ಕಾನನದ ನೀರವತೆಯ ಮೌನದಲ್ಲೂ
ಕಂಡ ಪ್ರಭುವಿನ ಚೈತನ್ಯ ಧಾಮ
ಅಂತಃಕರಣದ ಕರಳು ಬಿರಿಯಿತು
ಕಾತರಿಸಿತು ತನುವಿನ ರೋಮ ರೋಮ
ನಿಮ್ಮ ಪಾದಾರವಿಂದದಲಿ ನಾನು
ಸುರಿಯುವೆ ಆರಳುವ ಮೊಗ್ಗು
ಮತ್ತೆ ಮತ್ತೆ ನಾನು ರೋದಿಸುವೆ
ಮನದಲಿ ಪುಟವುದು ಹಿಗ್ಗು ಹಿಗ್ಗು
ಯಾವ ಕ್ಷಣಗಳು ನುಸುಳಿ ಬರುವವೊ
ಕಾತರಿಸುವೆ ನಾನು ನಿತ್ಯ
ನಿಮ್ಮ ದರುಶನ ಭಾಗ್ಯಕ್ಕೆ ನಾನೆ
ಹಗಲಿರುಳು ಕೊನರುವೆ ಕಾಣಲು ಸತ್ಯ
ಬರಹದ ಅಕ್ಕರ ಅಕ್ಕರಗಳಲ್ಲೂ
ಕಾಣುವ ನಿಮ್ಮಯ ಪರಿಛಾಯೆ
ಎತ್ತೆತ್ತ ನಾನು ಇಣಕಿ ನೋಡಲು
ಕಾಣುವೆ ನಿಮ್ಮ ಲೀಲೆ ಮಾಯೆ
ಬರಬಾರದೆ ನೀನೊಮ್ಮೆ ಇಳೆಗೆ
ಉದ್ಧರಿಸಲು ಈ ಭವದ ಜೀವಿಗಳಿಗೆ
ನಿನ್ನ ಕೃಪೆಯೊಂದೇ ಸಲಹುದು
ಮಾಣಿಕ್ಯ ವಿಠಲ ಬಾಳಿಗೆ ಆಗಳಿಗೆ
*****