
ಅತ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯಂಗೆ! ಚೆಂದಿವ್ನೀಂತ ಮೆರಿಲೆ ಬಾರ್‍ದು- ಬಿದ್ದೇ ಬೀಳ್ತೈತ್ ಅಲ್ಲು! ಅದಕಿಂತ್ ಎಚ್ಗೆ ದೀಸ ನಿಲ್ತೈತ್ ಅತ್ಕಡಕಿನ್ದು ಕಲ್ಲು! ೧ ಅಕ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯೆಂಗ್ಸೆ! ರೂಪ ಓಯ್ತದ್...
ಕುಣಿ ಕುಣಿ, ನವಿಲೇ, ಕುಣೀ ಕುಣೀ ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ, ಕುದಿವುದು ಮೋಡವು, ತೊಟ್ಟಿಡದಿದೆ ಮಳೆ, ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ, ತಾಪವ ನೀ ಮರೆ, ಕುಣಿ ಕುಣೀ || ೧ || ನಿನಗಿದೆ ಸಾವಿರ ಕಣ್ಣಿನ ಛತ್ರ, ಮೂಲೋಕಕು ಬೀಸಣಿ...
ಒಂದು ತಪೋವನ. ಅಲ್ಲಿ ತಪಸ್ವಿ ತನ್ನ ತಪಸ್ಸನ್ನೆಲ್ಲಾ ಧಾರೆಯೆರೆದು ಅದ್ಭುತ ಸಾಧನೆ ಮಾಡಿ ಚೈತ್ರ ವಸಂತನ ಸೆರೆಹಿಡಿದು ತನ್ನ ತಪೋವನದಲ್ಲಿ ವರ್ಷ ಇಡೀ ವಸಂತವೈಭವವನ್ನು ಪಡೆಯುತ್ತಾ ಬಂದಿದ್ದ. ಅವನಿಗೆ ಮನೋಲ್ಲಾಸವಾದರು ಗಿಡಮರಗಳು, ವೃಕ್ಷಗಳು ಚಿಗರೊಡ...
ಉಂಡು ಕೈ ತೊಳೆವಂತೆ ಉರುಚಿ ಅಂಡೊರಸು ವಂತೆ ಎಮ್ಮಡುಗೆಯೆಮ್ಮ ಕೈಯೊಳಾದೊಡದು ಚಂದ. ಅಟ್ಟುಣುವ ಅನ್ನವದೆಮ್ಮ ಮೈ ದುಡಿದು ಬಂದೊಡದು ಮತ್ತಂದ, ಸಿದ್ಧ ವಸ್ತುಗಳಿಂದು ಕೊಂದಿಹುದೆಲ್ಲರಾ ಶುದ್ಧ ಮನದಂದ – ವಿಜ್ಞಾನೇಶ್ವರಾ *****...
“ತನ ಬಾವ ತನ್ ಗುರುತಾಆಆ ಹಿಡಿದಾನೆಯಾಅಅ ತಾನಾ”ಅಅಅಅಅಅ ಲಂದೀ ತಾಅಅ ನೀಗೇಏಏ ಹೇಳುತನೆಯೊ ತಾನಾ || ೧ || “ಅಯ್ಯೋ ನನ ತಮ್ಮಾ ನೀ ಕೇಳೋ ಲೀಗಿನ್ನು ನಿನ ಬಾವ ನಿನ್ನ ಗುರುತಾ ಹಿಡಿದಿದುರೇ ತಾನಾ || ೨ || ಲಾಗಳು ...
ಬರೆದವರು: Thomas Hardy / Tess of the d’Urbervilles ನಾಯಕನಿಗೆ ಇಂದು ಹೊಸತಲೆನೋವು ಬಂದಿದೆ. ಅವನು ಇದುವರೆಗೆ ಮಾದೇಗೌಡನ ಹತ್ತಿರ ಮೊಕಕೊಟ್ಟು ಮಾತನಾಡಿಲ್ಲ. ಇವೊತ್ತು ಮಾತನಾಡದಿದ್ದರೆ ಯತ್ನವಿಲ್ಲ ಅವನು ಸಮಾಪ ಬಂಧು ಆದರೂ ಅವನ ಮನೆಗೆ ತಾನ...
ಜಲದ ಮೇಲೆ ತೇಲುತ್ತಿರುವ ಹಿಮದಂತೆ ನನ್ನ ಬಾವಗಳೇಕೆ ಹೆಪ್ಪುಗಟ್ಟಿದವು ಹೆಪ್ಪಿನಲ್ಲಿಯೂ ಅದು ಸಾಕಾರ ಚಿತ್ರ ಮರೆತೇಕೆ ಮತ್ತೇನು ನನ್ನ ಕಾಡಿದವು ಮನಸ್ಸೊಂದೆ ನನಗೆ ಬಂಧಿಸಿದೇನು ಮನವನ್ನೇ ನನ್ನೇಕೆ ಬಂಧಿಸಲಾರೆ ಮನವನ್ನು ನಂಬಿ ಕುಣಿಯುವೆಯಾದರೆ ಆ ಶಿ...
ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ: “ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ; ಎನ್ನಪ್ಪ ಕುಂಬರಗೆ ಕೈನಡುಕಮೇನೋ!” *****...
ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ ಚಂದ್ರ ನಕ್ಕರೆ ನ...
ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು ಸಂಜೆರಂಗಿನ ಮೋಡ ಅದನಂದಗೊಳಿಸಿರಲು, ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು, ಬೈ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...














