ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...

ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...

ಬೆಳಗು ಮುಂಜಾವಿನ ಸಮಯ ಸೂರ್‍ಯ ಹುಟ್ಟುವ ಮುನ್ನ ಚುಮುಚುಮು ನಸುಕಿನಲಿ ನೆಲದ ಅಂಗಳಕ್ಕೆ ಪುಟ್ಟ ಪಾದಗಳ ಅಕ್ಷರ. ಪ್ಲಾಸ್ಟಿಕ್‌ ಚೀಲ ಹೆಗಲಿಗೇರಿಸಿ ಯುದ್ಧಕ್ಕೆ ಹೋರಟ ಯೋಧರು. ತುತ್ತು ತುಂಬಲು ಪಯಣ ತಿಪ್ಪೆ ಗುಂಡಿಗಳ ಕೆದಕಿ ಹಸಿವು ನೀಗುವ ಬುತ್ತಿ ತ...

ಬಿಳಿಯ ಬಣ್ಣ ಬಿಳಿಯ ಬಟ್ಟೆ ಬರೆ ಇತ್ಯಾದಿಗಳಿಂದ ಕೆಲ ಸೋಂಕುಗಳು ಬರುತ್ತಿವೆಯೆಂದು ಬೆಂಗಳೂರಿನ ಖಾಸಗಿ ವೈದ್ಯ ಕಾಲೇಜಿನ ಎಡ್ಮಂಡ್ ಫರ್‍ನಾಂಡಿಸ್ ಅವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ. ಶ್ರೀಯುತರು ತಮ್ಮ ವರದಿಯನ್ನು ಕೇಂದ್ರ ಸರ್‍ಕಾರದ ಆರೋಗ್...

-ಪಾಂಡವರ ರಾಜಸೂಯಯಾಗದಲ್ಲಿ ಭಾಗವಹಿಸಿದ್ದ ಕೌರವಪಕ್ಷವು ಅವರ ವೈಭವವನ್ನು ಕಂಡು ಕರುಬಿತ್ತು. ದುರ್ಯೋಧನನಾದರೋ ಮಯಸಭೆಯಲ್ಲಿ ತನಗಾದ ಅಪಮಾನವನ್ನು ನೆನೆಯುತ್ತ ಮನದಲ್ಲೇ ಕೊರಗುತ್ತಿದ್ದನು. ಅಲ್ಲದೆ ಯಾಗಾಂತ್ಯದಲ್ಲಿ ನೇರನುಡಿಗಳಲ್ಲಿ ಮಾತನಾಡಿದ ಶಿಶು...

ಹರಿದಿದೆ ನೋಡಿ ಕನ್ನಡ ರಥವು ಅಮೇರಿಕಾ ಕಡೆಗೆ ಕಾಣದಾಗಿವೆ ಕಪ್ಪು ದೇಶಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು ಅಮರ! ಹೃದಯವು ಕನ್ನಡ ಮನಸು ಸಂಸ್ಕ ತ ನಾವು ಕಲಿತ ...

ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮೆ ಸಾ೦ದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರ...

ಉತ್ಸವ ಉತ್ಸವ ನಾಡ ದೇವಿಯ ಉತ್ಸವ ಕರುನಾಡ ತಾಯಿಯ ಉತ್ಸವ ಬೆಡಗು ಬಿನ್ನಾಣದ ಉತ್ಸವ || ಉತ್ಸವ || ಈ ಉತ್ಸವ ನಾಡೋತ್ಸವ ನಿನಗುತ್ಸವ ರಾಜ್ಯೋತ್ಸವ ದೀಪ ದೀಪಗಳ ದೀಪೋತ್ಸವ ಮಹೋನ್ನತವು ಮಹೋತ್ಸವ || ಉತ್ಸವ || ಅರುಣ ದೇವಿಗೆ ಅರುಣೋತ್ಸವ ಪುಷ್ಪಾಂಜಲಿಗ...

ಮೂಲ: ಟಿ ಎಸ್ ಎಲಿಯಟ್ ೧ ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ. ಆರು ಗಂಟೆ. ಹೊಗೆವ ಹಗಲುಗಳ ಉರಿದುಳಿದ ತುಂಡುಗಳು, ಗಾಳಿ ಮಳೆ ಇರಚಲು : ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...