ಮಲ್ಲಿ – ೩೦

ಮಲ್ಲಿ – ೩೦

ಬರೆದವರು: Thomas Hardy / Tess of the d’Urbervilles

ತಾತಯ್ಯನವರ ಕಚೇರಿಗೆ ನರಸಿಂಹಯ್ಯನು ಶಂಭುರಾಮಯ್ಯ, ಮಲ್ಲಣ್ಣನವರ ಜೊತೆಯಲ್ಲಿ ಬಂದಿದ್ದಾನೆ. ಈಡಿಗದಲ್ಲಿ ಒಂದು ವಿವೇಕಾನಂದ ಪಂಥವನ್ನು ಸ್ಥಾಪಿಸುತ್ತೇವೆ. ಆ ಸಂದರ್ಭದಲ್ಲಿ ಆರಂಭ ಭಾಷಣವಾಗಬೇಕೆಂದು ಪಾರ್ಥನೆ.

ಶಂಭುರಾಮಯ್ಯನು “ರಾವ್ ಬಹುದ್ದೂರ್ ರಾಜಸೇವಾ ಪರಾಯಣ ಪುಟ್ಟಸಿದ್ದಯ್ಯ ನಾಯಕರು ತಮ್ಮ ಮನೆಯಲ್ಲಿ ಸದ್ಯಕ್ಕೆ ಸಂಘವಿರುವುದನ್ನು ಒಪ್ಪಿದ್ದಾರೆ. ಆಗಲೇ ತಿಂಗಳಿಗೆ ಎಂಟು ಆಣೆ ಕೊಡುವ ೫೦ ಜನ ಸದಸ್ಯರಾಗಿದ್ದಾತೆ.” ಎಂದು ಅರಿಕೆಮಾಡಿದ್ದಾನೆ.

ತಾತಯ್ಯನನರು ವಿವರಗಳನ್ನು ಒಂದೊಂದಾಗಿ ಕೇಳಿದರು.

“ಏನೋ ನೀವೇನು ಮಾಡುತ್ತೀರಿ?”

“ವಿವೇಕಾನಂದರ ಗ್ರಂಥಗಳನ್ನು ಓದಿಸಿಕೇಳುತ್ತೇವೆ.”

“ಯಾರು ಓದುವವರು?”

ನರಸಿಂಹಯ್ಯನೋರು.?

“ಅವರಿಗೇನಾದರೂ ಕೊಡುತ್ತೀರೋ?”

“ಈನ್ನೂ ಏನೋ ಗೊತ್ತಾಗಿಲ್ಲ.”

“ಅಲ್ಲರೀ, ಯಾವನ್ಯಾಯ? ಹಜಾನನಿಗೆ ಕೊಡುತ್ತೀರಿ ಥೋಬೀಗೆ ಕೊಡುತ್ತೀರಿ, ಬಾಡಿಗೆ ಕೊಡುತ್ತೀರಿ, ದೀಪಕ್ಕೆ ಎಣ್ಣೆಗೆ ಕೊಡುತ್ತೀರಿ ನಿಮಗೋಸ್ಕರ ಆ ಹುಡುಗ ದಿನವೂ ಬಂದು ಹೋಗ ಬೇಕಾದರೆ ಬಿಟ್ಟಿಬಂದು ಹೋಗಬೇಕೆ ?”

“ಇಲ್ಲ ರಾಯರೇ, ದಿನ ಗಾಡಿ ಕಳುಹಿಸುತ್ತೀನಿ”

“ಆ ಹುಡುಗ ಇರುವುದು ಹಳೆಯ ಅಗ್ರಹಾರ, ನಿಮ್ಮ ಹತ್ತಿರ ಬಂದು ಹೋಗುವುದರ ಜೊತೆಗೆ ಕಾಲೇಜ್ಗೆ ಬೇರೆ ಹೋಗಬೇಕು. ಏನು ನರಸಿಂಹಯ್ಯ, ಕೊನೆಗೆ ಏನುಮಾಡಿದೆ ? ಸಂಸ್ಕೃತ ಕಾಲೇಜಿಗೆ ಸೇರಿದೆಯೋ ? ಎನ್ಟ್ರೆನ್ಸ್ಗೆ ಸೇರೆದೆಯೊ.”

” ತಮ್ಮ ಅಪ್ಪಣೆಯಂತೆ ಎನ್ಟ್ರೆನ್ಸೆಗೇ ಸೇರಿದೆ, ಸಾರ್!”

