ಮತ್ತೊರ್‍ವನಿಂತೊರೆದನ್ : “ಅದನೊಪ್ಪೆನಾವನುಂ
ಸಂತಸದಿ ತಾಂ ಕುಡಿವ ಕುಡಿಕೆಯನು ಮುರಿಯಂ;
ಆದರದಿ ಜಾಣ್ಮೆಯಿಂದೊಡರಿಸಿದ ಬಟ್ಟಲನು
ಕೋಪದಿಂದೊಡೆವುದೇನದು ತಕ್ಕುದಲ್ಲಂ.”
*****