ಭಗವನ ಸ್ಮರಿಸು

ಓಡೋಡುತ್ತಿವೆ ನಿನ್ನ ಇಂದ್ರಿಯಗಳು
ಸುಖದ ಸುಪ್ಪತಿಗೆ ಅರೆಸುತ್ತ
ಜನುಮ ಜನುಮದಲಿ ಅನುಭವಿಸಿದ
ವಿಷಯಗಳ ಸ್ಮರೆಸುತ್ತ

ನಿನ್ನ ಮೂಲ ಯಾವುದು ಆತ್ಮ
ಹೊಲಸುನಾರುವ ದೇಹಾನಂದವೆ
ನಿನ್ನ ತಾಣ ಯಾವುದು ರೂಹವೆ
ಹೆಣ್ಣು ಹೊನ್ನಿನ ಪರಮಾನಂದವೆ

ಬದುಕು ಇದು ನಶ್ವರವು
ಆಸೆ ಅಮಿಷೆಗಳ ದುಃಖ ಸಾಗರ
ಈಜಿ ತೇಲಿ ಮುಳುಗತ್ತೆ ನೀನು
ಸಾಗಿರುವೆ ಮಿಂದು ಭವಸಾಗರ

ಅರಿತು ಅರಿತು ಅರಿಯದಿದ್ದುದೇನು
ಬಹಿರಂಗದಲಿ ತೋರ್‍ಪಡಿಸುತ್ತ
ಅಂತರಂಗದಲಿ ನೀನು ಯೋಚಿಸುವದೇನು
ಮಾಣಿಕ್ಯ ವಿಠಲನಾಗು ಸ್ಮರಿಸುತ್ತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೩
Next post ಪಾಪಿಯ ಪಾಡು – ೧೬

ಸಣ್ಣ ಕತೆ

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys