ಹುರಮುಂಜಗೇಡಿ

ಹುರಮುಂಜಗೇಡಿ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ –  ಇಂಗು – ಜೀರಿಗೆ, ಚುರಮರಿ – ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಪಿನಲ್ಲಿ ಅಳೆದುಹಾಕಿ ತಮಗೆ ಬೇಕಾದ ಸಾಮಾನು ಕೊಂಡುಕೊಳ್ಳುವುದು ವಾಡಿಕೆ. ದುಡ್ಡು ತಂದು ವ್ಯಾಪಾರ ಮಾಡಿಕೊಳ್ಳುವವರು ಬಹಳ ಕಡಿಮೆ.

ಹಬ್ಬ ಹುಣ್ಣಿಮೆ ದಿವಸ ಇಲ್ಲವೆ ಸೋಮವಾರ ದಿವಸ ಗಿರಾಕಿಗಳ ಗೊಂದಲ ಹೆಚ್ಚಿಗಿರುತ್ತದೆ. ಸರತಿಯ ಮೇಲೆ ಗಿರಾಕಿಗಳು ವ್ಯಾಪಾರ  ಗಿಟ್ಟಿಸಬೇಕಾಗುತ್ತದೆ. ಒಂದು ಸಾರೆ ಗೌಡರ ಮನೆಯಲ್ಲಿ ತೊತ್ತುಗೆಲಸಮಾಡುವ ಬಂಡೆವ್ವ ಮುದಿಕೆ ಉಡಿಯಲ್ಲಿ ಜೋಳ ಕಟ್ಟಿಕೊಂಡು ಬಂದು ಸರತಿ ಕಾಯುತ್ತ ನಿಂತೇ ನಿಂತಳು. ಮುಂದಿನ ಗಿರಾಕಿಗಳು ಹೊರಟು ಹೋದ ಬಳಿಕ, ಮುದಿಕೆ ತನ್ನ ಉಡಿಯೊಳಗಿನ ಜೋಳವನ್ನು ಅಳೆದು ಹಾಕಿದಳು.

“ಏನು ಕೊಡಲಿ” ಎಂದನು ಅಂಗಡಿಕಾರ.

“ಗೌಡತಿ ಏನೋ ಹೇಳಿದ್ದಾಳೆರೀ” ಎಂದು ನೆನಪು ಮಾಡಿಕೊಳ್ಳಹತ್ತಿದಳು.

“ಅಲ್ಲ” ಮುದಿಕೆಯ ಸೊಲ್ಲು.

“ಇಂಗು ಜೀರಿಗೆ ?”

“ಅದು ಅಲ್ಲ.”

“ಶುಂಠಿ, ಮೆಣಸು ?”

“ಊಂ! ಹು !”

“ಅಡಿಕೆ, ಕಾಚು ?”

ಅಲ್ಲವೆನ್ನುವಂತೆ ಮುದಿಕೆ ಗೋಣುಕೊಡಹಿದಳು. ಅಂಗಡಿಕಾರನಿಗೆ ಬೇಸರಾಯಿತು. ಹಿಂದೆ ನಿಂತ ಗಿರಾಕಿಗಳು ಅವಸರ ಮಾಡತೊಡಗಿದ್ದನ್ನು ಕಂಡು ಸಿಟ್ಟಿನಿಂದ ಆ ಮುದಿಕೆಗೆ “ಕೇಳಿದ್ದಕ್ಕೆಲ್ಲ ಅಲ್ಲವೆನ್ನುತ್ತ ಮತ್ತೇಕೆ ನಿಂತೆ ? ನಿನ್ನ ಜೋಳ ತೆಗೆದುಕೊಂಡು ಹೋಗು, ಹುರಮುಂಜಗೇಡೀ” ಎಂದು ಗದ್ದರಿಸುವಷ್ಟರಲ್ಲಿ – “ಅದೇ ನೋಡೋ ಅಪ್ಪಾ, ನನಗೆ ಬೇಕಾಗಿದ್ದು ಹುರಮುಂಜ. ಕೊಟ್ಟುಬಿಡು ನನ್ನಪ್ಪಾ, ಹೋಗುತ್ತೇನೆ. ಗೌಡತಿ ಬಯ್ದಾಳು ಬಹಳ ಹೊತ್ತಾಯ್ತು ಎಂದು ಮುದಿಕೆ ನುಡಿಯಲು, ಅಂಗಡಿಕಾರನು ಕಾಗದದಲ್ಲಿ ಹುರಮುಂಜ ಪೊಟ್ಟಣ ಕಟ್ಟಿಕೊಟ್ಟನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ
Next post ಮಿಂಚುಳ್ಳಿ ಬೆಳಕಿಂಡಿ – ೧೬

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…