Home / ಲೇಖನ / ಇತರೆ / ಸುಳ್ಳು ಹೇಳುವ ಕಲೆ – ಡಬ್ಬಲ್ ಜಾದು

ಸುಳ್ಳು ಹೇಳುವ ಕಲೆ – ಡಬ್ಬಲ್ ಜಾದು

ಸುಳ್ಳು ಹೇಳುವದೊಂದು ಕಲೆ ಬಹಳ ಪುರಾತನವಾದುದು. ಪುರಾತನ ವಸ್ತುಗಳಲ್ಲಿ ಅಭಿಮಾನಪಡುವ ನಾವು ಈ ಕಲೆಯ ವಿಷಯವಾಗಿಯೂ ಅಭಿಮಾನಪಡಬೇಕು!
  * * * *
ಈ ಕಲೆಯು ಜಗತ್ತಿನಲ್ಲಿ ಅದೃಶ್ಯವಾಗಿಲ್ಲ; ಇದು ನಮ್ಮ ಸುದೈವ. ಇನ್ನೂ ಈ ಕಲೆಯಲ್ಲಿ ಪರಿಣತರಾದವರು ಜಗತ್ತಿನಲ್ಲಿ ಇರುವರು; ಇದು ನಮ್ಮ ಭಾಗ್ಯವು. ಸದ್ಯಕ್ಕೆ ಸುಳ್ಳಿಗೆ ಬೇರೆ ಬೇರೆ ಹೆಸರುಗಳಿವೆ: ಸುಳ್ಳು, ಖೊಟ್ಟಿ, ಗಫಾ, ಗುಳಿಗೆ, ಅಸತ್ಯ, ಚಾಣಿಕ್ಯತನ ಮೊದಲಾದವುಗಳು.
  * * * *
ಕತ್ತಲೆಯಿಂದ ಬೆಳಕಿಗೆ ಮಹತ್ವ; ಕುರೂಪಿಗಳಿಂದ ಚಲುವರಿಗೆ ಮಹತ್ವ; ಹಾಗೆಯೇ ಸುಳ್ಳಿನಿಂದ ಸತ್ಯಕ್ಕೆ ಮಹತ್ವ ! ಆದ್ದರಿಂದ ಸತ್ಯದ ತೇಜವು ಪ್ರಜ್ವಲಿಸಬೇಕಾದರೆ ಸುಳ್ಳಿನ ಕತ್ತಲೆಯು ಬೇಕೇಬೇಕು. ಸತ್ಯದ ಸೌಂದರ್ಯವು ಪ್ರತ್ಯಕ್ಷವಾಗಬೇಕಾದರೆ ಸುಳ್ಳಿನ ಕುರೂಪವು ಗೋಚರವಾಗಬೇಕು. “ಸತ್ಯಕ್ಕೆ ಸಾವಿಲ್ಲ” ಎಂಬದೊಂದು ನಾಣ್ಣುಡಿಯು. ಆದರೆ ಸತ್ಯಕ್ಕೆ ಇಷ್ಟೊಂದು ಸುಳ್ಳಿನ ಅವಶ್ಯಕತೆ ಇದ್ದ ಮೇಲೆ ಸುಳ್ಳಿಗೂ ಸಾವು ಬೇಡ ! ಸುಳ್ಳು ಅಮರವಾಗಿರಲಿ !
****
ಅಮೇರಿಕೆಯ ಪ್ರಸಿದ್ದ ವಿನೋದಿ ಗ್ರಂಥಕರ್ತನಾದ ಮಾರ್ಕ್ ಟ್ವೇನ್‌ನು ತನ್ನದೊಂದು ಪುಸ್ತಕದಲ್ಲಿ ಸತ್ಯವು ಅಮೂಲ್ಯವಾದ ವಸ್ತುವು; ಆದ್ದರಿಂದ ಅದನ್ನು ಮಿತಿಯಿಂದ ಉಪಯೋಗಿಸಿರಿ, ನಿರರ್ಥಕವಾಗಿ ಸುಳ್ಳು ಹೇಳಬೇಡಿರಿ, ಅದೇ ಸುಳ್ಳು ಮತ್ತೊಂದು ಸಮಯದಲ್ಲಿ ಉಪಯೋಗ ಬೀಳಬಹುದು ! ” ಎಂದು ಉಪದೇಶಿಸಿರುವನು.
“ಸುಳ್ಳು” ಈ ಶಬ್ದಕ್ಕಿಂತ ” ಅಸತ್ಯ ” ಈ ಶಬ್ದವು ಹೆಚ್ಚು ಸೌಜನ್ಯ ಸೂಚಕವಿದೆ. ಅಂದರೆ ಸಜ್ಜನರು ಹೇಳುವದು ಸುಳ್ಳು ಎಂದಲ್ಲ. ಇಂಗ್ಲೀಷ ಶಬ್ದಗಳಲ್ಲಿ ಹೇಳಬೇಕಾದರೆ “ಅಸತ್ಯ” (un-true) ಶಬ್ದವು ಪಾರ್ಲಿಮೆಂಟರಿ  (Parliamentary) ಶಬ್ದವಿರುತ್ತದೆ. ನಮ್ಮ ಮುಂಬೈ ಅಸೆಂಬ್ಲಿಯಲ್ಲಿ ಒಬ್ಬ ಸದಸ್ಯನು ಮತ್ತೊಬ್ಬನಿಗೆ “ನೀವು ಸುಳ್ಳು ಹೇಳಿದಿರಿ?” ಅಥವಾ “ನೀವು ಗುಳಿಗಿ ಉಳ್ಳಿಸಿದಿರಿ ” ಎಂದು ಅನ್ನಕೂಡದು. ಅದೇ “ನೀವು ಅಸತ್ಯ ನುಡಿದಿರಿ?” ಎಂದು ಅಂದರೆ ಅಡ್ಡಿ ಇಲ್ಲ ! ಇದರಿಂದ ಅಸೆಂಬ್ಲಿ ಮೆಂಬರರು ಅಸತ್ಯ ನುಡಿಯಲು ಅಡ್ಡಿ ಇಲ್ಲ ಎಂದು ಮಾತ್ರ ತಿಳಿಯಕೂಡದು.
