದೌನೆ! ಏನಾರ ಕೊಡಲೇಬೇಕಲ್ಲ! ೧ ನಿನ್ ಯೆಂಡ ಬೇಡ್ತೀನಿ ಕೊಡದಿದ್ರೆ ಆಡ್ತೀನಿ ಮುನಿಯ ನಿನ್ ಮೇಲೊಂದು ಮಟ್ಟು! ಬೇವಾರ್‍ಸಿ ಬಂದೌನೆ | ...

ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು ನನ...

ಗಾಂಧಿ ಯುಗದಲ್ಲಿ ಏನು ಆದೀತು ಏನು ಆಗಲಿಕ್ಕಿಲ್ಲ! ಇದರ ಕಲ್ಪನೆ ಸಹ ಮಾಡುವದಾಗುವದಿಲ್ಲ. ಬಾಹ್ಯದೃಷ್ಟಿಗೆ ಅತ್ಯಂತ ಸ್ವಾರ್ಥಿಗಳೆಂದು ಹೆಸರಾದ ಜನರು ತಮ್ಮ ಮನೆ ಮಕ್ಕಳ ಮೇಲೆ ತುಳಿಸಿಪತ್ರ ಇರಿಸಲೂ ಸಿದ್ಧವಾಗಿರುವದನ್ನೂ ಎಷ್ಟೊ ಹೇಡಿಗಳು ಇಂದು ತಮ್ಮ...

ಅನ್ನವೆಂದೇನು ಕೊಂಡಾಡುವುದೋ ಭತ್ತವೊಂ ದನೆ ಉಜ್ಜುಜ್ಜಿ ಬಿಳಿಗೊಳಿಸುತಲುಂಡನ್ನದಾ ಹೀನ ಮನವನ್ನ ಮೂಲವನೆಲ್ಲ ಕೆಡಿಸಿರಲು ಅನ್ನದೊಳಮಿತ ವಿಧವಿಹುದದನು ಋತು ಮಾನಕಪ್ಪಂತೆ ತಿನುವಾತ್ಮಜ್ಞಾನವಳಿದಿರಲು – ವಿಜ್ಞಾನೇಶ್ವರಾ *****...

ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ || ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೨ || ಊರೂರು ನಾರಿಯರಿಗೆಲ್ಲಾ ಗೇರೂ ಗೆರಸೇ...

ಹೀಗೆ ಆರು ವಾರಗಳು ಕಳೆದ ಮೇಲೆ ಒಂದು ದಿನ ಮೇರಿ ಯಸ್ಸನು ಕೋಸೆಟ್ಟಳನ್ನು ನೋಡಲು ಬಂದಾಗ ಅವಳು ಅವನನ್ನು ಕುರಿತು, ” ಈ ದಿನ ಪ್ರಾತಃಕಾಲ ನಮ್ಮ ತಂದೆಯು ನನ್ನನ್ನು ನೋಡಿ, ತನಗೇನೋ ಕೆಲಸವಿರುವುದರಿಂದ ನಾವು ಇಲ್ಲಿಂದ ಹೊರಟು ಹೋಗಬೇಕಾದೀತೆಂತಲ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...