ಜಲದ ಮೇಲೆ ತೇಲುತ್ತಿರುವ ಹಿಮದಂತೆ
ನನ್ನ ಬಾವಗಳೇಕೆ ಹೆಪ್ಪುಗಟ್ಟಿದವು
ಹೆಪ್ಪಿನಲ್ಲಿಯೂ ಅದು ಸಾಕಾರ ಚಿತ್ರ
ಮರೆತೇಕೆ ಮತ್ತೇನು ನನ್ನ ಕಾಡಿದವು
ಮನಸ್ಸೊಂದೆ ನನಗೆ ಬಂಧಿಸಿದೇನು
ಮನವನ್ನೇ ನನ್ನೇಕೆ ಬಂಧಿಸಲಾರೆ
ಮನವನ್ನು ನಂಬಿ ಕುಣಿಯುವೆಯಾದರೆ
ಆ ಶಿವನನ್ನು ನಾನೆಂದೂ ಕಾಣಲಾರೆ
ಕರ್‍ಮದ ಬಿಂದುವಿನಲ್ಲೂ ದೇವನೆ
ನನ್ನನ್ನೋ ಹುಡುಕಿಕೊಳ್ಳುವುದೇಕೆ
ಕರ್‍ಮದ ಇಂಚು ಇಂಚುಗಳೂ ನನ್ನ
ಇದ್ದರೂ ಕರ್‍ಮ ದೇವರಿಗೆ ಅರ್‍ಪಿಸಬಾರದೇಕೆ
ಯಾವುದೋ ನಶ್ವರ ಅದಕ್ಕೆ ಶಾಶ್ವತ
ಯಾವುದೋ ಭೋಗ ಅದಕ್ಕೆ ಸುಖವೆಂದೆ
ಯಾವ ಮಾರ್‍ಗಕ್ಕೂ ಹೋಗಬೇಕೆಂದವನು
ಮಾಣಿಕ್ಯ ವಿಠಲ ದುಃಖವೆಂದೆ
*****