ಒಂದೇ ವೇಳೆಯಲ್ಲಿ ಇದ್ದಲ್ಲಿ ಇಲ್ಲದಂತೆ ಮಾಡಿ, ಇಲ್ಲದಲ್ಲಿ ಇರುವಂತೆ ಮಾಡುವದು ಡಬ್ಬಲ್ ಜಾದು ಎಂದು ಹಿಂದೆ ಹೇಳಲಿಲ್ಲವೇ ? ಅದರ ಬೇರೊಂದು ಉದಾಹರಣೆಯನ್ನು ಇಲ್ಲಿ ಕೆಳಗೆ ಕೊಟ್ಟಿದ್ದೇನೆ. ಇದು ನಿಜವಾಗಿ ಜರುಗಿದ ಸಂಗತಿ. ಸುಳ್ಳು ಅಥವಾ ಗಫಾ ಎಂದು ತಿಳಿಯಕೂಡದು. ಅಥವಾ ಪಾರ್ಲಮೆಂಟರಿ ಭಾಷೆಯಲ್ಲಿ “ಅಸತ್ಯ”ವೆಂದೂ ತಿಳಿಯಕೂಡದು!
  * * * *
ನಮ್ಮ ಮನೆಯ ತುಂಬ ಹೆಗ್ಗಣವು ಗುದ್ದು ತೋಡಿ ಗೋಡೆಗಳನ್ನು ಪೊಳ್ಳು ಮಾಡಿದ್ದನ್ನು ನಿನ್ನೆ ತಾನೇ ನೋಡಿದೆ. ನಾನು ನೋಡುನೋಡುವಷ್ಟರಲ್ಲಿ ಒಂದು ಗುದ್ದಿ ನೊಳಗಿಂದ ಒಂದು ಇಲಿಯು ಹೊರಬಿತ್ತು. ಕೂಡಲೆ ನಮ್ಮ ಬೆಕ್ಕಿನ ಮರಿಯು ಬೆನ್ನು ಹತ್ತಿತು. ಇಲಿಯು ಲಗುಬಗೆಯಿಂದ ಒಂದು ದೊಡ್ಡ ಗುದ್ದನ್ನು ಹೊಕ್ಕಿತು. ಅದರ ಹಿಂದೆ ಬೆಕ್ಕಿನ ಮರಿಯೂ ಆ ಗುದ್ದಿ ನಲ್ಲಿ ಹೋಗೇ ಬಿಟ್ಟಿತು. ಬಹಳ ಹೊತ್ತಿನ ವರೆಗೆ ಹೊರಗೆ ಬರಲಿಲ್ಲ. ಗುದ್ದಿನ ಬಾಯಲ್ಲಿ ಹಣಿಕೆ ಹಾಕಿ ನಾನು ಬಹಳ ಸರಿಯಾಗಿ ಬೆಕ್ಕಿನ ಮರಿಯನ್ನು ಕರೆದೆನು. “ಮ್ಯಾಂವು ! ಮ್ಯಾಂವು ! ” ಎಂದು ಸ್ವರ ತೆಗೆದೆನು. ಕಡೆಗೆ ಬೆಕ್ಕಿನ ಮರಿಯ ತಾಯಿಯನ್ನು ತಂದು ಒದರಹಚ್ಚಿದೆನು. ಗುದ್ದಿನೊಳಗೆ ಹೋದ ಬೆಕ್ಕಿನ ಮರಿಯೆನೂ ಹೊರಗೆ ಬರಲಿಲ್ಲ. ಕಡೆಗೆ ಬೇಸತ್ತು ಬೆಕ್ಕಿನ ಮರಿಯ ಆಶೆಯನ್ನೇ ಬಿಟ್ಟು ಕೊಟ್ಟೆ. ಮನೆಯ ಹೊರಗೆ ಬಂದೆ. ಅದೇ ಬೆಕ್ಕಿನ ಮರಿಯು ದಾರಿಯಲ್ಲಿ ಚಿನ್ನಾಟ ಆಡುತ್ತಿತ್ತು !! ಆಶ್ಚರ್ಯ ಚಕಿತನಾದೆ. ಆತುರದಿಂದ ಮರಿಯನ್ನು ಕೈಯಲ್ಲಿ ತೆಗೆದುಕೊಂಡು ಮುದ್ದಿಟ್ಟೆ. ಇಲಿಯ ಹಣೆಯಬರಹವನ್ನು ಯಾರು ಬಲ್ಲರು ?
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...