ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ಅಂಗುಲ ಹುಳವೊಂದು ತನ್ನ ಬದುಕ ಅಂಗುಲ ಅಂಗುಲ ಅಳೆಯುತಿದೆ ಯಾವುದೊ ಸಿಹಿಯೆಲೆಯಾಸೆ ಯಾವುದೊ ಇಬ್ಬನಿ ಬಯಕೆ ಈ ಹುಳವಿನ ತಲೆಯೊಳ ಹೊಕ್ಕು ಹರೆಯುಸಿತಿದೆ ತೆವಳಿಸುತಿದೆ ದಾರಿ ಸಾಗುವುದಿದೆ ಬಹಳ ದೂರ ಪಕ್ಕದಲೇ ಒಂದು ಕಾಗೆ ಎಡ ತಲೆಬಾಗಿಸಿ ಬಲ ತಲೆಬಾಗಿಸಿ...

ನನ್ನ ಜುಟ್ಟನದಾರು ಮೆಚ್ಚರು ನೋಡು ನೋಡಿದರಾವುಟ ನನ್ನ ನೇಹಿಗರೆಲ್ಲರಚ್ಚರಿ ನನ್ನ ತಲೆಯೇ ಬಾವುಟ. ‘ಭಟ್ಟವಂಶದಿ ಹುಟ್ಟ ಪಡೆದುದು ಸಾರ್ಥವೆನಿಸಿದನೀ ಭಟ ಮ್ಲೇಚ್ಛರಿದಿರೊಳು ಸ್ವೇಚ್ಛೆಯಿಂದಲಿ ಮತವ ಮೆರೆದಿಹನೇಹಟ!’ ಎಂದು ಮುತ್ತಣ್ಣಾದಿ...

ಯಾವ ಗೋರಿಯಲಿ ಯಾರ ಶವವಿದೆ ಏನು ಹೆಸರು ನನಗೇನು ಗೊತ್ತು? ಯಾವ ಚಹರೆ, ಯಾವ ಬಣ್ಣ, ಯಾರಿಗೆ ಗೊತ್ತು? ಯಾಕೆ ಕೊಲೆಯಾದೆ, ಯಾರು ಕೊಂದರು ಕೊಲೆಗಾರನ ಹೆಸರು ಗೊತ್ತಿಲ್ಲ ನನಗೆ, ಗೋರಿಗಳ ನಿಶಾನೆ ಅಳಿಸಿ ಹೋಗುತ್ತಿವೆ ಹೊದಿಸಿದ ಆ ಚಾದರದ ಮೇಲಿನ ಹೂ ತುಸ...

ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು. ಅಬ್ಬಾ! ಮೇಯರ್‌ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳ...

ಕಾಡಿನ ಮೃಗಗಳು ಒಂದೆಡೆ ಸೇರಿ ಬಿಸಿ ಬಿಸಿ ಚರ್ಚೆಗೆ ತೊಡಗಿದವು ಮರಗಳ ಕಡಿದಾ ಮನುಜರಿಗೆ ಹಿಡಿ ಹಿಡಿ ಶಾಪ ಹಾಕಿದವು ಮನುಜನ ಕೃತ್ಯಕೆ ಮರುಗಿದವು ಪರಿಹಾರಕೆ ದಾರಿ ಹುಡುಕಿದವು ಕಾಡನು ಉಳಿಸುವ ಬಗೆಯದು ಹೇಗೆ ಎಂಬಾ ಚಿಂತನೆ ನಡೆಸಿದವು ಮರಗಳ ನೆಡುವಾ ಕ...

ಜಗದಗಲ ಮುಗಿಲಗಲ ಮೆರೆದಂತ ಹಂಪೆ ಏಕಾದೆ ನೀನಿಂದು ಈ ಹಾಳು ಹಂಪೆ ವೀರಾಧಿ ವೀರರಿಗೆ ಜನ್ಮವಿತ್ತರೇನು ನಾಲ್ಕಾರು ದಿಕ್ಕಿಂದ ಜಯ ತಂದರೇನು ನೂರಾರು ವರುಷಗಳು ನೀ ಮೆರೆದರೇನು ಕಡೆಗಾಲದಲಿ ಶೌರ್ಯ ಬರಿದಾಯಿತೇನು!? ಸಂಗೀತ ಸಾಹಿತ್ಯ ಸುಧೆ ಹರಿಸಿ ಅಂದು ಬ...

ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ ಮಲಗಿದಳೆಂದರೆ ಹೇಳದ ಕೇಳದ ನಿದ್ದಿ ತೆಕ್ಕಿ ಬಡಿಯುತ್ತಿತ್...

ಸರಿಗಮ- ಪದನಿ ಸಪ್ತಸ್ವರ ರಾಗ ನಾ ಹಾಡಲು ಕೋಗಿಲೆ ಹಾಕಿದ ರಾಗರಂಜಿನಿ ವಿನೋದದಲಿ ಕನ್ನಡ ತಾಯೆ ಸ್ವರವಾಗಿ ಬಾ|| ಸ್ವರಮೇಳ ತಾಳನಾಟ್ಯ ಸಮ್ಮಿಲನದ ಅನುರಾಗ ಗೀತೆ ರಸದೌತಣದಲಿ ಮಿಂದು ಸಂಗೀತ ನಾದ ನಿನಾದ ಓಕುಳಿಯಲಿ ನಲಿವಾಗಿ ಬಾ|| ಬಾ ತಾಯೆ ಬಾ ಕನ್ನಡ ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೂರ ಆ ಕಂಬಕ್ಕೆ ಕಟ್ಟಿಬಿಡಿ ಕುದುರೆ, ನಾಯಿ ಬೊಗಳದೆ ಇರಲಿ, ಘೋರ ಕಾಳಗ ನಾಳೆ, ಸೋತು ನಾಗರಿಕತೆ ಮಣ್ಣಾಗದಿರಲಿ; ಡೇರೆಯೊಳಗಡೆ ಸೀಜರ್, ಕೈಯಲ್ಲೂರಿದ ತಲೆ ಯಾವುದೋ ಧ್ಯಾನ, ಶೂನ್ಯ ಸುರಿಯುವ ನೋಟ, ಎದುರು ಹರಡಿದ ನಕ್ಷೆ...

ಅವ್ವ ತೀರಿಕೊಂಡ ನಂತರ ಆ ದೊಡ್ಡ ಮನೆಯಲ್ಲಿ ನಾನೊಬ್ಬಳೇ… ಊಹಿಸಿಕೋ… ಇಡೀ ದಿನ… ಇಡೀ ರಾತ್ರಿ ಅವ್ವನ ರೂಮಿನಲ್ಲಿಯೇ, ಮಂಚದ ಬಳಿಯೇ ಕುಳಿತುಬಿಡುತ್ತಿದ್ದೆ. ಅವ್ವನ ಬಟ್ಟೆಗಳು, ಸೀರೆಗಳನ್ನಪ್ಪಿಕೊಂಡು ಹುಚ್ಚಿಯಂತೆ ಅಳುತ್ತಿದ್ದ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...