“ಒಳ್ಳೆಯ ಕೆಲಸಮಾಡಿದೆ. “ನಮ್ಮ ವೈದಿಕ ವಿದ್ಯೆಗೆ ತೇಜಸ್ಸು ಕಡಿಮೆಯಾಗುತ್ತಿದೆ. ಇನ್ನು ಮುಂದಕ್ಕೆ ಬರುಬರುತ್ತಾ, ಪುರೋಹಿತರು ಆಚಮ್ಯ ಎನ್ನ ಬೇಕಾದರೆ Drink water and proceed, ಎನ್ನುವಘಟ್ಟವೂ ಬರುವುದೇನೋ? ದಿನ ದಿನವೂ ತೇಜಸ್ವಿನಾ ಅವಧೀತ ಮಸ್ತು ಅನ್ನುತ್ತಲೇ ಇದ್ದರೂ ತೇಜಸ್ಸು ಮಾತ್ರ ಕುಂದುತ್ತಿದೆ. ಈ ತೇಜಸ್ಸು ಮತ್ತೆ ಇಂಗ್ಲಿಷ್ ಅಧ್ಯಯನದಿಂದ ಬರಬೇಕಾಗಿದೆ, ಬಹುಶಃ ಇದು ಪರಮಹಂಸರ ಯುಗ. ಅನಕ್ಷರಸ್ಥನಾದರೂ ತಪಸ್ವಿಯಾದ ಗುರು; ಅಕ್ಷರಸ್ಥನಾಗಿ ವಿದ್ವತ್ ಶ್ರೇಷ್ಠನಾದ ನರೇಂದ್ರ ಶಿಷ್ಯ : ಇಬ್ಬರ ಯೋಗ ವಿವೇಕಾನಂದನನ್ನು ಕೊಟ್ಟು ಭಾರತಿಯ ಗೌರವವನ್ನು ಉಳಿಸಿತು. ಹಾಗೆ ನಮ್ಮಲ್ಲಿ ತಪಸ್ವಿಗಳೂ ವಿದ್ವಾಂಸರೂ ಇಬ್ಬರೂ ಬೆಳೆಯಬೇಕು. ಬಹುಶಃ ಹೊಸಯುಗ ಬರುತ್ತಿದೆ, ಎಲ್ಲವೂ ಹೊಸ ದಾಗುತ್ತಿದೆ, ಎಲ್ಲವೂ ಹೊಸದಾಗಿ ಹಳೆಯ ಯುಗದ ಗುರುತಾದ ಈ ದಾಸ್ಯ ನೀಗಬೇಕು. ಈ ಹಾಳು ಇಂಪೀರಿಯುಲಿಸಂ ಎಂದು ಹೋಗುತ್ತ ದೆಯೋ? ಇಂಡಿಯಕ್ಕೆ ಎಂದು ಸ್ವಾತಂತ್ರ್ಯ ಬರುತ್ತದೋ?”

“ಈ ವಾರ್ನಲ್ಲಿ ಬ್ರಿಟಿಷರು ಗೆದ್ದರೆ ನಮಗೆ ಸ್ವಾತಂತ್ರ್ಯ ಕೊಡು ತ್ತೀವಿ ಅಂದಿದ್ದಾರಲ್ಲ ಸಾರ್?”

“ಈ ಬ್ರಿಟಿಷರು ಶುದ್ಧ ಕಳ್ಳರು, ಇವರಿಗೆ ಡಿ.ಡಿ. ಎಂದು ಹೆಸರು. ಗೊತ್ತೋ ? ಡಿ. ಡಿ. ಎಂದರೆ ಡಿಸೀಟ್ಫುಲ್ ಡಿಪ್ಲೊಮೆಸಿ ಎಂದು ಒಂದು, ಡೇಂಜರಸ್ ಡಿಪ್ಲೊಮೆಸಿ ಎಂದು ಇನ್ನೊಂದರ್ಥ. ಈಗ ಸೋಲುತ್ತಿದ್ದರೂ ಕೊನೆಯ ಸ್ಟೇಜಿನಲ್ಲಿ ಲೀಗ್ ಮ್ಯಾಚ್ ಆದ ಹಾಗೆ ಆಗುತ್ತದೆ ನೋಡಿಕೊಂಡಿರು, ಆಟ ಆಡೋಕೆ ಬೇರೆ ಕಪ್ ತೆಗೆದು ಕೊಳ್ಳೋಕೆ ಬೇರೆ, ಇವರೇ ಗೆಲ್ಲುತಾರೆ. ಅದು ಷ್ಯೂರ್ ! ಆದರೆ ಇವರು ಮಾತು ಉಳಿಸಿಕೊಳ್ಳುವ ನಂಬಿಕೆ ಇಲ್ಲ.”

“ಆಗ ತಿಲಕರು ಸುಮ್ಮನಿರುತ್ತಾರೆಯೇ ಸಾರ್ ; ಇತ್ತಕಡೆ ಆನ್ನಿಬೆಸೆಂಟರು ಸುಮ್ಮನಿರುತ್ತಾರೆಯೇ ಸಾರ್ ? ಇವರಿಬ್ಬರು ಸಾಕ ಲ್ಲವೆ ?”

