[ವಂಗ “ಗೀತಾಂಜಲಿ”ಯಲ್ಲಿ ೮೭ನೆಯ ಗೀತನಾದ “ಛಿನ್ನ ಕರೊ ಲಾಓ ಹೆ ಮೋರ ಆರ್‌ ಬಿಲಂಬ ನಯ್‌” ಎಂಬುದರ ಕನ್ನಡ ರೂಪವು] ತಡವೇಕೆ ತಡವೇಕೆ? ಈ ಹೂವ ಕೊಯ್ದುಕೊಳ್ಳೈ! ಹುಡಿಗೂಡಿ ಹೋದೀತು ಎಂಬ ಈ ಭಯವ ತಳ್ಳೈ! ನಿನ್ನ ಮಾಲೆಯಲಿ ಈ ಹೂವಿಗೊಂದಿನಿತು ಸ್ಥಲವು ಇನ್ನು ದೊರೆಯಲಿ ಬಿಡಲಿ- ದೇವ ನನಗ...

ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...

ಬದುಕೆಂದರೆ… ಹೀಗೇ… ಬಳ್ಳಾರಿ ಬಿಸಿಲಿನಾ ಹಾಗೇ… ‘ಉಸ್ಸೆಪ್ಪಾ’,,, ಎಂದರೂ, ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು! ಝಣ ಝಣ… ಹಲಗೆ ಬಡಿತದ, ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು! ಮೈಮನ ಹಾವಿನಂಗೆ, ಮುಲು ಮುಲು ಹರಿದಾಡುವ, ...

ಸೂರ್ಯ ಥರ ನಿನಗೆ ಮನ್ನಣೆ ಸಿಗಬೇಕೆಂದರೆ ಈ ನಿನ್ನ ಕ್ಷಯ, ನಿಧಾನ ವೃದ್ಧಿಯ ರೋಗ ವಾಸಿ ಮಾಡಿಕೊಳ್ಳಲು ಹುಡುಕು ಯಾವುದಾದರೂ ಔಷಧ ಪ್ರಯೋಗ ಆಗಿಬಿಡು ದಿನವೂ ನೀನು ಹುಣ್ಣಿಮೆಯ ಪೂರ್ಣಚಂದ್ರ, ಆಗ ಎಲ್ಲರೂ ಹಾಡಿ ಹೊಗಳುತ್ತಾರೆ ಇಂದ್ರ, ಚಂದ್ರ, ದೇವೇಂದ್...

ವಿಚಾರಗಳ ಕುರಿಮುಂದೆಯ ಕಾವಲು ನಿಂತ ಕುರುಬನಂತೆ, ಗುಂಪು ತಪ್ಪಿಸಿ ಹೋಗುವ ಗುರಿಗಳ ನಾಲಗೆಚಾಚಿಕೊಂಡು ಕಾಯುವ ನಾಯಿಯಂತೆ, ಮಣ್ಣಿನ ಬಟ್ಟೆಗಳನುಟ್ಟು ಮಣ್ಣಗೊಂಬೆಯಂತೆ ನಿಂತಿರುವ, ಪ್ರಾಚೀನ ಪಳೆಯುಳಿಕೆಯಂತಿದ್ದರೂ ರಾಕೆಟ್ಟುಗಳ ಅರ್ವಾಚೀನದೋಟವ ನಿಯಂತ...

ಗಂಡುಮೆಟ್ಟಿನ ನಾಡು ಲಲಿತಕಲೆಗಳ ಬೀಡು ಎಂದೇ ಹೆಸರಾಗಿರುವ ಚಾರಿತ್ರಿಕ ಚಿತ್ರದುರ್ಗ ನಾಟಕರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿ ತನ್ನುದರದಲ್ಲಿ ಬರೀ ಚರಿತ್ರೆಯ ಕನಕವಷ್ಟೇ ಅಲ್ಲ ಕಲಾರತ್ನಗಳೂ ತುಂಬಿವೆ ಎಂಬುದನ್ನು ಸಾಬೀತು ಪಡಿಸಿದೆ. ರಂಗ ದಿಗ...

ಶ್ರೀಮಾನ್ ಬೇಂದ್ರೆಯವರಿಂದ ತಂಗಿ ಜಾನಕಿ ನಿನ್ನ ವೈದೇಹದೊಲವಿನಲಿ ಓಲೆ ಬಂದಿತು ಒಂದು ಇತ್ತತೇಲಿ ಯಾರಿಗಾರೋ ಎನುವ ನಾಸ್ತಿಕತೆಯನು ನೂಕಿ ದಾಟಿ ದಿಕ್ಕಾಲಗಳ ಸುತ್ತು ಬೇಲಿ ಕವಿಯು ಮಾನಸಪುತ್ರ ಅವನು ಆಗಸದೇಹಿ ಮಾತಿನಲೆ ಮೂಡುವಾ ಭಾವಜೀವಿ ಮೈಯಾಚೆ ಉಸಿ...

ಮರೆತು ಬಿಡು ಇರುವ ನೆನಪುಗಳನೆಲ್ಲಾ ಗಂಟುಕಟ್ಟಿ ಎಸೆದು ಬಿಡು ತೇಲಿ ಹೋಗಲಿ ಸಪ್ತ ಸಮುದ್ರಗಳ ತೀರ ದಾಟಿ ತೂರಿ ಬಿಡು ಬರೆದ ಓಲೆಯನೆಲ್ಲಾ ಹರಿದು ಚೂರು ಚೂರು ಹಾರಿಹೋಗಲಿ ಊರು ಕೇರಿಗಳ ಎಲ್ಲೆ ಮೀರಿ ಸುಟ್ಬುಬಿಡು ಕಳೆದ ದಿನಗಳನೆಲ್ಲಾ ಒಟ್ಟು ಕಟ್ಟಿಗೆ...

ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ ಇದೆ, ಬುದ್ಧಿಯೆ ಅರಿವಿನ ಒ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...