ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ನೋಡದಿರೆಲೋ! ಪಾಪಿ! ಕಣ್ಣೆತ್ತಿ, ಸಾಗುತಿಹ ಅಂಗನೆಯ. ಅಂಗಾಂಗವಿರಲು ಅಸ್ತವ್ಯಸ್ತ,- ಇವಳಲ್ಲ ನೃತ್ಯಾಂಗನೆಯ ಗೆಳತಿ. ತಾ ಮಸ್ತ- ಕದಿ ಹೊತ್ತ ಉದಕಪಾತ್ರೆಯ ಭಾರ, ಬಗಲಲಿಹ ಬಿಂದಿಗೆಯಲಂಕಾರದಿಂದ ಬಳಕುವ ದೇಹ- ವವಳದದು. ಇತ್ತಿಲ್ಲ ನಿನಗೌತಣವ ವಸ್ತ್ರ- ...

ಪ್ರೀತಿಯ ತಂದೆಯ ಪ್ರೇಮದ ಪರಿಮಳ ತಿಳಿಸಲು ಶಬ್ದವೆ ನನಗಿಲ್ಲಾ ಅಪಾರ ಖುಶಿಯನು ಸ್ವರ್‍ಗದ ಸುಖವನು ಅಳೆಯಲು ಅಳತೆಯೆ ಸಿಗಲಿಲ್ಲಾ ಹರ್‍ಷದ ಹೊಸಯುಗ ಚಂದವ ನೋಡಿದೆ ಮಮತೆಯ ಮಂದಿರ ನಾ ಕಂಡೆ ಕ್ಷಣಕ್ಷಣ ಹೊಸಗುಣ ಶಿವಗುಣ ಸದ್ಗುಣ ಪಾವನ ಪರಿಮಳ ಪಡಕೊಂಡೆ ಅ...

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕ...

ಕಯ್ಞಾದ್ ಔಸ್ದಿ ಕುಡದೋನಂಗೆ ಮೊಕಾನ್ ಯಾಕ್ ಸಿಂಡರ್‍ಸ್ತಿ? ನಿಂಗೊಂದ್ ದುಕ್ಕ ಬಂದಿದ್ರ್, ಅದನ ನಂಗಳ್ ಮುಂದ್ ಯಾಕ್ ಇರ್‍ಸ್ತಿ? ನಮಗ್ಯಾಕ್ ದುಕ್ಕ ತರ್‍ಸ್ತಿ? ಮುಕದಾಗ್ ಸೋನೆ ಯಿಡಕೊಂಡಂಗೆ ಗೋಳ್ಯಾಕ್ ಸುಂಕೆ ಸುರ್‍ಸ್ತಿ? ೧ ದುಕ್ಕಾನ್ ಒತ್ಕೊಂಡ್ ...

ಇಂದಿನರಸನಿಗೇಕೆ ನಾಳನಾಳುವ ಚಿಂತೆ? ಇಂದು ರಸವನು ಸವಿವುದವಗೆ ಸಾಜ. ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು? ಹೊತ್ತು ಮೂಡಲು, ಇಂದುಗಿಲ್ಲ ತೇಜ. ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ ಸತ್ತ ಹೊತ್ತಿನ ನೆರಳು ಇಂದು ಅಲ್ಲ. ನಾಳಿನ ಭವಿಷ್ಯಕ್...

ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾ...

ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ *****...

ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ || ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ || ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ಮೈನೆರೆದ ವಿಷಯ ಊರಲ್ಲೆಲ್ಲಾ ತಿಳಿಯಿತು. ಅವಳ ಪ್ರಸ್ತದ ದಿನ ಬಡಬಗ್ಗರಿಗೆ ಊಟ ಬೇಕಾದ ಹಾಗೆ ಬೀಳುವುದೆಂದು ಯಾವ ಜ್ಯೋತಿಷ್ಯರೂ, ಜೋಯಿಸ ಹೇಳದಿದ್ದರೂ ಸುತ್ತಮುತ್ತಿನ ಬಡವರೆಲ್ಲ...

ನನ್ನ ಉಸಿರಿನ ಹನಿ ಹನಿಗಳಲಿ ಮೀಯಲಿ, ನೆನೆಯಲಿ ಹರಿನಾಮ ನನ್ನೆದೆಗೆ ನೀಡಲಿ ತಂಪು ನನ್ನ ಬಾಳಿಗಾಗಲಿ ಕಂಪು ಉಸಿರು ಉಸಿರಲಿರಲಿ ಜಪ ಜಪವಿರದ ಗಾಳಿ ಒಳ ಹೋಗದಿರಲಿ ಪಾಪದ ಧೂಳಿ ಹೊಕ್ಕದಿರಲಿ ಶಾಪದ ಮೈಲಿಗೆ ತಟ್ಟದಿರಲಿ ಮಾತಿರಲಿ ಹಾಡಿರಲಿ ಮೌನವಿರಲಿ ಕ್...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...