ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ
ಆಕಾಶದಲ್ಲಿ ರಾರಾಜಿಸಿದ ಚಂದ್ರ
ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ
ಅವನು ಹಾಗೇ; ಒಂದೊಂದು ಮಿಥಿಗೊಂದೊಂದು ಮೋಡು,
ಕ್ಷಣಕ್ಷಣಕ್ಕೊಂದು ಮೋಡಿ,
ಇಂದು ಇವನಿಗೆ ಏನಾದರೂ ಆಗಿರಬಹುದು ಜಾಡ್ಯ
ಎಂದಂದುಕೊಳ್ಳಬೇಡಿ ಅಂಥದ್ದೇನಿಲ್ಲ ಇಂದು ನಷ್ಟಪಾಡ್ಯ.
*****