ಯಾರ ಬರುವ ಕಾಯುತಿರುವೆ?
ಯಾರ ದೆಸೆಗೆ ನೋಯುತಿರುವೆ?
ಯಾರಿಗಾಗಿ ಸಾಯುತಿರುವೆ?
ಜೀವ ಜೀವವೇ!
ದಿನಬೆಳಗೂ ನಿರುಕಿಸುವೆ,
ದೆಸೆದೆಸೆಗೂ ಗಿರುಕಿಸುವೆ,
ಮೊಗಮೊಗಗಳ ಪರಕಿಸುವೆ,
ಜೀವ ಜೀವವೇ!
ಕುಣಿವುದಾವ ಲಯಕೆ ನೀನು?
ತುಡಿವುದಾವ ಜಗಕೆ ತಾನು?
ಆಸೆ-ಬಸಿರ ಬಯಕೆ ಏನು?
ಜೀವ ಜೀವವೇ!
*****
ಕನ್ನಡ ನಲ್ಬರಹ ತಾಣ
ಯಾರ ಬರುವ ಕಾಯುತಿರುವೆ?
ಯಾರ ದೆಸೆಗೆ ನೋಯುತಿರುವೆ?
ಯಾರಿಗಾಗಿ ಸಾಯುತಿರುವೆ?
ಜೀವ ಜೀವವೇ!
ದಿನಬೆಳಗೂ ನಿರುಕಿಸುವೆ,
ದೆಸೆದೆಸೆಗೂ ಗಿರುಕಿಸುವೆ,
ಮೊಗಮೊಗಗಳ ಪರಕಿಸುವೆ,
ಜೀವ ಜೀವವೇ!
ಕುಣಿವುದಾವ ಲಯಕೆ ನೀನು?
ತುಡಿವುದಾವ ಜಗಕೆ ತಾನು?
ಆಸೆ-ಬಸಿರ ಬಯಕೆ ಏನು?
ಜೀವ ಜೀವವೇ!
*****