ಚಿನ್ನಾರಿ ಚಿನ್ನ
ಲಗೋರಿ ಚೆನ್ನ
ಆಡೋಣ ಬೇಗ ಬಾ
ರತ್ತೋ ರತ್ತೋ
ರಾಯನ ಮಗಳ
ಹುಡುಕೋಣ ನಾವು ಬಾ
ಗೋಲಿ ಗಜ್ಜುಗ
ಆಡೋದು ಹೇಗೆಂದು
ಕಲಿಯೋಣ ಈಗ ಬಾ
ಮರವನ್ನು ಹತ್ತಿ
ಮರಕೋತಿ ಆಟ
ಆಡಿನಲಿಯೋಣ ಬಾ
ಕಣ್ಣಾಮುಚ್ಚಾಲೆ
ಕಣ್ಮರೆ ಯಾಕೆ
ಮತ್ತೊಮ್ಮೆ ಆಡೋಣ ಬಾ
ಚೌಕಾಬಾರ ಆಟದಿಂದ
ಸೋಲು ಗೆಲುವು
ಸವಿಯೋಣ ಬಾ
ಅಡುಗೆ ಗುಡುಗೆ
ಮಾಡಿಕೊಂಡು
ಗೊಂಬೆಯನ್ನಿಟ್ಟು ಆಡೋಣ ಬಾ
ಟಿ.ವಿ.ಯ ಮುಂದಿನ
ಮಕ್ಕಳನೆಲ್ಲಾ ಬಯಲಿಗೆ
ಕರೆಯೋಣ ಬಾ.
*****