“ಇಲ್ಲ ನರಸಿಂಹಯ್ಯೆ, ತಿಲಕರು ಎಷ್ಟೇ ಆಗಲಿ ಬಾಹ್ಮಣ. ಅದರಲ್ಲೂ ದ್ರೊಣನಂತಹ ಬ್ರಾಹ್ಮಣ, ಹೋರಾಡುವುದಕ್ಕೆ ಎಕ್ಸ್ ಲೆಂಟ್-ಅವರು ತಮ್ಮ ಯೋಗ್ಯತೆಬಲ್ಲರು ನೋಡು. ‘ಸ್ವರಾಜ್ಯ ಬಂದರೆ ಏನು ಮಾಡುತೀರಿ ಅಂದರೆ, I retire as a professor of mathematics.’ ಎನ್ನುತ್ತಾರೆ ನೋಡು. ಅದರಿಂದ ಅವರು ಎದುರು ಬೀಳುತ್ತಾರೆ : ಸೆರೆಮನೆಗೆ ಹೋಗುತ್ತಾರೆ : ಆನ್ನಿ ಬೆಸೆಂಟರು, International person. ಅವರನ್ನು ಹಿಡಿದಾಗ ಪ್ರಪಂಚದಲ್ಲೆಲ್ಲಾ ಗಲಭೆಯಾಗುತ್ತದೆ : ಮಾನ ಹೋಗುತ್ತದೆ. ಅದಕ್ಕೆ ಹೆದರಬೇಕು. ಆದರೆ ಬ್ರಿಟಿಷರಿಗೆ ಇಂಡಿಯ ಲೈಫ್ ಲೈನ್, ಇದನ್ನು ಬಿಟಾರೆ.? ಇದು ಬಿಡಬೇಕಾದರೆ ಇನ್ನೂ ಹತ್ತು ಎಂಡನ್ ಹುಟ್ಟಿ ಇವರ ನೌಕಾಬಲ ಮುರಿಯಬೇಕು? ಇವರು born sea-men. ಅಲ್ಲಿ ಇವರ ಪ್ರಾಣ ಇರುವುದು. ಅದನ್ನು ಭೇದಿಸಿದರೆ ಆಗ ಇವರು ಸಾಯುವುದು.?

* ಹಾಗಾದರೆ ಗತಿಯೇನು ? ಸಾರ್ ?”

“ಗತಿಯಿಲ್ಲದೆ. ಇಲ್ಲ: ಆದರೆ ನಮಗೆ ಇನ್ನೂ ಗೊತ್ತಿಲ್ಲ. ಈಗೀಗ ಕಾಂಗ್ರೆಸ್ ಪೆಟಿಷನ್ ಸ್ಟೇಜ್ನಿಂದ ಥ್ರೈಟಿನಿಂಗ್ ಸ್ಟೇಜಿಗೆ ಬರು ತ್ತಿದೆ. ಈ ಬನಿಯಗಳ ಗುಟ್ಟುಬಲ್ಲ ಇನ್ನೊಬ್ಬ ಬನಿಯಾನೇ ಬರ ಬೇಕು-ಗೋಖಲೆಯಿಂದ ಏನಾದರೂ ಆಗುತ್ತದೆಯೋ ಅಂದರೆ ಅವ ನೊಬ್ಬ ನವಾಬ ! ಆ ಸರ್ವೆಂಟ್ ಆಫ್ ಇಂಡಿಯ ಸೊಸೈಟಿಯಲ್ಲಿ ಕುಳಿತು “ತ್ಯಾಗವೈರಾಗ್ಯ ಬರಬೇಕು. Public life must be spiritualised’ ಅಂತಾನೆ. ಹಾಗೆಂದರೇನೋ ಅವನಿಗೇ ತಿಳೀದು- ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸ್ ಇನ್ನೂ ಅರ್ಬನ್ ಏರಿಯಾಬಿಟ್ಟು ಹಳ್ಳಿಗಳಕಡೆಗೇ ಹೋಗಿಲ್ಲ. ಇನ್ನು ಮುಂದಿನ ಸ್ಟೇಜ್ ಮಾಸ್ಸ್ಟೇಜ್. ಪರಿಶುದ್ಧವಾಗಿ, ರಾಮ ರಾಮ ಅನ್ನೋ, ಬನಿಯ ಆಫ್ ಬನಿಯಾಸ್ ಬರಬೇಕು- ಭಾರತೀದೇವಿ ಬಂಜೆಯಲ್ಲ ! ಆದರೆ ನಮ್ಮ ಕಾಲದಲ್ಲಿ ಸ್ವಾತಂತ್ರ್ಯ ಬರುತ್ತೋ ಇಲ್ಲವೋಅದೇ ಅನುಮಾನ ??.

“ಬಂದರೆ ಆ ಸ್ಪಾತಂತ್ರ್ಯ ಹೇಗಿರಬೇಕು 1 ಹೇಗಿರುತ್ತೆಸಾರ್ ?”

