ತಾಯಿ ಮಂಗಲ ತೋಳ ತೊಟ್ಟಿಲ
ತೂಗಿ ಲಾಲಿ ಹಾಡಿ;
ಮಗುವೆ ಅಳದಿರು ಹಾಲು ಹೊಳೆಯಿದೆ
ಎಂದೆ ಮುದ್ದು ನೀಡಿ.
ನಿನ್ನ ‘ದರ್ಶನ’ ನನ್ನ ಬಾಳಿಗೆ
ದಿವ್ಯ ದೀಪ ಕಿರಣ;
ಜೀವ ಜೀವದಿ ಹರಿದು ಬಂದಿದೆ
ಇದಕೆ ಇಲ್ಲ ಮರಣ.
ಸೂರ್ಯ ಚಂದಿರ ಬಯಲು ಬಾಂದಳ
ಸಾಕ್ಷಿ ಇರಲಿ ಇದಕೆ!
ಕಣ್ಣ ಕೊನೆಯಲಿ ನೀರ ಹನಿಯಿದೆ
ನಮನವಿರಲಿ ಅದಕೆ!
*****

















