ಅತ್ಕಡಕ್ ಇಕ್ಕಿದ್ ಯಂಗ್ಸೆ!
ಚೆಂದುಳ್ಳೇವ್ಳೆ ಯಂಗೆ!
ಚೆಂದಿವ್ನೀಂತ ಮೆರಿಲೆ ಬಾರ್‍ದು-
ಬಿದ್ದೇ ಬೀಳ್ತೈತ್ ಅಲ್ಲು!
ಅದಕಿಂತ್ ಎಚ್ಗೆ ದೀಸ ನಿಲ್ತೈತ್
ಅತ್ಕಡಕಿನ್ದು ಕಲ್ಲು! ೧
ಅಕ್ಕಡಕ್ ಇಕ್ಕಿದ್ ಯಂಗ್ಸೆ!
ಚೆಂದುಳ್ಳೇವ್ಳೆ ಯೆಂಗ್ಸೆ!
ರೂಪ ಓಯ್ತದ್ ಅತ್ಕಡಕ್ ಓಯ್ತದ್
ಆಮೇಲ್ ಬಲ್ ಪಜೀತಿ!
ಅವಕಿಂತ್ ಎಚ್ಗೆ ದೀಸ ನಿಲ್ತೈತ್
ಗಂಡ ಯೆಂಡರ್ ಪ್ರೀತಿ! ೨
*****



