“ಏನೋ, ತುಂಟ, ಬೆಳಗೆದ್ದು ನನ್ನ ಕೆಲಸ ಎಲ್ಲಾ ಹಾಳುಮಾ ಡುತ್ತಿದ್ದೀಯೆ! ಭಾರತದ ಪುರುಷಾಮೃಗದ ಹಾಗೆ ನನ್ನ ಬುದ್ಧಿ ! ಲಿಂಗ ಕಂಡರೆ ಅದು ಪೂಜೆಗೆ ಕುಳಿತುಕೊಳ್ಳುತ್ತಿತ್ತಂತೆ. ನನ್ನ ಬುದ್ದಿ ಇಂಡಿಯ ಸ್ವಾತಂತ್ರ , ಅಂದರೆ ಕುಳಿತುಬಿಡುತ್ತದೆ. ಆಗಲೇ ಒಂಭತ್ತು ಗಂಟೆಯಾಗುತ್ತಾ ಬಂತು. ನಾನು ಒಂಭತ್ತೂವರೆಗೆ ಇಲ್ಲಿಂದ ಹೊರಡ ಬೇಕು. ಯಾರೋ ಅಲ್ಲಿ ಗಾಡಿ ಬಂದಿದೆಯೇನೋ? ”

” ನಮ್ಮ ಕುದುರೆಗಾಡಿಯಿದೆ. ?

“ಇದೆಯೋ, ನಮ್ಮ ಗಾಡಿ ಕಟ್ಟಬೇಡ ಅನ್ನೋ! ನಮ್ಮ ಬಸವೇಶ್ವರ ಹೋಗಿ ಬರಬೇಕಾದರೆ, ಕೈಲಾಸಯಾತ್ರೆ ಮಾಡ ಬೇಕಾಗೋಷ್ಟು ಹೊತ್ತು ಬೇಕು. ಇರಲಿ. ಏನಂದೆ? ಸ್ವಾತಂತ್ರ್ಯ ಹೇಗಿರಬೇಕು ? ಹೇಗಿರುತ್ತೆ? ಏನು ಥೀಸೀಸ್ ಬರೆಯುತ್ತೀಯೇನು ? ನೋಡು, ಮಗು, ಈ ಇಂಸೀರಿಯಲಿಸಂ ಬೇಟೆ ಹೊಡೆದು ಅದರ ಮೇಲೆ ಕಾಲಿಟ್ಟು ನಿಂತಿರುವ ಸಿಂಹ- ಇದನ್ನು ಯಾವುದೋ ಮೊಲ ಪಲ್ಟಿ ಹೊಡೆಸಿ ಬಾವಿಗೆ ಕೆಡವುತ್ತೆ. ಆಗ ಜಗತ್ತಿನಲ್ಲಿ ಡೆಮಾಕ್ರಸಿ ಬರುತ್ತೆ. ಮೆಜಾರಿಟಿ ರೂಲ್ ಬರುತ್ತೆ. ಕಾಮನ್ ಮ್ಯಾನ್ ಬಿಕಮ್ಸ್ ದಿ ಪಿವಟ್. ಪ್ರಜೆಗಳ ರಾಜ್ಯ, ಪ್ರಜಾಪ್ರತಿನಿಧಿಗಳು ಪ್ರಜೆಗಳ ಸೌಖ್ಯ ಕ್ಕಾಗಿ ಆಳುತ್ತಾರೆ. ಮೇಲು ಕೆಳಗು ಎಲ್ಲಾ ಕೊಚ್ಚಿ ಹೋಗುತ್ತೆ. ಮಾರ್ಕ್ಸ್, ಲೆನಿನ್, ಹೇಳುವಂತೆಯೇ ಅದರೂ ಆಗಬಹುದು.”

