ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ ನೋವಿನ ಕಬ್ಬ ಚಟದ ಚಟ್ಟಕೆ ಬಿದ್ದೆ ಅಗ್ನಿರುದ್ರಾ ॥ ಎಲ್ಲಿ ...

“ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?” “ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ ಮಕ್ಳಂತೆ.” “ಮತ್ಯಾಕ್ ಅವು ನಮ್ಹಾಗೇನೇ ಮ...

ಅವನೊಬ್ಬ ಸೂರ್ಯನ್ನ ಬಿಟ್ಟರೆ ಇನ್ನೊಬ್ಬ ಪ್ರತ್ಯಕ್ಷ ದೇವರೂ ಅಂದ್ರೆ ನಾನೇ ಚಂದ್ರ ನನ್ನ ಮುಂದೆ ದೇವೇಂದ್ರ ಗೀವೇಂದ್ರ ಎಲ್ಲ ಪುಟಗೋಸಿ ಸೀಮೇಎಣ್ಣೆ ಲಾಂದ್ರ. *****...

ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ! ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!!  ||ಪಲ್ಲ|| ಹಾಡೊಂದು ತನ್ನಪ್ಪ ಮರೆತಽದೊ, ಅವಳಮ್ಮ ಹರೆಯದಲಗಲಿಽದೊ! ‘ಕಿವಿನಿಗುರಿ ಕಂಕೆರಳೀ ನಾ ಕೇಳಿ, ಹೆಣ್ ಬಾಳ ಕಂಡು ಸೋಜಿಗ ತಾಳಿ!  ||ಬಯ|| ತಾನೊರ್ವ ಕೊಡಗೂಸು ಎಂದಽಳು...

ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗು ಕಾಣಬಾರದು. ಮಾರೆನೆಂದರೆ ಮಾನವರಿಗೆ ಸಾಧ್ಯವಾಗದು. ಸಾವಿರಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶರಣರಿಗೆ ಸಾಧ್ಯವಾಯಿತ್ತು. ಆ ಮಾಣಿಕವ ಹೇಗೆ ಬೆಲೆಮಾಡಿ ಮಾರಿದರೆಂದರೆ, ಕಾಣಬಾರದ ಕದಳ...

ದುರಾದೃಷ್ಟ ಅದೃಷ್ಟಗಳ ನಡುವೆ ಬೇಯುತ್ತಿರುವ ‘ಸ್ವಾತಂತ್ರ್ಯ’ ಗೋರಿ ಕಟ್ಟಕೊಳ್ಳುವ ಸ್ವಾಮಿಗಳ ಮಹಾಪೂರ, ಭೂಕಂಪಗಳಡಿ ಕೊಳೆಯುವ ಸಹನೀಯರ ಕನವರಿಕೆಯ ವೃತ್ತಪತ್ರಿಕೆಗಳ ಅಜ್ಜಿಯ ತೇಲುಗಣ್ಣು ಮಕ್ಕಳ ವರ್ಷಾಂತ್ಯ ಪರಿಣಾಮ- ಸ್ವಾತಂತ್ರ್ಯದಡಿಯಲ್ಲಿ ಸಾಯುವ...

ಕಲ್ಲನು ಕರಗಿಸಿ ಕರುಳಿನ ಕೂಗು ದಿಗಂತ ಒಡೆಯುತಿದೆ ವಿಶ್ವವ ಮುತ್ತಿದ ನೆತ್ತ ಹೊಳೆಯು ಬಾಳನೆ ಮೆಟ್ಟುತಿದೆ! ನೆಲದಲಿ ಹೋರುತ ಕಾಳನು ಕೆತ್ತಿ ರಕ್ತವ ಬೆವರಿನೊಲು ಹರಿಸುವ ದಲಿತನ ಹೊಟ್ಟೆಯು ಕಂದಿ ದೇವರ ಶಪಿಸುವುದು. “ಬಾರೈ ದೇವನೆ, ಬಾರೈ ಹೊರ...

ಪ್ರಿಯ ಸಖಿ, ಕೆಲವರಿಗೆ ತಾವು ಮಹಾನ್ ಬುದ್ಧಿವಂತರು ತಮಗಿಂತಾ ಬುದ್ಧಿವಂತರು ಈ ಪ್ರಪಂಚದಲ್ಲೇ ಇಲ್ಲ. ತಮ್ಮ ಪ್ರಚಂಡ ಬುದ್ಧಿಶಕ್ತಿಯಿಂದ ಎಲ್ಲರನ್ನೂ ಸದಾ ಮೂರ್ಖರನ್ನಾಗಿಸುತ್ತಿರಬಹುದು ಎಂಬ ಗರ್ವ ಇರುತ್ತದೆ ಇಂತಹವರನ್ನು ಕಂಡ ಅಬ್ರಹಾಂ ಲಿಂಕನ್. Y...

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ! ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....