ರ್‍ಯೂಹೈ ಎಂದರೆ… ಚೀನಾ ಭಾಷೆ, ವಿಷಕಾರಿ, ರಾಸಾಯನಿಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಬೃಹತ್ ಸಂಗ್ರಹವಿದ್ದ ಗೋದಾಮು ಎಂದು ಅರ್ಥ.
ದಿನಾಂಕ ೧೨-೦೮-೧೫ ರ ರಾತ್ರಿ ೧೧.೨೦ ಸುಮಾರಿಗೆ ಈ ರ್‍ಯುಹೈನಲ್ಲಿ ಭಾರೀ ಅನರ್ಥ ಸಂಭವಿಸಿದೆ. ಅಲ್ಲಿ ಅವಳಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಗೋದಾಮಿನ ಕಟ್ಟಡ ಛಿದ್ರವಿಚಿದ್ರವಾಗಿದೆ.
ಈ ಸ್ಫೋಟದಿಂದ ಸಿಡಿದ ಬೆಂಕಿಯ ತುಣುಕುಗಳಿಂದ ಸುತ್ತಮುತ್ತಲಿನ ಕಟ್ಟಡ ಹಾಗೂ ಗೋದಾಮುಗಳಿಗೂ ಬೆಂಕಿ ಹತ್ತಿಕೊಂಡಿದೆ.
ಇಲ್ಲಿ ಇನ್ನೊಂದು ದುರಂತವನ್ನು ಹೇಳಲೇಬೇಕು! ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ೨೧ ಮಂದಿ ಬೆಂಕಿಗೆ ಆಹುತಿಯಾಗಿರುವರು.
ಇದು ಉತ್ತರ ಚೀನಾದ ಪ್ರಮುಖ ಬಂದರು ಪಟ್ಟಣ ಟೈನ್‌ಜಿನ್‌ನ ಪ್ರದೇಶವಾಗಿದ್ದು ಈವರೆಗೆ ೫೦ ಮಂದಿ ಮೃತರಾಗಿರುವರು.
ಈ ಸರಣಿ ಸ್ಫೋಟದಲ್ಲಿ ೭೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ ೭೧ ಗಾಯಾಳುಗಳ ಸ್ಥಿತಿ-ಗತಿ ತುಂಬಾ ಗಂಭೀರವಾಗಿದೆ.
ಈ ದುರಂತದಲ್ಲಿ ಇನ್ನೊಂದು ದುರಂತವೆಂದರೆ… ಸುಮಾರು ೨೧ ಮಂದಿ ಈಗಾಗಲೇ ನಾಪತ್ತೆಯಾಗಿರುವರು.
ಅಬ್ಬಾ! ಸುರಕ್ಷತೆಯ ತೀವ್ರ ದೃಷ್ಠಿಯಿಂದ ಸ್ಫೋಟದ ಸ್ಥಳದಿಂದ ಸುಮಾರು ೧೦,೦೦೦ ಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆಂದು ಅಲ್ಲಿನ ಅಧಿಕಾರಿಗಳು ಈಗಾಗಲೇ ದೃಢಪಡಿಸಿರುವರು.
ಈ ಘಟನಾ ಸ್ಥಳದಲ್ಲಿ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕಿರುವ ಸಾಧ್ಯತೆಗಳಿವೆಯೆಂದೂ ಇನ್ನೂ ಸಾವು ನೋವಿನ ಸಂಖ್ಯೆ ದುಪ್ಪಟ್ಟಾಗುವ ಎಲ್ಲ ಅವಕಾಶಗಳು ಹೆಚ್ಚಿವೆಯೆಂದೂ ಇದು ಬೃಹತ್ ಚೀನಾದಲ್ಲಿನ ಈವರೆಗಿನ ಬಹು ದೊಡ್ಡ ಕೈಗಾರಿಕಾ ಅವಘಡವಾಗಿಯೆಂದೂ ಚೀನಾದ ರಕ್ಷಣಾ ಕಾರ್ಯಕರ್ತರು ತೀವ್ರ ಶಂಕೆ ವ್ಯಕ್ತಪಡಿಸಿರುವರು!
ಮುದ್ದು ಮಕ್ಕಳೆ. ಈವತ್ತು ನಾವೆಲ್ಲ ಭಾರಿ ಭಾರೀ ಮುಂದುವರೆದಿದ್ದೇವೆಂದು ಭ್ರಮಿಸಿದ್ದೇವೆ. ಅಪಾಯ-ದುರಂತ ಸಂಭವಿಸಿದಾಗ ಅದರಿಂದ ಪಾರಾಗಲು ಇನ್ನು ಸಾಧ್ಯವಾಗುತ್ತಿಲ್ಲವೆಂಬುದನ್ನು ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು. ಗರ್ವ ಪಡಲು ಇಲ್ಲಿ ಅಂಥಾ ಸಾಧನೆಯಾಗಿಲ್ಲವೆಂಬುದನ್ನು ಅರಿತು ವಿನಯದಿಂದ ಬಾಳಿದರೆ ಜೀವನ ಸಾರ್ಥಕವಾಗುವುದು ಅಲ್ಲವೇ??
*****


















