ಮುನಿಯನ್ ಬೋಣಿ

ಮನ್ಸ ಎಲ್ಲಿಂದ ಎಲ್ಗೋದ್ರೂನೆ
ಬಾಯ್ ಇತ್ತಂದ್ರೆ ಬದಕ್ದ;
ಮೆತ್ಗಿತ್ತಂದ್ರೆ-ಆಳ್ಗೊಂದ್ ಕಲ್ಲು!
ತಕ್ಕೊ! ಇಡದಿ ತದಕ್ದ! ೧

ಯಿಡಿದ್ ದಬಾಯ್ಸಿ ಗಸೀಟೇಂದ್ರೆ
ಬತ್ತು ತುಂಬಿದ್ ದೊನ್ನೆ!
ಒಳ್ಳೆ ಮಾತ್ನಾಗ್ ತತ್ತಾಂತಂದ್ರೆ
ಮೊಕ್ಕ್ ಮೂರ್‍ನಾಮ! ಸೊನ್ನೆ! ೨

ಲೋಕದ್ ಚಾಲ್ ಅಂತಂದ್ರೆ-ಮುನ್ಯ-
ಬಲೆ ಇಕ್ಕಟ್ಟಿನ್ ಓಣಿ!
ಈ ಚಿಕ್ ಓಣೀನ್ ಬಡಾಯ್ಸಾಕೆ
ನಿಂದ್ ಆಗ್ಲಣ್ಣ ಬೋಣಿ! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಶಿಷ್ಯ
Next post ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…