“ಆಗ ನಮ್ಮ ವರ್ಣ ಆಶ್ರಮ ಧರ್ಮ ಏನಾಗುತ್ತೆಸಾರ್ 1″

ತಾತಯ್ಯನವರು ನಕ್ಕುಬಿಟ್ಟರು. “ಹುಚ್ಚ. ಪ್ರಲಯವಾ ಗೋವಾಗ ನಮ್ಮ ಗುಡಿಸಲು ಇರುತ್ತದೆಯಲ್ಲವೆ ಸಾರ್ ಎಂದ ಹಾಗೆ ಮಾತನಾಡುತ್ತೀಯಲ್ಲ. ಬ್ರಾಹ್ಮಣ, ಬೌದ್ದ, ಕ್ರಿಸ್ತ ಮುಸಲ್ಮಾನ್ ನಾಲ್ಕು ಜಾತಿ ಈಗ ಲೋಕದಲ್ಲಿರುವುದು. ಈ ನಾಲ್ಕೂ ಇಂಪೀರಿಯ ಲಿಸ್, ಆಗಿಯೇ ಇವೆ. ಮಿಕ್ಕಮೂವರು ಎಲ್ಲರೂ ಒಂದೇ ಸಮ ಎಂದು ಬಾಯಲ್ಲಾದರೂ ಹೇಳುತ್ತವೆ. ಬ್ರಾಹ್ಮಣ ಮಾತ್ರ ಮಿಕ್ಕವರೆ ಲ್ಲರೂ ನನ್ನ ಶಿಷ್ಯರು: ಎಲ್ಲರೂ ನನ್ನ ಪಾದಪೂಜೆ ಮಾಡಿ ಎನ್ನುತ್ತಾನೆ. ಈ ಸ್ಪಿರಿಟ್ ಈಗ ಬರುತ್ತಿರುವ ಡೆನೊಕ್ರಾಟಿಕ್ ಸ್ಪಿರಿಟ್ಗೆ ವಿರುದ್ದ. ವರ್ಷಿಪ್ಮೆಂಟ್ ಅಂಡ್ ಮೆರಿಟ್ ಈಸ್ ಮೈ ಮೆನಾಪಲಿ ಅನ್ನೋ ಬ್ರಾಹ್ಮಣನಿಗೆ ಇನ್ನು ಸ್ಥಾನವಿಲ್ಲ. ದಶಾನಾಮೇಕಾದಶ ಆಗಬೇಕು. ಪರ್ಸನಲ್ ಮೆರಿಟ್ಗೆ ಕೂಡ ಕೆಲವುದಿನ ಸ್ಥಾನವಿಲ್ಲದೆ ಹೋಗ ಬಹುದು. ಗೆದ್ದಾಗ ಎರಡು ಮೂರುದಿನ ಶ್ರೀರಂಗಪಟ್ಟಣವನ್ನು ಬ್ರಿಟಿಷರು ಲೂಟಮಾಡಿದರಂತೆ. ತಾಳಿಕೋಟಿಯ ಯುದ್ಧವಾದ ಮೇಲೆ ಆರು ತಿಂಗಳು ತುರುಕರು ವಿಜಯನಗರ ಲೂಟಮಾಡಿದರಂತೆ. ಹಾಗೆ ಕೊನೆಯ ಘಟ್ಟದಲ್ಲಿ ಗೆದ್ದವರು-ಮೂರೂ ಮುಕ್ಕಾಲುಪಾಲು ಕಾಂಗ್ರೆಸ್ಸೇ ಗೆಲ್ಲುವುದು, ಈ ಲಿಬರಲ್ಸ್ ಮಾಡರೇಟ್ಸ್, ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಬ್ರಿಟಿಷ್ ಭಕ್ತರು-ಕಾಂಗ್ರೆಸ್ಸು ಉಗ್ರವಾಗಿ ಕಷ್ಟನಷ್ಟಗಳನ್ನು ಬಹುವಾಗಿ ಅನುಭವಿಸಿ ಕೊನೆಗೆ ಗೆಲ್ಲಬಹುದು. ಆಗ ಸಿಕ್ಕಾಪಟ್ಟೆ ಆಗುತ್ತದೆ. ಅನಾರ್ಕಿ ಬಂದೇಬರಬೇಕು. ಲೂಟಿಯೋ ಲೂಟಿ ಆಗಬೇಕು. ಅದು ಶ್ರೀರಂಗಪಟ್ಟಣದ ಲೂಟಿಯಾದರೆ ದೇಶದ ಅದೃಷ್ಟ! ಹಾಗಿಲ್ಲದೆ ವಿಜಯನಗರದ ಲೂಟಯಾದರೆ ದುರದೃಷ್ಟ. ಅದಿ ರಲಿ. ನಿನ್ನ ಮಾತಿಗೆ ಉತ್ತರಬೇಕಲ್ಲ. ಬ್ರಾಹ್ಮಣ ಆಂತರ್ಮುಖಿ ಯಾಗಿ ಖುಷಿಯಾದರೆ ಜಗತ್ತು ಅವನಿಗೆ ಒಂದು ಸ್ಥಾನವನ್ನು ಕೊಟ್ಟು ಪೂಜಿಸುತ್ತದೆ. ಆದರೇನು? ನಾವು ವಿನಾಯಕನ ಪೂಜೆ ಮಾಡಿದ ಹಾಗೆ ಅದು. ಯಾಕೆ ಅಂತೀಯೇನೋ ? ಇನ್ನು ಮುಂದೆ ಲಕ್ಷೀ ಪತಿಯ ಯುಗವಲ್ಲ: ಲಕ್ಷ್ಮಿಯಯುಗ. ಇನ್ನೂ ಮುಂದೆ ಆರಾಧ್ಯ ದೈವ ಹೆಣ್ಣು, ಹೊನ್ನು, ಮಣ್ಣು. ಆಗ ಬ್ರಾಹ್ಮಣನಿಗೆ ಸ್ಥಾನವಿಲ್ಲ. ವಿಜ್ಞಾನ, ತ್ಯಾಗ, ವೈರಾಗ್ಯ, ಅಹಿಂಸೆ ಸತ್ಯ ಎಂಬ ಪಂಚಾಂಗ, ಈಗ ನಮ್ಮ ಪಂಚಾಂಗ ಇರುವಂತೆ ರೆಫರೆನ್ಸ್ಗೆ ಎಲ್ಲರ ಬಾಯಲ್ಲೂ ಇರುತ್ತವೆ. ಈ ಲಕ್ಷ್ಮಿಯಯುಗ ಬೆಳೆದು ಅದು ರಾಕ್ಷಸಯುಗ ಲೂಟಿಯಯುಗ ಆಗುತ್ತದೆ. ಅದರ ಕೊನೆಗೆ ಮತ್ತೆ ಯಾವನೋ ಹುಟ್ಟಿ ಈ ಪಂಚಾಂಗ ಪುಕ್ತಕದ ಬದನೆಯ ಕಾಯಲ್ಲ: ಜೀವನವನ್ನು ನಿರೂಪಿಸಿರುವ ಗುರಿಗಳು ಎನ್ನುತ್ತಾನೆ ಆಗ ಕಾದಾಡಿ, ದಣಿದು ಸೊಪ್ಪಾಗಿ, ಸತ್ತಂತಿರುವ ಲೋಕ ಅವನ ಮಾತು ಕೇಳುತ್ತದೆ. ಆಗ ಬ್ರಾಹ್ಮಣ ಎಂಬ ಹೆಸರಿಲ್ಲದ ಬ್ರಾಹ್ಮಣ, ವರ್ಣಾಶ್ರಮದ ಹೆಸರಿಲ್ಲದ ವರ್ಣಾಶ್ರಮವನ್ನು ಒಪ್ಪಿಕೊಂಡ ಸಮಾಜ ಬರುತ್ತದೆ. ಆಗ ಈಗಿನ ಆಲ್ ಆರ್ ಈಕ್ವಲ್ ಫಾರ್ ಆಲ್ ಪರ್ಪಸಸ್ ಎಂಬುದು ಗುರಿಯಾಗಿ ನಿಂತು ಮ್ಯಾನ್ ಈಸ್ ಈಕ್ವಲ್ ಟು ಮ್ಯಾನ್ ಇನ್ ಸ್ಪಿರಿಟ್ ಓನ್ಲಿ ಎಂಬ ಅದ್ವೈತತತ್ವ ಜಗತ್ತಿನ ಮುಂದೆ ನಿಲ್ಲುತ್ತದೆ. Funda- mentally equal and functionally different ಎಂಬ ತತ್ವದ ಬೇಲೆ ಭೇದ-ಅಭೇದವನ್ನು ಒಪ್ಪಿಕೊಂಡು ಸಮಾಜ ಪುನರ್ರಚನೆಯಾಗುತ್ತದೆ. ಆದರೆ ಅದೆಲ್ಲಾ ವೀರವಸಂತರಾಯ ಬಂದಾಗ. ಬೆಳಗಿನ ಹೊತ್ತು ಮಾತಿನಲ್ಲಿ ಬಿದ್ದರೆ ದಿನದ ಕೆಲಸವೆಲ್ಲ ಕೇಡು. ಅದರಿಂದ ಇನ್ನುಮುಂದೆ ಅಮಾತು ಬೇಡ, ಸದ್ಯದ್ದು ಹೇಳು.”

