
ನೂಪುರ
ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ ಇಡುಗಿದರೂ ಮೂಗಿಗದು ಬಡಿಯುತ್ತಿರಲಿಲ್ಲ. ದಿನವಿಡೀ ಯೋಚಿಸಿ ಅತ್ತೆಯಿಂದ ಬೈಗಳು ತಿಂದದ್ದು ಅದೆಷ್ಟು ಬಾರಿಯೋ. ಪಂಚಾಯತ್ ವ್ಯವಹಾರ, ಪಾರ್ಟಿ ಪಂಡು ಎಂದು ರಾಜಕೀಯದಲ್ಲೇ ಮುಳುಗಿರುವ ಮಾವನಿಗೆ ಮನೆಯ ಬಗ್ಗೆ ಗೊಡವೆಯೇ ಇರಲಿಲ್ಲ. ಗಂಡನಿಂದ ಸಿಗುವುದು […]