ಮುಟ್ಟದಿರು ದೂರಸರಿ, ಎದೆಹೀನ ವಿಷಕನ್ನೆ ಮೋಹಿಸುವ ಮುಖರೂಪ ಜೇನ್‌-ಸವಿಯ ರಸಗೆನ್ನೆ ಸೆರಗು ಮರೆಯಾಗಿರಿಸಿ ಕರೆಯುತಿಹ ಕಣ್‌-ಸನ್ನೆ. ತುಂಬಿದೆದೆ, ನಳಿದೋಳು ಚೆಂದುಟಿಯ ರಸದ ಕೆನೆ ಒಗ್ಗೂಡಿ ನಿನ್ನಲ್ಲಿ ಚಲ್ವಿಕೆಯೆ ಮೈವೆತ್ತು ಚಣ ಚಣಕು ಚುಂಬಿಸಿದೆ ಕಣ್ಮನಕೆ ರಂಭಿಸಿದೆ ಚಂದ್ರನೆದೆ ರೋಹಿಣಿಯ ಸವಿಗನಸ ಬಿಂಬಿಸಿದ...

ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು ಸಾಹಸವನೊಂದ ಕೈಕೊಂಡು ನಡೆದೆ: ಕೊನೆಗಾಣಿಸುವ ಶಕ್ತಿಯ ಕೊಡು,- ಸಮುದ್ರನಾಥ! ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು: ಇಂದಿನ ನನ್ನ ಏಕಾಂತವಾಸವನು ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆ...

ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ...

ಅಧ್ಯಾಯ ಹದಿನೆಂಟು ಕನ್ನಡ ಚಿತ್ರರಂಗಕ್ಕೂ ಹರಿಶ್ಚಂದ್ರನ ಬದುಕನ್ನು ಕುರಿತ ಚಿತ್ರಗಳಿಗೂ ವಿಚಿತ್ರವಾದ ನಂಟು ಇರುವಂತೆ ಕಾಣುತ್ತದೆ. ೧೯೪೩ರಲ್ಲಿ ಸುಬ್ಬಯ್ಯ ನಾಯ್ಡು ಮತ್ತು ಇತರರು ಎ.ವಿ.ಎಂ. ಸಂಸ್ಥೆಯ ನೆರವಿನೊಡನೆ ತಯಾರಿಸಿದ ಕನ್ನಡದ ‘ಸತ್ಯ ಹರಿಶ...

ರ್‍ಯೂಹೈ ಎಂದರೆ… ಚೀನಾ ಭಾಷೆ, ವಿಷಕಾರಿ, ರಾಸಾಯನಿಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಬೃಹತ್ ಸಂಗ್ರಹವಿದ್ದ ಗೋದಾಮು ಎಂದು ಅರ್ಥ. ದಿನಾಂಕ ೧೨-೦೮-೧೫ ರ ರಾತ್ರಿ ೧೧.೨೦ ಸುಮಾರಿಗೆ ಈ ರ್‍ಯುಹೈನಲ್ಲಿ ಭಾರೀ ಅನರ್ಥ ಸಂಭವಿಸಿದೆ. ಅಲ್ಲಿ ಅವಳಿ ಸ್ಫ...

ನಿನ್ನ ನಾನು ಪ್ರಿತಿಸುವೆನು ಶ್ಯಾಮ ಮಧುರ ಯಾಮಿನಿ ನಿನಗಾಗಿಯೆ ಹಾತೊರೆವೆನು ಸ್ವಪ್ನ ಲೋಕ ಸ್ವಾಮಿನಿ. ನೀ ಬಂದರೆ ಇಳೆಗಿಳಿವುದು ಅತುಲ ದಿವ್ಯ ಶಾಂತಿಯು ನಿನ್ನಿರುಳಲಿ ಕರುಳಿಗೆಲ್ಲಿ ಸಂಸಾರದ ಭ್ರಾಂತಿಯು ಉಕ್ಕಿಸುತ್ತ ಕಾಳ್ಗಡಲನು ಬ್ರಹ್ಮಾಂಡವ ಮುತ...

ಅಲ್ಲಿಂಕು ಇಲ್ಲಿಂಕು ನಡುವಿಲ್ಲ ‘ಲಿಂಕು’ ಬರಿ ಮಸಿಯ ಗೊಣ್ಣೆ. ಪಿತ್ತ ಕೆರಳಿದ ಹಾಗೆ ಮೂಕ- ಸನ್ನೆ. ಒಪ್ಪಿಗಿಲ್ಲ ಮಾತು ತಿಳಿಯಲಿಲ್ಲ ತಪ್ಪಿಗೇ ಬಣ್ಣ ಬಳೆದು ಹೊಸದೆಂದು ತಿಳಿದು. ಹೊಟ್ಟೆಯೊಳೆ ಕಣ್ಣು ಹಿಂಭಾಗ ಮೂಗು ಕಿವಿಯಿರುವ ಜಾಗದ...

ಒಮ್ಮೆ ಒಂದು ಪಕ್ಷಿ, ಗೂಡಿನಲ್ಲಿಟ್ಟ, ಮೊಟ್ಟೆಯನ್ನು ದಿಟ್ಟಿಸಿ ನೋಡುತಿತ್ತು. ಈ ಮೊಟ್ಟೆಯಿಂದ ಹೊರ ಬರುವ ನನ್ನ ಮರಿ ಹಕ್ಕಿ, ಎಷ್ಟು ಕಠಿಣ ಜಗತ್ತನ್ನು ಎದುರಿಸಬೇಕೆಂದು ಯೋಚಿಸುತಿತ್ತು. ಗಾಳಿ-ಮಳೆ, ಗುಡುಗು-ಮಿಂಚು, ಶತ್ರುಮಿತ್ರರ ಹಾವಳಿಯಿಂದ ಹೇ...

ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯ...

ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...