ಎಲ್ಲರೂ ತಾತಯ್ಯನವರ ಭವಿಷ್ಯವಾಣಿ ಕೇಳಿ ಆಶ್ಚರ್ಯಪರವಶ ವಾಗಿದ್ದರು. ನರಸಿಂಹಯ್ಯನೇ ಮೊದಲು ಮಾತನಾಡಿದ :

” ಅದೇ ಸಾರ್ ಅ ಸಂಘದ ಆರಂಭ ಭಾಷಣ ”

“ಇವರೇನೋ ಕೇಳೋಕೆ ಬಂದಿರೋರು. ನಿಮ್ಮ ಹೆಸರು ಶಂಭುರಾಮಯ್ಯನವರಲ್ಲವೆ? ಕೇಳಿ ದೇವರು, ನೀವು ನಮ್ಮ ನರಸಿಂಹಯ್ಯನಿಗೆ ಒಂದು ಬೈಸ್ಕಲ್ ತೆಗೆದುಕೊಡಬೇಕು. ಅವನಿಗೆ ಈ ವರ್ಷದ ಫೀಸೆಲ್ಲಾ ಕೊಟ್ಟು ಬಿಡಬೇಕು. ಇಷ್ಟಕ್ಕೆ ಒಪ್ಪಿದರೆ ನಾನು ಬರುತ್ತೀನಿ. ಒಬ್ಬರನ್ನೊಬ್ಬರು ಎಕ್ಸ್ಪ್ಲಾಯಿಟ್ ಮಾಡೋಕೆ, ಬಿಟ್ಟಿ ಹಿಡಿದು ದುಡಿಸೋಕೆ ಬಂದು ಸಂಘ. ಕಟ್ಟಿದರೆ ನಾನು ಬರೋ ದಿಲ್ಲ.”

