ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ ನೋವಿನ ಕಬ್ಬ ಚಟದ ಚಟ್ಟಕೆ ಬಿದ್ದೆ ಅಗ್ನಿರುದ್ರಾ ॥ ಎಲ್ಲಿ ...

ಯಾರು ಕಲಿಸಿದರು ಗೆಳತಿ ಹಾಡುವುದ ಹೇಳೆ ನನಗಿಷ್ಟು ಕಲಿಸುವೆಯ ಹಾಡಿನ ಲೀಲೆ ಮರಗಳಲಿ ಕುಳಿತಿರುವೆ ಕಾಣದಾ ಕೊಂಬೆಯೊಳು ಸುಖ ದುಃಖದಿಂ ದೂರ ನೆಲದಿಂದ ಮೇಲೆ ಸಿಹಿಕಹಿಗಳೊಳಗಿನಿತು ಬೆರೆಯದೇ ಶುದ್ಧ ಸಲಿಲದ ರೀತಿ ಇಹುದು ನಿನ್ನಯ ಗಾನ ಹುಟ್ಟು ಸಾವುಗಳ ನ...

ಪ್ರಿಯ ಸಖಿ, ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲೆಂ’ದರು ಮಳೆ ಬಿತ್ತೋ ‘ಬಿಡದಲ್ಲ ಶನಿ’ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ. ಕವಿ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವನದ ಈ ಸಾಲುಗಳು ವಿಕ್...

ಹುಲಿಯಣ್ಣಾ ಹುಲಿಯಣ್ಣಾ ಕಾಡಿಗೆ ನೀನೇ ಹಿರಿಯಣ್ಣ! ಆದರು ನೀನು ಕಾಡಲ್ಲೇ ಇರು ಊರಿನೊಳಗೆ ಬರಬೇಡಣ್ಣ! ಹುಲಿಯಣ್ಣಾ ಹುಲಿಯಣ್ಣಾ ಎಂಥಾ ಮೀಸೆ ನಿನಗಣ್ಣ! ಎಂಥಾ ಬಾಯಿ ಎಂಥಾ ಹಲ್ಲು ಎಂಥಾ ಗರ್ಜನೆ ನಿನದಣ್ಣ! ಹುಲಿಯಣ್ಣಾ ಹುಲಿಯಣ್ಣಾ ಫಳ ಫಳ ಗಾಜಿನ ಕಣ್ಣ...

ಚಂದಮಾಮ ಚಕ್ಕುಲಿಮಾಮ ಅಮವಾಸ್ಯೆಯ ಕತ್ತಲಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ, ಯಾಕೆ ಹೋಗಿದ್ದೆ? ಕೇಳೋ ಕಳ್ಳ ಮುದ್ದಿನ ಮಳ್ಳಾ, ಸೂರ್ಯಾನೂರಿಗೆ ಹೋಗಿದ್ದೆ ಬೆಳದಿಂಗಳು ಹೊತ್ಕೊಂಡು ಬರ್‍ಲಿಕ್ಕೆ. *****...

೧ ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ ಉಗಿಯುತ್ತ ಹೋಗುವ ಆ ಅವರು ಯಾರು?  ಇದು ಬಸ್ಸು ನಿಲ್ದಾಣವೆ ಅಥವ… ಎಂಬಿತ್ಯಾದಿಯಾಗಿ ನೀವು ಕೇಳಲಿ, ಕೇಳದ...

ಈ ಮಹಾದೇವನ ಸ್ತೋತ್ರವ ಮಾಡುವದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವದಕ್ಕೆ ಕರ್ಣ ಮೆಟ್ಟದು. ಮುಟ್ಟಿ ಪೂಜಿಸಿಹೆನೆಂದರೆ, ಹಸ್ತ ಕೆಟ್ಟದು. ನೋಡಿಹೆನೆಂದರೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲ ದೇಹ ಎನ್ನಲ್ಲಿ...

ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...

ಅರಳುತಿಹ ಮೊಗ್ಗೊಂದು ಅರಳದೆಯೆ ಉರುಳಿದುದು ಕಣ್ಣೀರನಿಡುತಿಹಳು ಹಡೆದ ತಾಯಿ ಕಾಲನಾಟವೊ ಇಲ್ಲ ಕರುಬು ಕೂರಸಿ ಕೃತಿಯೊ ಎಳೆಹೂವಿನಾತ್ಮವನು ಅಳಿಸಿದುದು ಇಂತು? ಸುತ್ತ ಮುತ್ತಿಹ ಕ್ರೌರ್ಯಕಾನನದ ದಟ್ಟದಲಿ ಶತ್ರುಗಳು ಮೆಟ್ಟುತಿರಲದನು ಕೆಳಗೆ ಎತ್ತಿಮೇಲಕ...

ಪ್ರಿಯ ಸಖಿ, ಮನುಷ್ಯನ ಬದುಕಿನಲ್ಲಿ ಯಾವುದು ನಿತ್ಯ ಹಸಿರಾಗಿರುತ್ತದೆ? ಮತ್ತೆ ಯಾವುದು ಬೇಗ ಬಾಡಿಹೋಗುತ್ತದೆ? ನಿನಗೆ ಗೊತ್ತೇ? ಚಿಂತಕ ಮುಸೋಲಿನಿ ಹೀಗೆ ಹೇಳುತ್ತಾನೆ. Beauty, Strength, Youth are flowers but, fading soon duty, fait...

ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....