೧
‘ಜಯ ಜಗದಂಬೆ
ಭಯವಿಲ್ಲೆಂಬೆ
ಹಂಬಲ ತುಂಬೆ
ನಂಬಿದೆನಂಬೆ
ಅನ್ಯರ ನಂಬೆ’
ಎಂದೆನ್ನುವ ಹಸುಳಾ ಬಾಲಾ!
ಇಂದೇ ಕುಡಿ ತಾಯಿಯ ಹಾಲ!
೨
ತಾಯಿಯಾಗಿ ತಾ
ಕಾಯಲಿ! ಮಗು ತನ್ನಾ!
ಅಕ್ಕನಾಗಿ ಬಲು
ಅಕ್ಕರಿಸಲಿ! ಚಿನ್ನಾ!
ತಂಗಿಯಾಗಿ ನೆರೆ
ತಂಗಿಸಲೈ ನಿನ್ನಾ!
ಗೆಳತಿಯಾಗಿ ಗಡ
ನಲಿನಲಿಸಲಿ ಚೆನ್ನಾ!
ಮಗಳು ಅಗಿ ಎದೆ-
ಮುಗುಳಾಗಲಿ ಘನ್ನಾ!
೩
ಇಳೆಯನೆಲ್ಲವನು
ಸಲುಹುವ ನಗಿಸುವ
ಜಗದಂಬೆಯ ಮಗು
ನಗು ನಗು ನಗು ನಗು
ಸಲ್ಲದು ಅಳುವುದು
ಅಲ್ಲದು ಬಿರುದದು
ನಗು ನಗು ನನ್ನಯ ನಕ್ಷತ್ರಾ!
ಮಗುವೇ ಇದು ಧರ್ಮವು ಕ್ಷಾತ್ರಾ!
*****








