ನಾನು-ನೀನು

ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ
ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ
ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ
ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ
ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ
ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು
ನನ್ನ ಜೀವದ ನಯನ-ತೆರೆ ತಕ್ಕೆ ಬಿದ್ದಂತು
ಸಾಗರಕೆ-ತುತ್ತಲಿದೆ ಆ ವಿರಾಟ ಕ್ಷೇತ್ರ.

ನಿನ್ನ ದರ್‍ಶನ ಪೂರ್‍ಣ: ಕೂಸು ಕಣ್ಣೆರೆದಂತೆ,
ಮೊಗ್ಗೆಯೆಲರಿಗೆ ಅಲರಿದಂತೆ, ಚಿಪ್ಪಿನ ಸ್ವಾತಿ
ಹನಿಯೆ ಮುತ್ತಾದಂತೆ, ಬಸಿರಹೂವಲಿ ನಿಂತ
ನೀರೆ ಪಿಂಡಾಕಾರ ಬೆಳೆದ ಪದ್ಮಿನಿ ಜಾತಿ.
ಚಣಚಣಕು ಪರಿಪೂರ್‍ಣ ನೀನು ತಣಿದೇ ದಣಿವೆ;
ನನಗೆ ಪೂರ್‍ಣತೆಯೆಂದೊ, ನಾನು ದಣಿದೇ ತಣಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐದು ಕೊಡಗಳ ಆತ್ಮಕಥೆ
Next post ಬಿಕ್ಸೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…