ನೀನೇ ನೋಡ್ತಿಯಲ್ಲ ಚಂದ್ರ ಹೊತ್ತಿಗೆ ಮುಂಚೆ ಏಳ್ತಾಳೆ ಎಷ್ಟು ಹೊತ್ತಿಗೋ ಮಲಗ್ತಾಳೆ ರೇಗ್ರಿದ್ರೆ ರೆಷ್ಟ್ ಗಿಷ್ಟ್ ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ ರೈಲು, ಬಸ್ಸು, ಲಾರಿ, ಯಾವುದಾದರೂ ಸರಿ ಹಗಲೂ ರಾತ್ರಿ ಬುಗುರಿ ತಿರುಗ್ತಾಳೆ ಗಿರಿಗಿರಿ. ...
ನಿನ್ನ ನೂರಾರು ಹಸ್ತಗಳು ಭೂಮಿ ಎದೆಯ ತೂರಿ ತಬ್ಬಿದವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ಒಲುಮೆ ನೆಲವ ಮುದ್ದಿಸಿತು-ನೀನೆದ್ದ ಪ್ರೇಮದ ಮುದ್ದೆ ಮೇಲೂ ಕೆಳಗೂ ಓಡಾಡಿ ಅಂಟು-ಭದ್ರವಾಯಿತು ನಂಟು ಎಷ್ಟೋ ನೋವಿನ ಸುಂಕತೆತ್ತು ಮೈತುಂಬ ಪುಳಕಗಳೆದ...
ಪ್ರಿಯ ಸಖಿ, ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರ...
ನನ್ನವಳು ಶಾಕಾಹಾರಿ ಅಂತ ಹೇಳಿಕೊಳ್ಳುತ್ತಾಳೆ ಆದರೆ ಯಾವಾಗಲೂ ನನ್ನ ‘ಪ್ರಾಣ’ ತಿನ್ನುತ್ತಾಳೆ *****...
ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ – ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ ದೊರೆ ...
ಅಂಗವ ಮರೆದಂಗೆ ಲಿಂಗದ ಹಂಗೇಕೊ? ಅರವ ಕಂಡವಂಗೆ ಕುರುಹಿನ ಹಂಗೇಕೊ? ತಾನು ತಾನಾದವಂಗೆ ಧ್ಯಾನದ ಹಂಗೇಕೊ? ಮನಮುಗ್ಧವಾದವಂಗೆ ಮಾನವರ ಹಂಗೇಕೊ? ಆಸೆಯನಳಿದವಂಗೆ ರೋಷದ ಹಂಗೇಕೊ? ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ? ನಡೆಗೆಟ್ಟವಂಗೆ ನುಡಿಯ ಹಂಗೇಕೊ? ತನ್ನ...
ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ ಬಿಡದಿರಲಿ ಎಂಬ ಆಸೆ ಒಳಗೆ! ಪೀಡಿಸಲಿ ಹರಿ ಹಾಲಿಗೆ ಬೆಣ್ಣೆಗೆ ಎನ್ನುವ ಬಯಕೆ ದಿನವೂ ಕೂಡು...
‘ಇರುವುದು’ ‘ಇರದಿರುವುದರ’ ಬಗ್ಗೆ ಹೇಳೀತು ಹೇಗೆ? *****...
ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ ಇಡುಗಿದರೂ ಮೂಗಿಗದು ಬಡಿಯುತ್ತಿರಲಿಲ್ಲ. ದಿನವಿಡೀ ಯೋಚಿಸಿ ಅತ್ತೆಯಿಂದ ಬೈಗಳು ತಿಂದದ್ದು ಅದೆಷ್ಟು ಬಾರಿಯ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







