ನುಡಿಯದಿದ್ದರೇನು ನೀನು?
ನಿನ್ನ ಮೌನವನ್ನೆ ನಾನು
ಹೃದಯದಲ್ಲಿ ತುಂಬಿ,
ವಿರಹದಲ್ಲಿ ಬೇಯುತಿರುವೆ
ಅಲುಗದೆಯೇ ಕಾಯುತಿರುವ
ನಿನ್ನನ್ನೇ ನಂಬಿ.

ಚುಕ್ಕಿಗಣ್ಣ ಬಿಚ್ಚಿ ಇರುಳು
ತಲೆ ತಗ್ಗಿಸಿ ತಾಳಿ
ಕಾಯುವಂತೆ ಬಾಳುತಿರುವೆ
ನನ್ನ ನೋವ ಹೂಳಿ

ಬೆಳಗು ಬಂದೆ ಬರುವುದು
ಇರುಳು ಹರಿದೆ ಹರಿವುದು
ನಿನ್ನ ದನಿಯ ಸ್ವರ್ಣವರ್ಷ
ಆಗಸವನ ಭೇದಿಸಿ
ಜುಳು ಜುಳನಯೆ ತಿರೆಗಿಳಿವುದು
ವಿಶ್ವವನ್ನೆ ತೋಯಿಸಿ
ನನ್ನ ಹಕ್ಕಿಗೂಡಿನಿಂದ ಹರಿವ ಹಾಡುಗಳಲಿ
ನಿನ್ನ ನುಡಿಗೆ ರಕ್ಕೆ ಬಂದು ವನದೆಲ್ಲಾ ಗಿಡದಲಿ
ಹಸಿರೇಳಲಿ, ಹೂವರಳಲಿ ಮಧುರಚಿತ್ತ ಮೂಡಲಿ
ಹುಸಿಯ ಬೇಗೆ ತೀರಿ, ನಿಜದ ರಸಬಾಳುವ ತೆರೆಯಲಿ
*****
ರವೀಂದ್ರನಾಥ ಟಾಗೋರರ ಗೀತಾಂಜಲಿಯ ಭಾಗವೊಂದರ ಅನುವಾದ

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)