ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ ,
ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂದು ಇವನನ್ನು ಮತ್ತೂ ಉದ್ವಿಗ್ನಗೊಳಿಸುತ್ತಿದೆ. ಗುನುಗುತ್ತಾ ಮೈಮರೆತು ಕಾರು ಓಡಿಸುತ್ತಿದ್ದಾನೆ. ಆಗಲೇ….. ಎದುರಿನಿಂದ ರಭಸವಾಗಿ ಹರಿದು ಬರುತ್ತಿರುವ ಲಾರಿಯನ್ನು ಇವನು ನೋಡಿದ್ದು ತಕ್ಷಣ ಕಾರನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಆಗ ರಸ್ತೆಯಂಚಿನಲ್ಲಿ ನಿಧಾನಕ್ಕೆ ಸಾಗಿದ್ದ ಸೈಕಲ್ ಸವಾರನ ಮೇಲೆ ಇವನ ಕಾರು ಹರಿದು ಮುಂದೆ ಹೋಗುತ್ತದೆ. ಆ ಚೀರಿದವನ ಆರ್ತನಾದ ಕರುಳು ಬಿರಿಯುವಂತೆ ಕೇಳಿಬರುತ್ತದೆ.

ಕ್ಷಣಕಾಲ ಇವನಿಗೆ ದಿಗ್ಬ್ರಾಂತಿ ಛೇ. ಇದೇನಾಗಿಹೋಯ್ತು. ತಾನು ಡ್ರೈವಿಂಗ್ ಕಲಿತ ದಿನದಿಂದ ಒಂದೂ ಅಪಘಾತ ಮಾಡಿಲ್ಲ. ಈಗ…. ಈಗ ತಾನೇನು
ಮಾಡಲಿ? ಹಿಂತಿರುಗಿ ಹೋಗಿ ಏನಾಗಿದೆ ನೋಡಲೇ ? ಅವನು ಬದುಕಿದ್ದಾನೋ ಸತ್ತಿದ್ದಾನೋ? ಅವನು ಬದುಕಿದ್ದರೆ ಅವನನ್ನು ಈಗ ಉಳಿಸುವ ಹೊಣೆ ತನ್ನದಲ್ಲವೇ? ಅಥವಾ ಸತ್ತಿದ್ದರೆ ? ಅದಕ್ಕೂ ತಾನೆ ಜವಾಬ್ದಾರ ! ಒಂದು ಮನಸ್ಸು ಹೀಗೆ ಯೋಚಿಸಿದರೆ, ಇನ್ನೊಂದು ಮನಸ್ಸು ಈ ರಾತ್ರಿಯಲ್ಲಿ ನನ್ನ ಕಾರಿನಿಂದ ಈ ಅಪಘಾತವನ್ನು ಯಾರು ನೋಡಿರುತ್ತಾರೆ ? ಏನೂ ಆಗಿಯೇ ಇಲ್ಲವೆಂಬಂತೆ ಮನೆಗೆ ಹೋಗಿ ನಿದ್ರಿಸಿಬಿಟ್ಟರೆ ಯಾರಿಗೆ ಗೊತ್ತಾಗುತ್ತದೆ ? ಈ ರಾತ್ರಿಯಲ್ಲಿ ನಾನೇ ಅಪಘಾತ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಯಾರಿದ್ದಾರೆ ? ಎಂದು ಯೋಚಿಸುತ್ತದೆ. ಆದರೆ….ನಿಜ ನಾನು ಸೈಕಲ್ಲಿನವನಿಗೆ ಢಿಕ್ಕಿ ಹೊಡೆದುದನ್ನು ನೋಡಿದ ಸಾಕ್ಷಿಗಳ್ಯಾರೂ ಇಲ್ಲ. ಹಾಗೆಂದು ಅದು ಅಪರಾಧವೇ ಅಲ್ಲವೇ ? ಯಾವ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ನನ್ನ ಮನಸ್ಸಾಕ್ಷಿ ಇದೆಯಲ್ಲವೇ ? ಆಗ ತಾನು ಬದಕಿದ್ದರೂ ಸತ್ತಂತೆ ತಾನೇ ? ಅದಕ್ಕೆ ಬದಲು ನಾನು ಮಾಡಿದ ಈ ತಪ್ಪನ್ನು ಒಪ್ಪಿಕೊಂಡು ಬಂದುದನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಧರ್ಮವಲ್ಲವೇ? ಇಂತಹುದೇ ಮಾನವ-ದಾನವ ಚಿಂತನೆಗಳಂದ ಅವನ ಮನ ಕೆಲ ಹೊತ್ತು ಹೊಯ್ದಾಡುತ್ತದೆ.

ಕೊನೆಗೂ ಅವನ ಮನದಲ್ಲಿದ್ದ ಮಾನವ, ದಾನವನನ್ನು ಮೆಟ್ಟಿ ಗೆಲ್ಲುತ್ತಾನೆ. ಅವನು ಕಾರನ್ನು ಹಿಂತಿರುಗಿಸಿಕೊಳ್ಳುತ್ತಾನೆ. ಅವನಿಗೆ ಈಗ ಯಾವ ಭಯ, ಗೊಂದಲವೂ ಇಲ್ಲ.  ಸತ್ಯದ ಹಾದಿಯಲ್ಲಿದ್ದೇನೆ.  ಮಾಡಿದ ಪಾಪಕ್ಕೆ ತಾನೇ ಹೊಣೆ ಎಂದರಿತು ಪರಿಸ್ಥಿತಿ ಎದುರಿಸಲು ತಯಾರಾಗಿದ್ದಾನೆ. ಬಂದುದೆಲ್ಲವ ಎದುರಿಸುತ್ತೇನೆ ಎಂದುಕೊಳ್ಳುತ್ತಾನೆ. ಕಾರು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಸೈಕಲ್ ಸವಾರನ ಎದುರು ನಿಲ್ಲುತ್ತದೆ. ಅದರಿಂದ ಇಳಿದ ಇವನು ಅವಸರದಿಂದ ಅವನೆಡೆಗೆ ಸಾಗಿ ಅವನನ್ನೆತ್ತಲು ಕೈ ಮುಂದೆ ಚಾಚುತ್ತಾನೆ. ಮತ್ತು…..

ಸಖಿ, ನಿನಗೂ ದಾನವನನ್ನು ಮೆಟ್ಟಿ ಮಾನವ ಗೆದ್ದ ಯಾವುದೋ ಘಟನೆ ನೆನಪಾದಂತಿದೆ ? ನನಗೂ ಹೇಳುತ್ತೀಯ ತಾನೇ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಷ್-ಪುಲ್
Next post ಕೂಸು ಎಲ್ಲಿ ಹೋಯಿತೇ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…