ಪ್ರೀತಿಯ ತಂದೆಯ ಪ್ರೇಮದ ಪರಿಮಳ
ತಿಳಿಸಲು ಶಬ್ದವೆ ನನಗಿಲ್ಲಾ
ಅಪಾರ ಖುಶಿಯನು ಸ್ವರ್‍ಗದ ಸುಖವನು
ಅಳೆಯಲು ಅಳತೆಯೆ ಸಿಗಲಿಲ್ಲಾ
ಹರ್‍ಷದ ಹೊಸಯುಗ ಚಂದವ ನೋಡಿದೆ
ಮಮತೆಯ ಮಂದಿರ ನಾ ಕಂಡೆ
ಕ್ಷಣಕ್ಷಣ ಹೊಸಗುಣ ಶಿವಗುಣ ಸದ್ಗುಣ
ಪಾವನ ಪರಿಮಳ ಪಡಕೊಂಡೆ
ಅಮೃತ ರಸದಲಿ ಪಟಪಟ ಪುಟದಿದೆ
ದೇವನ ಗಾನದ ಕಾರಂಜಿ
ಕೂಗುವ ಕುಣಿಯುವ ತೂಗುವ ಹಾರುವ
ನಾವೇ ಅವನಾ ಅಪರಂಜಿ
ಸಕಲರ ಮನದಲಿ ಹರಗುರು ವೀಣೆಯು
ಮಿಡಿಯಲಿ ಸತ್ಯದ ಝೇಂಕಾರಾ
ಸದ್ಗುರು ಶಿವನಾ ಡಮಡಮ ಡಮರುಗ
ಮಾಡಲಿ ಶಿವಯುಗ ಸಾಕಾರಾ
*****