ತಂದನಾನ ತಂದನಾನ ಗುರುವೇ ತಂದನಾನ
ತಂದನಾನ ತಂದನಾನ ದೇವರ ತಂದನಾನ || ೧ ||
ಪಟ್ಟಣಶೆಟ್ಟಿ ಪಟ್ಟಣದೊಳಗೆ ತಂದನಾನ
ಅಲ್ಲಿ ಇದ್ದನೊಬ್ಬ ಪಟ್ಟಣದೊಳಗೆ ತಂದನಾನ || ೨ ||
ಅಲ್ಲಿ ಏನ ಏನ ಐಸರ್‍ಯ ನೋಡ್ವೇ? ತಂದನಾನ
ಏನ ಏನ ಸೋಜಿಗವ ನೋಡ್ವೇ? ತಂದನಾನ || ೩ ||
ಮುತ್ತಿನ ಕಂಬಿಗೆ ಮುತ್ತಿನ ಜಲ್ಲೆ ತಂದನಾನ
ಓಹೋ ಪಟ್ಟಣಶೆಟ್ಟಿ ಪಟ್ಟಣದಲ್ಲಿ ತಂದನಾನ || ೪ ||
ಹಗಲು ಇರುಳು ಆದಂಗೇ ತಂದನಾನ
ಅಲ್ಲಿ ಹಗಲು ಬತ್ತಿ ನೋಡಿದರೇ ತಂದನಾನ || ೫ ||
ಮದ್ದುಗುಂಡು ಏನ ನೋಡ್ದೇ ತಂದನಾನ
ಆಕಾಶ ಬಾಣ ಏನ ನೋಡ್ದೇ ತಂದನಾನ || ೬ ||
ವಜ್ರದ ಕಂಬಿಗೆ ವಜ್ರದ ಜಲ್ಲಿ ತಂದನಾನ
ಮುತ್ತಿನ ಕಂಬಿಗೆ ಮುತ್ತಿನ ಜಲ್ಲೆ ತಂದನಾನ
ತಂದನಾನ ತಂದನ್ನ ಗುರುವೇ ತಂದನಾನ || ೭ ||
*****
ಹೇಳಿದವರು: ಸಣ್ಣತಮ್ಮ ತಮ್ಮಣ ಗುನಗ, ಹೊನ್ನಳ್ಳಿ, ಹೆಗ್ಗಾರ ಮಕ್ಕಿ. ೧೨/೧/೧೯೬೯
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.