ಬಾನೊಳಗಾಯಿತು ಮುಗಿಲು ಸೊಕ್ಕುಳಿದಡಗಿತು ಬಿಸಿಲು ಈ ನೋಟಕದೇಂ ಮಿಗಿಲು ಸ್ಕಿತಿಗೇಕಯಿ ಈ ದಿಗಿಲು? ಗೂಡೆಡೆ ಹಾರಿತು ಹಕ್ಕಿ ಆವೋಡಿತು ದೌಡಿಕ್ಕಿ ತರು ಮೊರೆಯಿತು ಶರಣಿಕ್ಕಿ ಜನ ಕಕ್ಕಾವಿಕ್ಕಿ! ದೆಸೆಗುಬ್ಬಸವೀ ಸದ್ದು ಏನೆ ಗುಡುಗಲು ಗುಡುಗೆದ್ದು, ಬರಲು ಪರಾಕನು ಹೇಳಿ ವೈತಾಳಿಕ ಭೋರ‍್ಗಾಳಿ, ಮಿಂಚಿನ ಕತ್ತಿಯ ವರ...

ಫ್ಯಾನಿನಡಿಗೆ ಬಿದ್ದಾಗೆಲ್ಲ, ‘ಕೃಷ್ಣ’ ಅವನ ಕಾಲಚಕ್ರದ ಮಾತುಗಳೆಲ್ಲ ನೆನಪಾಗುತ್ತವೆ ಚಕ್ಕನೆ ‘ಆಫ್’ ಮಾಡುತ್ತೇನೆ ಇನ್ನೊಂದಿಷ್ಟು ದಿನಗಳು ನಾನೇ ನಾನಾಗಿರಲಿಕ್ಕೆ. *****...

ಅಂಜು ಮಲ್ಲಿಗೆ ಅಂಜು ಮಲ್ಲಿಗೆ ಅಂಜಬೇಡ ಮಲ್ಲಿಗೆ ಸಂಜೆ ಮಲ್ಲಿಗೆ ಸಂಜೆ ಮಲ್ಲಿಗೆ ಮುಂಜಾನೆಯು ಬಾ ನಮ್ಮಲ್ಲಿಗೆ ಚೆಂಡು ಮಲ್ಲಿಗೆ ದುಂಡು ಮಲ್ಲಿಗೆ ಉಂಡು ಬಾ ಮಲ್ಲಿಗೆ ಮಂಜಿಗೆ ಬಾ ಮಳೆಗೆ ಬಾ ಬಾರೆ ಬಾ ನಮ್ಮಲ್ಲಿಗೆ *****...

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ...

ಬಿದಿದ್ದೇನೆ: ‘ಬಕ್ಬಾರ್‍ಲು’ ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ. ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’! ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ! ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ… ಮ...

ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ, ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ, ಮಬ್ಬು...

ದಶಕಗಳು ಕಳೆದಂತೆ ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕುಸಿಯುತ್ತಿದೆ. ಅರಾಜಕತೆ ಆವರಿಸಿಕೊಳ್ಳುತ್ತಿದೆ ಇದಕ್ಕೆ ನ್ಯಾಯಾಲಯಗಳೂ ಹೊರತಾಗಿಲ್ಲ ಎಂಬುದಕ್ಕೆ ಚೆನ್ನೈನಲ್ಲಿ ದಿನಾಂಕ ೨೮.೧೦.೯೭ರಂದು ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶರ ನ್ಯ...

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ, ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ) ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು ನೋವು ರಕ್ತದೊತ್ತಡ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...