” ಆಗಬಹುದು ಸ್ವಾಮಿ.”

ಮಲ್ಲಣ್ಣ ಶಂಭುರಾಮಯ್ಯ ಇಬ್ಬರೂ ಮೊಕ ಮೊಕ ನೋಡಿ ಕೊಂಡು ಒಪ್ಪಿಕೊಂಡರು.

ನಮ್ಮ ಖಾವಂದ್ರು ಬಂದಾಗ ತಾವೊಂದು ಸಲ ಬರಬೇಕು. ಬುದ್ಧಿ.”

“ನಿಮ್ಮ ಖಾಮದ್ರು ಯಾರು ರಾವ್ ಬಹದ್ದೂರ್ ರೋ 1?

” ಹೌದು ಬುದ್ಧಿ.”

” ತಮ್ಮ ಹೆಸರೇನು ದೇವರು ?”

“ಇವರು ತತ್ವ ಬಹಳ ಚೆನ್ನಾಗಿ ಹೇಳುತಾರೆ ಸಾರ್.”

“ಹೂ. ಒಂದು ದಿವಸ ಕೇಳೋಣ. ನೋಡಿ ದೇವರು, ಕೋಪ ಮಾಡಿಕೊಳ್ಳ ಬೇಡಿ. ರಸ್ತೆಯ ಮಗ್ಗುಲಲ್ಲಿ ಒಂದು ನಾಯಿ ಸತ್ತು ಬಿದ್ದಿದ್ದರೆ ಹೇಳಿ. ಆದನ್ನು ಸರಿಯಾಗಿ ದಫ್ನ್ ಮಾಡಿಸೋಕೆ ನಮಗೆ ಪುರಸೊತ್ತಿದೆ. ಈ ಲಕ್ಬಾಧೀಶ್ವರರ ದರ್ಶನಕ್ಕೆ ನಮಗೆ ಪುರ ಸೊತ್ತಿಲ್ಲ. ಬೇಕಾದ್ರೆ ಅವರು ದಿವಾನರ ದರ್ಶನಕ್ಕೆ ಹೋಗೋಲ್ಲವೆ? ಮಹಾರಾಜರ ದರ್ಶನಕ್ಕೆ ಕಾದಿರೋಲ್ಲವೆ? ಅವರಿಗಿಂತ ನಾನು ಕಡಿಮೆಯಲ್ಲ. ರಾವ್ ಬಹದ್ದೂರ್ ಇಲ್ಲಿಗೆ ಬಂದು ನೋಡಿಕೊಂಡು ದರ್ಶನಕೊಟ್ಟು ಹೋದರೆ, ನಮಗೆ ಗೌರವ, ಸಂತೋಷ. ಅದಿಲ್ಲದೆ ನಾವು ಬಂದರೆ ‘ಸರಿ, ತಾತಯ್ಯಸಿಗೆ ಅರಿವು ಮರುಳಾಯಿತು : ಹೊರಟ ಲಕ್ಷ್ಮೀಪೂಜೆಗೆ,’ ಎನ್ನುತ್ತಾರೆ. ಕೊನೆಯ ಕಾಲದಲ್ಲಿ ಆ ಕೀರ್ತಿ ನಮಗೆ ಬೇಕಾಗಿಲ್ಲ. ಏನಂತೀಯೋ ನರಸಿಂಹಯ್ಯ !” ನರಸಿಂಹಯ್ಯನಿಗೆ ಆ ಮಾತು ಕೇಳಿ ಕಣ್ಣಲ್ಲಿ ನೀರು ಬಂದಿತ್ತು.

” ಈ ಮಾತು ಒಂದು ಸಾಕು ಸಾರ್. ತಮ್ಮನ್ನು ಅಜರಾಮ ಕರನ್ನು ಮಾಡೋಕೆ.”

