ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ ಹಳ್ಳ ಕೊಳ್ಳ ತಿರುಗ್ಯಾಡಿ ಬಂದೆ. ಕಾರಮಳೆಯೆ ಕಪ್ಪತಮಳೆಯೆ ಸುರುಮಳೆಯೆ ಸುರಿಮಳೆಯೆ. ಸುರಿಮಳೆಯಾದರ ಒಕ್ಕಲಿಗ ಒಕ್ಕಲಿಗ ಒಕ್ಕಲಿಗಣ್ಣ ಬಿತ್ತೊ ಹೊನ್ನ ಸುತ್ತ ಸುರಿಯಿತು ಸುರಿಮಳೆಯೊ ಸುರಿಮಳೆಯೊ. ಹಸರ ಬೆಳೆಯು ಭೂತಾಯಿ ಭೂತಾಯಿ ಮಗಿಮಳೆಯಾಗಿ ಹೂ ಬೆಳಸಿ ಹೂ ಬೆಳಸಿ. ಹಕ್ಕಿಯ ಹಬ್ಬ...

– ಪಲ್ಲವಿ – ಬೇಗನೆ ಬಾ, ಬರಲಿರುವಾ ಸವಿದಿನ ನೀನು… ಸಾಗಿಸುವೆನು ಇಂದಿನ ಈ ಕಹಿಬವಣೆಯನು! ೧ ನಿನ್ನೆಯ ದಿನ ಹೋಯ್ತು, ಸಾಗಿ ಬೇಕಿಹುದನು ಕೊಡಲೆ ಇಲ್ಲ; ಇಂದಿನ ದಿನ ನಡೆದಿರುವುದು ಹೇಗೊ ಕಾಲ ಸವೆಯುತಿಹುದು, ಬೇಕಾದುದು ಬರಲೆ ಇ...

ಸಮಾಜ ಜಾಗೃತಿಯ ಅರಿವು ಪರಿವರ್‍ತನೆಯ ಮೆಟ್ಟಿಲು. ಆಧುನಿಕತೆ ಭರಾಟೆಯ ಈ ದಿನಗಳಲ್ಲಿ ಆಚರಣಾಯೋಗ್ಯ ಧಾರ್‍ಮಿಕತೆ, ಸಂಸ್ಕೃತಿ ಸಂಪ್ರದಾಯಗಳನ್ನು ಭಾರತೀಯ ಪುರಾತನ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ...

ಮನ್ಸ ಎಲ್ಲಿಂದ ಎಲ್ಗೋದ್ರೂನೆ ಬಾಯ್ ಇತ್ತಂದ್ರೆ ಬದಕ್ದ; ಮೆತ್ಗಿತ್ತಂದ್ರೆ-ಆಳ್ಗೊಂದ್ ಕಲ್ಲು! ತಕ್ಕೊ! ಇಡದಿ ತದಕ್ದ! ೧ ಯಿಡಿದ್ ದಬಾಯ್ಸಿ ಗಸೀಟೇಂದ್ರೆ ಬತ್ತು ತುಂಬಿದ್ ದೊನ್ನೆ! ಒಳ್ಳೆ ಮಾತ್ನಾಗ್ ತತ್ತಾಂತಂದ್ರೆ ಮೊಕ್ಕ್ ಮೂರ್‍ನಾಮ! ಸೊನ್ನೆ! ...

ಕವಿಗಳಿಗೆ ಗುರುವು ತಾನೆಂಬ ಗರುವಿಕೆಯ ಮರು- ಭೂಮಿಯ ಮರೀಚಿಕಾಜಲಪಾನಲೋಲನಾ- ಗುವನು ಅರೆಗಳಿಗೆ, ಬಿಡಿಕರಡುಗವಿತೆಯ ಮೊದಲ ಒಂದೆರಡು ಸಾಲುಗಳ ಲೀಲೆಯಲಿ ಬರೆದ ಬಡ- ಗಬ್ಬಿಗನು ಕೂಡ; ಸ್ವಕಪೋಲಕಲ್ಪಿತದ ಕೀ- ರ್‍ತಿಯ ಪ್ರತಿಧ್ವನಿಯು ತುಂಬುವದು ಕಿವಿಗವಿಯ...

ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾಗಿಯೂ ನಮ್ಮ ಊರಿನ ಪರಿಸ್ಥಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ ಇರುವದಿಲ್ಲ,ಐದಾರು ಸಾವಿರ ಜನವಸತಿ ನಮ್ಮೂರಿನದು. ಇತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ ಎಲ್ಲ ...

ಜಗದ ನಗುವಾಗಿ ಸೊಗದ ಬೆಳಕಾಗಿ ಆ ರೋಗ್ಯದಚ್ಚರಿಯೊಳನುದಿನವು ಬಪ್ಪಾ ಉಷೆಯ ಸೊ ಬಗನೆಲ್ಲರೊಳೆಲ್ಲೆಲ್ಲೂ ಉಳಿಸಿದರದನನು ರಾಗದೊಳೌಷಧಿ ಎನಬೇಕಲ್ಲದೊಡಿದೇನು ರೋಗವೋ ಕೃಷಿವಿಷವನೌಷಧಿ ಎನಲು – ವಿಜ್ಞಾನೇಶ್ವರಾ *****...

ಕಾಗಲ್ಲೂ ಕರಿಗಲ್ಲೂ ಕಟ್ಟೆ ಮ್ಯಾಗಿನ ಕಲ್ಲೂ ಆ ಕಲ್ಲೀನ ಹೆಸರೂ ಹೂಲಿ ಯಪ್ಯಾಽ ||೧|| ಹುಲಿಯಪ್ಪನ ತಳವೇ ಗಡಿ ಮೇಲೆ ಕೋಲೇ ಸುಂಗುಳೀ ಮರನಡಿಗೇ ನೆಲಿಗೊಟ್ಟಾ ಕೋಲೇ ||೨|| ಜಂಗುಮಾರ್ ಹುಡುಗೀ ಕಾವಲೂ ಕೋಲೇ ಕಾಗಲ್ಲೂ ಕರಿಗಲ್ಲೂ ಕಟ್ಟೆ ಮ್ಯಾಗಿನ ಕಲ್ಲೂ...

ಬ್ಯಾರಿಕೇಡಿನ ಬಳಿಯಲ್ಲಿ ಯುದ್ದವು ಭಯಂಕರವಾಗಿ ನಡೆಯು ತಿತ್ತು. ಮೇರಿಯಸ್ಸನು ಪ್ರಾಣರಕ್ಷಣೆಗೆ ತಕ್ಕ ಆಧಾರವೇ ಇಲ್ಲದೆ ಯುದ್ದ ಮಾಡುತ್ತ, ಗುರಿಯೆಡಲವಕಾಶವೇ ಇಲ್ಲದೆ ಸುಮ್ಮನೆ ಗುಂಡುಗಳನ್ನು ಹೊಡೆಯುತ್ತಿದ್ದನು. ಅವನು ಅರ್ಧಕ್ಕಿಂತಲೂ ಹೆಚ್ಚಾಗಿ ತನ...

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ ಆದರೂ ನಿನ್ನ ಅವಗುಣ ಬಿಡಲಾರೆ ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ ನನಗಿರುವವನು ನೀನೊಬ್ಬನೆ ಅಲ್ಲವೆ! ನೀನೇ ನನ್ನನ್ನು ಮೋಸಗೊಳಿಸಿದರೆ ಯಾರ ಮುಂದೆ ನಾ ಹೇಳಿಕೊಳ್ಳಬಲ್ಲ...

ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; “ನಾಳೆ”ಯೆಂಬೆಯೊ?-ನಾಳೆ ಸೇರುವೆನು ನೂರ್‍ಕೊಟಿ ನಿನ್ನೆಗಳ ಜೊತೆಗೆ. *****...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...