ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ ಹಳ್ಳ ಕೊಳ್ಳ ತಿರುಗ್ಯಾಡಿ ಬಂದೆ. ಕಾರಮಳೆಯೆ ಕಪ್ಪತಮಳೆಯೆ ಸುರುಮಳೆಯೆ ಸುರಿಮಳೆಯೆ. ಸುರಿಮಳೆಯಾದರ ಒಕ್ಕಲಿಗ ಒಕ್ಕಲಿಗ ಒಕ್ಕಲಿಗಣ್ಣ ಬಿತ್ತೊ ಹೊನ್ನ ಸುತ್ತ ಸುರಿಯಿತು ಸುರಿಮಳೆಯೊ ಸುರಿಮಳೆಯೊ. ಹಸರ ಬೆಳೆಯು ಭೂತಾಯಿ ಭೂತಾಯಿ ಮಗಿಮಳೆಯಾಗಿ ಹೂ ಬೆಳಸಿ ಹೂ ಬೆಳಸಿ. ಹಕ್ಕಿಯ ಹಬ್ಬ...

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ...

ಕನಸಿಗರಿಗೆ ಮಾಸವೇಕ ಕಣಸುತರುವ ಕಾರ್ತಿಈಕ! ನಿಯತಿ ತನ್ನ ಬಿಡುವಿಗೆಂದು ಮೀಸಲಿಡುವ ಕಾಲವಿಂದು. ನಿಗಿ ನಿಗಿ ನಿಗಿ ನಗುವ ಹಗಲು, ಝಗಿ ಝಗಿ ಝಗಿ ಝಗಿಸುವಿರಳು. ಬಹು ಮನೋಜ್ಞ ಲಲಿತ ಮಧುರ- ರಾಗ ರಚಿತ, ಭಗಣರುಚಿರ ಭಾವದೀಪ್ತ ಸಂಧ್ಯೆ!-ಎಂತು ನುಡಿವೆನಿದ...

ಶಿಂದೀಗಿ ತಳದಳದಲ್ಲಿ ಸಂಗಮ್ಮನಽ ತಳ| ಶಂಭೋ ಮಠದೇವ ಇಂದುದಯನಾಗೊ| ಜೋ ಜೋ|| ಭಂಗಾರ ತೊಟ್ಟೀಲ ಧೊರಿತಾಯಿ! ಕುಂದಲ| ಸಿಂಗರದಾನ ಶ್ರೀಕೃಷ್ಣಗ ಛಂದಾಗಿ ತೂಗಾರಿ| ಜೋ…|| ಕರೆದು ಬಂದೆವು ಓಣಿ ನೆರೆದು ಬಂದಿತು ಮಂದಿ| ಬಂದು ನಿಂತಾರವ್ವ ಕನ್ನಿ ಮು...

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು. ಪ್ರತಿ ...

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ, ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ, ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ, ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧...

ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ ಕನ್ನಡ ವಿರೋಧಿ ಸಮರಕ್ಕೆ ಕನ್ನಡಾಂಬೆಯ ಕ್ಷೇಮವ ಕಾಯುತ ಕನ್ನಡರಥ ಮುನ್ನಡೆಸೋಕೆ ಅನ್ನವನುಂಡು ವಿಷವನು ಉಗುಳುವ ನಿರಭಿಮಾನಿಗಳ ಧಿಕ್ಕರಿಸಿ ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ ಅಭಿಮಾನಿಗಳ ಪುರಸ್ಕರಿಸಿ ನಡೆಯಲಿ ಕನ್ನಡ ...

“ಅಬ್ಬಬ್ಬಬ್ಬಬ್ಬ” ಶಿವರುದ್ರಪ್ಪನವರು ಮುಖವನ್ನು ಟವಲಿನಿಂದ ಒರೆಸಿಕೊಂಡು ಗಾಳಿ ಬೀಸಿಕೊಳ್ಳುತ್ತಾ ಹೇಳಿದರು: “ಅದೇನ್ ಸೆಕೆ ಮಾರಾಯ, ಈ ಹಾಳು ಬಿಸ್ಲು … ಛೆ …. ಛೆ … ಛೆ…” “ನೋಡ್...

ಈಗ ಹೊರಬಂತೆಲ್ಲ ಸತ್ಯ, ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ; ಯಾರೇನೆ ಆಡಲಿ ಅಪಥ್ಯ ಭಂಡನುಡಿಗಳ ಕೊಂಚ ಸಹಿಸಿಕೊ ಸುಳ್ಳನೆಂಬುದು ಸಿದ್ಧವಾದರೂ, ತನ್ನೊಳಗೆ ಅಥವ ನೆರೆಹೊರೆಗೆ ನಾಚದಂಥವರ ಜೊತೆ ಸ್ಪರ್‍ಧೆ ಹಿರಿಜೀವ ನಡೆಸೀತು ಹೇಗೆ? ಹುಚ್ಚು ಬೆರಳಾಡಿದರು...

ಪ್ರತಿಭಾ ನಂದಕುಮಾರ್ ಮತ್ತೊಮ್ಮೆ ಬಂದಿದ್ದಾರೆ. ‘ನಾವು ಹುಡುಗಿಯರೇ ಹೀಗೆ’ ಎಂದು ದಶಕಗಳ ಹಿಂದೆ ಹೇಳಿದ ಅವರೀಗ ‘ಮುದುಕಿಯರಿಗಿದು ಕಾಲವಲ್ಲ’ ಎನ್ನುತ್ತಿದ್ದಾರೆ. ಇದು ಕವಯತ್ರಿಯೊಬ್ಬರ ಬದುಕಿನ ಪಯಣದಂತೆಯೂ ಅವರ ಕಾವ್ಯದ ಪಯಣದಂತೆಯೂ ಕಾಣುತ್ತಿದೆ. ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...