ಅಗತ್ಯಕ್ಕೆ ತಕ್ಕಷ್ಟು ಮಳೆಬೇಕು, ಮಳೆ ಬರದೇ ಇದ್ದರೂ ಆಗದು ಅಥವಾ ಕುಂಬದ್ರೋಣ ಮಳೆಯಾದರೂ ಕಷ್ಟವಾಗುತ್ತದೆ. ಯಾವಾಗ ಮಳೆ ಬರುತ್ತದೆ, ಬರುವದಿಲ್ಲ, ಎಂಬುದನ್ನು ತಿಳಿದುಕೊಳ್ಳಲೆಂದೇ ವಿಜ್ಞಾನಿಗಳು ಸಂಶೋಧನೆ ನಡೆಯಿಸಿ ಒಂದು ಉಪಕರಣವನ್ನು ಕಂಡುಹಿಡಿದಿದ್ದಾರೆ. ಮ್ಯಟ್ರಾಮಾರ್‍ಕೋನಿ ಅತ್ಯಾಧುನಿಕ ಮೈಕ್ರೋವೇವ್ ಸೆನ್ಸರನ್ನು ರೂಪಿಸಿದೆ. ಈ ಉಪಕರಣದ ಹೆಸರು ಆಡ್ವಾನ್ಸ್‌ಡ್ ಮೈಕ್ರೋವೇವ್ ಸೌಂಡಿಂಗ್ ಯುನಿಟ್ ಎಂದು. ಅಮೇರಿಕಾದ ನ್ಯಾಶನಲ್ ಓಷಿಯಾನಿಕ್ ಅಂಡ್ ಅಟ್ಮಾ ಸ್ಫೆರಿಕ್ ಅಡ್ಮಿನಿಸ್ಟ್ರೇಷನ್ ಎಂಬ ಸಂಸ್ಥೆ ಈಗಾಗಲೇ ಈ ಸೆನ್ಸರ್ ಉಪಕರಣವನ್ನು ಉಪಗ್ರಹದ ನೆರವಿನಿಂದ ಒಂದು ನಿರ್ದಿಷ್ಟ ಕಡೆಯೊಳಗೆ ಕಳಿಸಿದೆ. ನಮಗೀಗ ಲಭ್ಯವಿರುವ ವಾತಾವರಣದ ವಿಸ್ತಾರಿಸಲ್ಪಟ್ಟ ಪ್ರದೇಶವನ್ನು ಇದು ಗುರುತಿಸುತ್ತದೆ. ಮೋಡಗಳ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಈ ಅತ್ಯಾಧುನಿಕ ಉಪಕರಣದ ನೆರವು ಪಡೆದು ಮಳೆಯ ಆಗಮನವನ್ನಷ್ಟೇ ಅಲ್ಲದೇ ವರ್ಷಾತಾಪವನ್ನು ನಿರ್ಧಿಷ್ಟವಾಗಿ ತಿಳಿದುಕೊಳ್ಳಬಹುದು. ವಿಪರೀತ ಮಳೆ ಸುರಿಯುವದರಿಂದ ಆಗುವ ಅಸ್ತವ್ಯಸ್ತವನ್ನು ಸಾಧ್ಯವಾದಷ್ಟು ಪಡೆಯಬಹುದು. ಇದರಿಂದ ಪರ್ಜನ್ಯಜಪದ, ಸೋಗುಹಾಕುವ ಜನಕ್ಕೆ ಒಂದಿಷ್ಟು ಬುದ್ದಿಬರಲಿದೆ.
*****
