ಮರಿ ಇಲಿ ಬಂದಿತು ಪರಿಚಯ ಮಾಡಲು ಕೆಂಪು ಕೆಂಪು ಹೊಸ ಗಡಿಗೆಯನು ಅವ್ವನು ಕಂಡು ಕೋಪಿಸಿಕೊಂಡು ಬಿಟ್ಟೇ ಬಂದಳು ಅಡಿಗೆಯನು ಗದೆಯನು ಎತ್ತಿದ ಭೀಮನ ಹಾಗೆ ಹಿಡಿದಳು ಮೂಲೆಯ ಬಡಿಗೆಯನು ಹೊಸ ಹೊಸ ಗಡಿಗೆಯು ಚೂರಾಯ್ತು ಮರಿ ಇಲಿ ಬಿಲದಲಿ ಪಾರಾಯ್ತು! *****...

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/ ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/ ಬಾತ್ ರೂಮು ಕ್ಲೀನಾಗಿ...

ಯಂಗೀಸ್ರ್ ಔರೆ ಊವ್ ಇದ್ದಂಗೆ- ನಲುಗಿಸ್ ಬಾರ್‍ದು ಔರ್‍ನ! ಒಂದ್ ಚೋಟುದ್ದ ಊವಂತ್ ಅದ್ನ ಒದ್ದೋನ್ ಇಂದ್ರ ಉದ್ದಾರ್ ಆದ್ನ! ಯಂಗೀಸ್ರೌರೆ ಊವಿದ್ದಂಗೆ- ನಲುಗಿಸ್ ಬಾರ್‍ದು ಔರ್‍ನ! *****...

ಯಾರ ಬರುವ ಕಾಯುತಿರುವೆ? ಯಾರ ದೆಸೆಗೆ ನೋಯುತಿರುವೆ? ಯಾರಿಗಾಗಿ ಸಾಯುತಿರುವೆ? ಜೀವ ಜೀವವೇ! ದಿನಬೆಳಗೂ ನಿರುಕಿಸುವೆ, ದೆಸೆದೆಸೆಗೂ ಗಿರುಕಿಸುವೆ, ಮೊಗಮೊಗಗಳ ಪರಕಿಸುವೆ, ಜೀವ ಜೀವವೇ! ಕುಣಿವುದಾವ ಲಯಕೆ ನೀನು? ತುಡಿವುದಾವ ಜಗಕೆ ತಾನು? ಆಸೆ-ಬಸಿರ...

ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರ...

ಗಂಡ ಹೆಂಡಿರ ಜಗಳದೊಳು ಕೂಸು ಬಡವಾ ದಂತಾಯ್ತಲಾ ಕೂಪ ಮಂಡೂಕ ನ್ಯಾಯದೊಳು ಗಂಡಿಂದೇನು ಕಮ್ಮಿ ತಾನೆನುತ ಲೋಕವನರಿಯುವ ವಾಂಛೆಯೊಳು ಅಂಬೆಯರಡುಗೆಮನೆವಾರ್‍ತೆ ತೊರೆಯುತಿರೆ ನಂಮ್ಮೊಳನ್ನದರಿವೇ ಕನ್ನದೊರೆಗಳಿಗಾಹುತಿಯಾಗುತಿದೆ – ವಿಜ್ಞಾನೇಶ್ವರಾ ...

ತಂದನಾನ ತಂದನಾನ ಗುರುವೇ ತಂದನಾನ ತಂದನಾನ ತಂದನಾನ ದೇವರ ತಂದನಾನ || ೧ || ಪಟ್ಟಣಶೆಟ್ಟಿ ಪಟ್ಟಣದೊಳಗೆ ತಂದನಾನ ಅಲ್ಲಿ ಇದ್ದನೊಬ್ಬ ಪಟ್ಟಣದೊಳಗೆ ತಂದನಾನ || ೨ || ಅಲ್ಲಿ ಏನ ಏನ ಐಸರ್‍ಯ ನೋಡ್ವೇ? ತಂದನಾನ ಏನ ಏನ ಸೋಜಿಗವ ನೋಡ್ವೇ? ತಂದನಾನ || ೩...

ಬರೆದವರು: Thomas Hardy / Tess of the d’Urbervilles ತಾತಯ್ಯನವರ ಕಚೇರಿಗೆ ನರಸಿಂಹಯ್ಯನು ಶಂಭುರಾಮಯ್ಯ, ಮಲ್ಲಣ್ಣನವರ ಜೊತೆಯಲ್ಲಿ ಬಂದಿದ್ದಾನೆ. ಈಡಿಗದಲ್ಲಿ ಒಂದು ವಿವೇಕಾನಂದ ಪಂಥವನ್ನು ಸ್ಥಾಪಿಸುತ್ತೇವೆ. ಆ ಸಂದರ್ಭದಲ್ಲಿ ಆರಂಭ ಭಾಷಣವಾ...

ಕಾನನದ ನೀರವತೆಯ ಮೌನದಲ್ಲೂ ಕಂಡ ಪ್ರಭುವಿನ ಚೈತನ್ಯ ಧಾಮ ಅಂತಃಕರಣದ ಕರಳು ಬಿರಿಯಿತು ಕಾತರಿಸಿತು ತನುವಿನ ರೋಮ ರೋಮ ನಿಮ್ಮ ಪಾದಾರವಿಂದದಲಿ ನಾನು ಸುರಿಯುವೆ ಆರಳುವ ಮೊಗ್ಗು ಮತ್ತೆ ಮತ್ತೆ ನಾನು ರೋದಿಸುವೆ ಮನದಲಿ ಪುಟವುದು ಹಿಗ್ಗು ಹಿಗ್ಗು ಯಾವ ಕ...

ಮತ್ತೊರ್‍ವನಿಂತೊರೆದನ್ : “ಅದನೊಪ್ಪೆನಾವನುಂ ಸಂತಸದಿ ತಾಂ ಕುಡಿವ ಕುಡಿಕೆಯನು ಮುರಿಯಂ; ಆದರದಿ ಜಾಣ್ಮೆಯಿಂದೊಡರಿಸಿದ ಬಟ್ಟಲನು ಕೋಪದಿಂದೊಡೆವುದೇನದು ತಕ್ಕುದಲ್ಲಂ.” *****...

ಬೇಲಿ ಮರೆಯಲಿ ಯಾರಿಗೂ ಕಾಣದೆ ನಿಂತು ಬೀಳ್ಕೊಂಡಿತೊಂದು ಜೀವ ದಿನಗಳು ಮುಗಿದುವೊ ತಿಂಗಳು ಉರುಳಿದುವೊ ಒಂದರ ಮೇಲೊಂದು ವರ್‍ಷಗಳು ಸಾಗಿದುವೊ ಆಶಾಢಗಳು ಬಂದು ಹಾದು ಹೋದುವೊ ಶ್ರಾವಣಗಳು ಬಂದು ಕಳೆದು ಹೋದುವೊ ದಸರೆ ದೀಪಾವಳಿಗಳು ಬಂದು ಇಣುಕಿ ಹೋದುವೊ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...