ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ಹಸುವಿನ ಹೆಸರು ಯಶೋದಾ ಅದರ ಬಣ್ಣ ಊದಾ ಅದೊಂದು ಕರುವನು ಈದ ಸಂಗತಿಯೇನು ಪ್ರಮಾದ? ಅದರಿಂದೆನಗೀ ಕವಿತೆಯ ಬಾಧ ಪ್ರಾಸವ ಬರೆವ ವಿನೋದ. ನಾನದಕಿತ್ತುದು ನೂರು ರುಪಾಯಿ ಮಧ್ಯಸ್ಥಿಕೆಗಿರೆ ರಂಗಾಬೋಯಿ ನೆರೆಮನೆಯೊಳಗಿದಕಾಯಿತು ಸಾಲ ಬಿತ್ತರಿಸಿತೆಮ್ಮ ಮಮತೆ...

ತಾಯಿ ದೊರಕುತ್ತಾಳೆ ಇಲ್ಲಿ ಅಗ್ಗದ ದರದಲ್ಲಿ ತಾಯಿಯ ತಾಯ್ತನ ಬಂದಿತು ವ್ಯಾಪಾರೀಕರಣದ ಕಕ್ಷೆಗೆ ಜಾಗತೀಕಕರಣದ ಉದ್ಯಮಕೆ. ತಾಯಿಯ ಗರ್‍ಭವೂ ಬಿಡದೆ ಮಾರುಕಟ್ಟೆಗೆ ತಂದಿದ್ದೇವೆ ದುಡ್ಡಿನ ದಣಿಗಳೇ ಬನ್ನಿ ಮಾರಾಟದ ಬೋಲಿಗಳನು ಎಗ್ಗಿಲ್ಲದೆ ಕೂಗಬನ್ನಿ. ಹ...

ಅಗತ್ಯಕ್ಕೆ ತಕ್ಕಷ್ಟು ಮಳೆಬೇಕು, ಮಳೆ ಬರದೇ ಇದ್ದರೂ ಆಗದು ಅಥವಾ ಕುಂಬದ್ರೋಣ ಮಳೆಯಾದರೂ ಕಷ್ಟವಾಗುತ್ತದೆ. ಯಾವಾಗ ಮಳೆ ಬರುತ್ತದೆ, ಬರುವದಿಲ್ಲ, ಎಂಬುದನ್ನು ತಿಳಿದುಕೊಳ್ಳಲೆಂದೇ ವಿಜ್ಞಾನಿಗಳು ಸಂಶೋಧನೆ ನಡೆಯಿಸಿ ಒಂದು ಉಪಕರಣವನ್ನು ಕಂಡುಹಿಡಿದಿ...

ಚಿನ್ನಾರಿ ಚಿನ್ನ ಲಗೋರಿ ಚೆನ್ನ ಆಡೋಣ ಬೇಗ ಬಾ ರತ್ತೋ ರತ್ತೋ ರಾಯನ ಮಗಳ ಹುಡುಕೋಣ ನಾವು ಬಾ ಗೋಲಿ ಗಜ್ಜುಗ ಆಡೋದು ಹೇಗೆಂದು ಕಲಿಯೋಣ ಈಗ ಬಾ ಮರವನ್ನು ಹತ್ತಿ ಮರಕೋತಿ ಆಟ ಆಡಿನಲಿಯೋಣ ಬಾ ಕಣ್ಣಾಮುಚ್ಚಾಲೆ ಕಣ್ಮರೆ ಯಾಕೆ ಮತ್ತೊಮ್ಮೆ ಆಡೋಣ ಬಾ ಚೌಕಾ...

ದೂರದ ಸ್ವರ್ಗ ಬುವಿಗಿಳಿದು ಆಗಿದೆ ಕರುನಾಡು ಲೋಕದ ಕಣ್ಮನ ಸೆಳೆಯುತಿಹ ಸುಂದರ ಸಿರಿನಾಡು ||ಪ|| ಸುಂದರ ಸಿರಿನಾಡು ನಮ್ಮ ಕಲಿಗನ್ನಡನಾಡು ಶ್ರೀಗಂಧದ ಬೀಡು ಸರ್ವ ಚೇತನಮಯ ನಾಡು ||ಅ.ಪ|| ಕವಿ ಕೋಗಿಲೆಗಳು ಹಾಡಿರುವ ಸ್ಫೂರ್ತಿಯ ನೆಲೆವೀಡು ನಾಟ್ಯ ಸರ...

ಬೇಬಿ ವಸಂತನ ಸುದ್ದಿಯಲ್ಲದೆ ಇನ್ನಾರ ಸುದ್ದಿಯನ್ನೂ ಬರೆಯಬೇಡ ಎಂದು ಹೇಳಿದ್ದೀಯಾ. ಅವನ ವಿಷಯವನ್ನೇ ಬರೆಯುತ್ತೇನೆ. ಬೇಬಿ ನಿಲ್ಲುತ್ತಾನೆ; ಬೇಬಿ ಕೂತುಕೊಳ್ಳುತ್ತಾನೆ; ಬೇಬಿ ಮಲಗುತ್ತಾನೆ. ಬೇಬಿ ನಗುತ್ತಾನೆ; ಬೇಬಿ ಅಳುತ್ತಾನೆ ಬೇಬಿ ನಿದ್ರೆ ಮಾಡ...

ಕನ್ನಡತನವು ನಲಿಯುತ ಮನದಲಿ ಕನ್ನಡದಾ ಸಿರಿದೀಪ ಹಚ್ಚಿ ಬೆಳಗುತಲಿ ಬೆಳಕಾಗಿ ತೆರೆಮರೆಯಾಗಿಹರು ಇವರೇ ನಮ್ಮವರು ಕನ್ನಡಿಗರು|| ಅವರಲ್ಲಿವರು ಇವರಲ್ಲವರು ಅವರಿವರವರಿವರಲ್ಲಿ ಕೆಳೆಯ ಸಿರಿವಂತಿಕೆಯಲಿ ಬೆರೆತು ಬಾಳುವವರು ಇವರೇ ನಮ್ಮವರು ಕನ್ನಡಿಗರು ದಶ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ; ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ. ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ (ಉಳಿದೆಲ್ಲ ಅಳಿದರೂ ...

ನನಗೂ ವಯಸ್ಸಾಯ್ತಲ್ಲ ಚಿನ್ನು… ಜೊತೆಗೆ ಈ ಮಾನಸಿಕ ‘ಖಿನ್ನತೆ’ ಬೇರೆ… ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ… ಯಾರಾದರೂ ನೋಡಲು ಮಾತನಾಡಲು...

ನಾನು ಕಾಮುಕನೆಂದು ಹಳಿಯುವರು. ಗ್ರಂಥಗಳ- ನೋದಿ ನರಕವೆ ಲೇಸು ಈ ಪಶುವಿಗೆನ್ನುವರು. ನಾಲ್ಕು ದಿನ ತಮ್ಮ ಮಲಬದ್ಧತೆಯ ಕಳೆದವರು ಇವನು ವ್ರಣಕಾಯನೆಂದೊರಯುವರು ಪಂಥಗಳ ಡಾಂಭಿಕರು ಜರೆಯುವರು ಅಂಥ ಇಂಥವುಗಳಾ ವಂಧಾನದವನೆಂದು. ಈ ಜನರ ಕೊಲ್ಲಲೆನೆ ಒಂದು ಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...