ಸರಿಗಮ- ಪದನಿ
ಸಪ್ತಸ್ವರ ರಾಗ ನಾ ಹಾಡಲು
ಕೋಗಿಲೆ ಹಾಕಿದ ರಾಗರಂಜಿನಿ
ವಿನೋದದಲಿ ಕನ್ನಡ ತಾಯೆ ಸ್ವರವಾಗಿ ಬಾ||
ಸ್ವರಮೇಳ ತಾಳನಾಟ್ಯ
ಸಮ್ಮಿಲನದ ಅನುರಾಗ ಗೀತೆ
ರಸದೌತಣದಲಿ ಮಿಂದು ಸಂಗೀತ
ನಾದ ನಿನಾದ ಓಕುಳಿಯಲಿ ನಲಿವಾಗಿ ಬಾ||
ಬಾ ತಾಯೆ ಬಾ ಕನ್ನಡ ತಾಯೆ ಬಾ||
ಹಸಿರು ತೋರಣ ಸುಧೆಯಲಿ
ವನಸುಮರಾಶಿ ಪುಷ್ಪ ತರುಲತೆ
ಬೆಡಗಿನಂದದ ರೂಪದಲಿ
ಕಾಲ್ಗೆಜ್ಜೆಯ ನೂಪುರ ಝೇಂಕಾರನಾದ
ಸಿರಿಯಲಿ ನಲಿದಾಡು ಬಾ
ತಾಯೆ ಬಾ ಕನ್ನಡ ತಾಯೆ ಬಾ||
*****