” ಇದಕ್ಕೇ ನಿನ್ನ ಹುಚ್ಚುಮುಂಡೆ ಅನ್ನೋದು. ಟಿನ್ಸಿರ್ಸ ಏನು ಹೇಳಿದ ಮರೆತೆಯಾ ? ಅಜರನಂತೆ ಅಮರನಂತೆ! ಹುಟ್ಟಿದ ಎಲೆ ಯೆಲ್ಲಾ ಹಣ್ಣಾಗಬೇಕು: ಉದುರಬೇಕು ಇದು ಪ್ರಕೃತಿಯ ನಿಯಮ. ಅಜರ ಎಂದೆ. ಆಗಲೇ ಹಲ್ಲು ಉದುರಿದೆ : ಮೊಕ ಸುಕ್ಕು ಬಿದ್ದಿದೆ: ತಲೆ ಯಲ್ಲಿ ಕೂದಲೂ ಉದುರಿ ಹೋಗಿದೆ. ಇನ್ನು ಅಮರ ! ಯಾವತ್ತೋ ಒಂದು ಸಲ ಈ ಓವರ್ವರ್ಕ್ನಿಂದ ಹಾರ್ಟ್ ಅಫೆಕ್ಟ್ ಆಗಿ ಈ ಜೀವ ಗೊಟಕ್ ಎನ್ನುತ್ತದೆ. ಪೇಪರುಗಳಲ್ಲಿ ಒಂದಿಷ್ಟು, ಬರೀತಾರೆ : ಯಾಕೋ ಒಬ್ಬಿಬ್ಬರು ಮೀಟಿಂಗ್ ಮಾಡ್ತಾರೆ : ಇನ್ನೊಂದಿಬ್ಬರು ನನ್ನದೊಂದು ಫೋಟೋ ಹಾಕಿಕೊಂಡು ಅಯ್ಯೋ ಎನ್ನುತ್ತಾರೆ. ಎಲ್ಲಾ ಮುಗಿಯು ತ್ತದೆ. ಅಕೋ, ಒಂಭತ್ತೂವರೆ ಆಯಿತು. ಇನ್ನು ಎಳೋಣೋ ?”

“ಯಾವೊತ್ತು ಸಾರ್ 1?

ಇದಕ್ಕೇ ನಿನ್ನ ಫೂಲ್ ಅನ್ನೋದು. ಯಾವೊತ್ತೋ ನಿಮಗೆ ಬೇಕಾದದಿನ ಬಂದು ಕರೆದುಕೊಂಡು ಹೋದ. ಅದಕ್ಕೇನು ಹನುಮಂತ ರಾಯನ ಗುಡೀಗೆ ಹೋಗಿ ಪ್ರಶ್ನೆ ಕೇಳಿಬರಬೇಕೇ! ಶಂಭುರಾಮಯ್ಯ ನವರೇ, ನರಸಿಂಹಯ್ಯ ನಮ್ಮ ಹುಡುಗ, ಅದಕ್ಕೇ ಅಭಿಮಾನವಾಗಿ ನಾನು ಹುಚ್ಚು ಮುಂಡೆ, ಫೂಲ್, ಎಂದರೆ, ಅವನು ಅಯೋಗ್ಯ ಎಂದು ಕೊಂಡೀರಿ. ಅವನು ದೇವರಂಥವನು? ನೀವು ಅವನನ್ನು ಹಾಗೆ ಭಾವಿಸಿಯೇ ಕರೆಯಬೇಕು. ತಿಳೀತೋ?”

” ಅಪ್ಪಣೆ ಸಾರ್ ”

” ಏನು ಮಲ್ಲಣ್ಣನವರೆ, ನನ್ನ ಮಾತು ನಿಮ್ಮ ಅಭಿಮಾನಕ್ಕೆ ಕೊಡಲಿಪೆಟ್ಟು ಆಯಿತೇನೋ? ಮೊಕ ಪೆಚ್ಚು ಮಾಡಿಕೊಂಡು ಕೂತಿದ್ದೀರಿ? ಆಗಲಿ, ನಿಮಗೂ ಸಂತೋಷವಾಗಲಿ. ಬರುತ್ತೇನೆ ನಿಮ್ಮ ರಾವ್ ಬಹದ್ದೂರ್ರು ನಮಗೆ ಗೊತ್ತಿಲ್ಲದವರಲ್ಲ. ಅವರನ್ನು ಕೌನ್ಸಿಲ್ಲಿಗೆ ನಾಮನೇಟ್ ಮಾಡಿದ್ದಾರೆ. ಅಲ್ಲಿ ನಾವಿಬ್ಬರೂ ಸೇರು ತ್ತೇವೆ. ಅವರೂ ನಾವೂ ಕೌರವ ಪಾಂಡವರ ಹಾಗೆ ಅಷ್ಟೆ ! ಆಗಲಿ. ಯಾವಾಗಲಾದರೂ ಬಂದು ಕರೆದುಕೊಂಡು ಹೋಗಿ, ಬರುತ್ತೇನೆ. ಇನ್ನು ಏಳೋಣವೋ ??

” ತಾವು ಹೋಗಿ ಗಾಡಿಕಳುಹಿಸಿಕೊಡಿ ಸಾರ್, ನಾವು ಹೋಗು ತ್ತೇವೆ.”

“ನೆಸಿಸ್ಸಿಟಿ ನೋಸ್ ನೋಲಾ: ನಮಗೆ ಅವಸರ, ಹಾಗೇ ಆಗಲಿ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…