ಬಿಕ್ಸೆ

ನನ್ ಎಡ್ತಿ ನುಗ್ಗಿದ್ಲು
ಜೋಬಿಗ್ ಕೈ ಆಕಿದ್ಲು
ಮುನಿಯಣ್ಣ ಯೆಂಡಕ್‌ ಕಾಸಿಲ್ಲ-
ಸಿರಿಕಿಸ್ನ ನಿಂತೌನೆ!
ಕುಚೇಲ ಬಂದೌನೆ!
ಏನಾರ ಕೊಡಲೇಬೇಕಲ್ಲ! ೧

ನಿನ್ ಯೆಂಡ ಬೇಡ್ತೀನಿ
ಕೊಡದಿದ್ರೆ ಆಡ್ತೀನಿ
ಮುನಿಯ ನಿನ್ ಮೇಲೊಂದು ಮಟ್ಟು!
ಬೇವಾರ್‍ಸಿ ಬಂದೌನೆ |
ಬರಕೋಂತ ನಿಂತೌನೆ
ಮುನಿಯ ನಿನ್ ಗುಟ್ಟೆಲ್ಲ ರಟ್ಟು! ೨

ಬೇಡ್ತಿನ್ ಅಂತ್ ಯೋಳಿದ್ರೆ
ನಿನ್ ಯೆಂಡ ಕೇಳಿದ್ರೆ
ದರ್‍ಮಕ್ಕೇನ್ ಕೇಳಾಕಿಲ್ಲೇಳು!
ನರಮನಸಾಂತ್ ಅಂದೋನು
ಬಿಕ್ಸೇಗ್ ಕೈ ತಂದೋನು
ಕತ್ತೆ ನಾಯ್ಗೊಳ್ಗಿಂತ ಕೀಳು! ೩

ನಾ ಸುಂಕೆ ಬೇಡಾಲ್ಲ
ನೀ ಸುಂಕೆ ನೀಡಾಲ್ಲ
ಕಾಸ್ಗೂನೆ ನಿಂಗೂನೆ ಪ್ರಾಣ!
ಚಾಕ್ರಿ ನಂಗೇನಾರ
ಕೊಟ್ಟಿ ಜೀತಕ್ ಪೂರ
ಯೆಂಡ ನೀ ಕೊಡ್ತಂದ್ರೆ ಜಾಣ! ೪

ನಿಂಗೇನ್ರ ಬೇಕಿದ್ರೆ
ನನ್ ಕೆಲಸಕ್ ಆಕಿದ್ರೆ
ತಿಕ್ತೀನಿ ಯೆಂಡದ್ ಪೀಪಾಯ್ನ!
ಇಲ್ದಿದ್ರೆ ಗಲ್ದಲ್ಲಿ
ಬಿದ್ದಿದ್ನ್ ಒಂದ್ ಅಳ್ದಲ್ಲಿ
ಊಳ್ತೀನೀ ತಂದ್ ರೂಪಾಯ್ನ! ೫

ನರಮನಸಾಂತ್ ಉಟ್ದೋನು
ಪಕದೋರ್ ಕಸ್ಟ್ಕ್ ಆಗದೋನು
ಜೀವ್ದೆಣ! ಬೂಮೀಗ್ ಔನ್ ಬಾರ!
ತಾ ಮುನ್ಯ ಯೆಂಡಾನ!
ತುಂಬು ನನ್ ಬುಂಡೇನ!
ನಿನ್ ಕತ್ಗೆ ಪೀಪಾಯ್ಗೋಳ್ ಆರ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು-ನೀನು
Next post ಸ್ತ್ರೀವಾದದ ಹಿನ್ನೆಲೆಯಲ್ಲಿ ಮಹಿಳಾ ಚಳವಳಿ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…