ತುಂಬಿ ತುಂಬಿ ಏನೇನ್ ತುಂಬಿ?
ಮಲ್ಲಿಗೆ ಹೂವಿನ ಪರಿಮಳ ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ಸಂಪಿಗೆ ಹೂವಿನ ಕಂಪನು ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ಗುಲಾಬಿ ಹೂವಿನ ಪನ್ನೀರ್ ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ಬಾಳೆ ಹೂವಿನ ಮಕರಂದ ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ದಾಸನ ಹೂವಿನ ವ್ಯಸನಾ ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ಮಂದಾರ ಹೂವಿನ ಚೆಂದಾ ತುಂಬಿ
ತುಂಬಿ ತುಂಬಿ ಏನೇನ್ ತುಂಬಿ?
ತುಂಬೆ ಹೂವಿನ ಮಾಯಾ ತುಂಬಿ
ಮಾಯವಾಯಿತು
ಮಾಯಾ ತುಂಬಿ!
*****